ಕ್ಯಾಬ್, ಅಟೋ ಆಯ್ತು, ಭಾರತಕ್ಕೆ ಬಂತು ಉಬರ್ ಬೋಟ್!
ಉಬರ್ ಹೊಸ ಸೇವೆ ಆರಂಭಿಸುತ್ತಿದೆ. ಭಾರತಲ್ಲಿ ಇದೇ ಮೊದಲ ಭಾರಿಗೆ ಬೋಟ್ ಸರ್ವೀಸ್ ಆರಂಭಿಸುತ್ತಿದೆ. ಆ್ಯಪ್ ಮೂಲಕ ಈಗಾ ಕಾರು ಮಾತ್ರವಲ್ಲ ಬೋಟ್ ಕೂಡ ಬುಕ್ ಮಾಡಿ ಪ್ರಯಾಣ ಮಾಡಬುಹುದು. ಹೆಚ್ಚಿನ ವಿವರ ಇಲ್ಲಿದೆ.
ಮುಂಬೈ(ಫೆ.01): ಭಾರತದ ಪ್ರಮುಖ ನಗರಗಳಲ್ಲಿ ಆ್ಯಪ್ ಟ್ಯಾಕ್ಸಿಗಳು ಹೆಚ್ಚವೇ ಇವೆ. ಉಬರ್, ಒಲಾ ಸೇರಿದಂತೆ ಹಲವು ಆ್ಯಪ್ ಕ್ಯಾಬ್‌ಗಳು ಲಭ್ಯವಿದೆ. ಉಬರ್ ಕಂಪನಿ ಕ್ಯಾಬ್, ಆಟೋ ಬಳಿಕ ಬೋಟ್ ಸರ್ವೀಸ್ ಆರಂಭಿಸುತ್ತಿದೆ. ಇನ್ಮುಂದೆ ಆ್ಯಪ್ ಮೂಲಕ ಬೋಟ್ ಪ್ರಯಾಣ ಕೂಡ ಬುಕ್ ಮಾಡಬಹುದು.
ಇದನ್ನೂ ಓದಿ: ಶೀಘ್ರದಲ್ಲಿ ಭಾರತದ ರಸ್ತೆಗಿಳಿಯುತ್ತಿದೆ ಬ್ರಿಟೀಷ್ ಕಾರು!
ಫ್ರಾನ್ಸ್, ಕ್ರೋವೇಶಿಯಾ ಸೇರಿದಂತೆ ಇತರ ದೇಶಗಳಲ್ಲಿ ಉಬರ್ ಬೋಟ್ ಸರ್ವೀಸ್ ಲಭ್ಯವಿದೆ. ಇದೀಗ ಮೊದಲ ಭಾರಿಗೆ ಭಾರತದಲ್ಲಿ ಬೋಟ್ ಸರ್ವೀಸ್ ಆರಂಭಿಸುತ್ತಿದೆ. ಇದಕ್ಕಾಗಿ ಮುಂಬೈ ನಗರವನ್ನ ಆಯ್ಕೆ ಮಾಡಿಕೊಂಡಿದೆ. ಮುಂಬೈನಲ್ಲಿ ಫಲಿತಾಂಶ ಆಧರಿಸಿ ಭಾರತದ ಇತರ ನಗರಗಳಿಗೆ ವಿಸ್ತರಿಸುವ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ಡ್ರೈವ್ ಮಾಡುವಾಗ ಧೂಮಪಾನ - ಮೊಬೈಲ್ ಫೋನ್‌ನಷ್ಟೇ ಅಪಾಯಕಾರಿ!
ಮುಂಬೈನ ಗೇಟ್ ವೇ ಆಫ್ ಇಂಡಿಯಾದಿಂದ ಎಲಿಫಾಂಟಾ ಕೇವ್ಸ್, ಮಂದ್ವಾ ಜೆಟ್ಟಿ ಮಾರ್ಗದಲ್ಲಿ ಉಬರ್ ಬೋಟ್ ಸರ್ವೀಸ್ ನೀಡಲಿದೆ. ಇನ್ನು ಪ್ರತಿ ಬೋಟ್ ಬುಕಿಂಗ್ ಬೆಲೆ 5,700 ರಿಂದ 9,500 ರೂಪಾಯಿ. 6 ರಿಂದ 10 ಪ್ರಯಾಣಿಕರು ಬೋಟ್‌ನಲ್ಲಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ.