ಬೆಂಗಳೂರು(ಜ.31):  TVS ಮೋಟರ್  ಫ್ಯಾಕ್ಟರಿ ರೇಸಿಂಗ್ ವಿಭಾಗವಾದ TVS ರೇಸಿಂಗ್ ಇದೀಗ  ಲೇಡಿಸ್ ಒನ್ ಮೇಕ್ ಚಾಂಪಿಯನ್‍ಶಿಪ್‍ಗೆ ಆಕಾಂಕ್ಷಿ ಮಹಿಳೆಯರನ್ನು ಆಹ್ವಾನಿಸಿದೆ. 2019ನೇ ಆವೃತ್ತಿಯ ಪ್ರತಿಷ್ಠಿತ ಚಾಂಪಿಯನ್‌ಶಿಪ್ ಸ್ಪರ್ಧಿಗಳ ಆಯ್ಕೆ ಫೆಬ್ರವರಿ 9, 2019ರಂದು ನಗರದ ಹೆಣ್ಣೂರಿನಲ್ಲಿರುವ ಮೆಕೊ ಕಾರ್ಟೋಪಿಯಾದಲ್ಲಿ ನಡೆಯಲಿದೆ. 

ಇದನ್ನೂ ಓದಿ: ಬಜಾಜ್ ಪಲ್ಸಾರ್‌ಗೆ ಗುಡ್ ಬೈ- TVS ಅಪಾಚೆ ಮೊರೆ ಹೋದ ಬೆಂಗಳೂರು ಪೊಲೀಸ್!

ಲೇಡಿಸ್ ಓನ್ ಮೇಕ್ ಚಾಂಪಿಯನ್‌ಶಿಪ್‌ನಲ್ಲಿ ಆಯ್ಕೆಯಾಗೋ ಮಹಿಳಾ ರೇಸರ್‌ಗಳಿಗೆ ಟಿವಿಎಸ್ ರೇಸಿಂಗ್‍ನ ರಾಷ್ಟ್ರೀಯ ಚಾಂಪಿಯನ್ನರು ಒಂದು ದಿನದ  ತರಬೇತಿ ಶಿಬಿರವನ್ನು ನಡೆಸಿಕೊಡಲಿದ್ದಾರೆ. ಈ ಮೂಲಕ ಮಹಿಳಾ ರೇಸರ್‌ಗಳನ್ನ ಟಿವಿಎಸ್ ಅಪಾಚೆ ಟಿಆರ್‍ಎಸ್ 200  ರೇಸ್ ಎರಡನೇ ಆವೃತ್ತಿಗೆ ಸಜ್ಜುಗೊಳಿಸಲಿದ್ದಾರೆ.

ಅತ್ಯುತ್ತಮ ಲ್ಯಾಪ್ ಸಮಯ, ದೈಹಿಕ ಕ್ಷಮತೆ ಮತ್ತು ರೇಸಿಂಗ್ ಸಾಮಥ್ರ್ಯದ ಆಧಾರದಲ್ಲಿ ಅಗ್ರ 15 ಸವಾರರನ್ನು ಆಯ್ಕೆ ಮಾಡಲಾಗುವುದು. ಅಂತಿಮ ಸುತ್ತಿನ ಆಯ್ಕೆಯು ಚೆನ್ನೈನಲ್ಲಿರುವ, ಮದ್ರಾಸ್ ಮೋಟರ್ ರೇಸ್ ಟ್ರ್ಯಾಕ್‍ನಲ್ಲಿ 2019ರ ಮೇ 4ರಂದು ನಡೆಯಲಿದೆ.   

ಇದನ್ನೂ ಓದಿ:  ಎಬಿಎಸ್, 114 ಸ್ಪೀಡ್- ಟಿವಿಎಸ್ ಅಪಾಚೆ RTR 180 ಬಿಡುಗಡೆ!
"ಸತತ ನಾಲ್ಕು ಆವೃತ್ತಿಯ ಟಿವಿಎಸ್ ಲೇಡಿಸ್ ಒನ್ ಮೇಕ್ ಚಾಂಪಿಯನ್‍ಶಿಪ್ಪನ್ನು ಸತತವಾಗಿ ಆಯೋಜಿಸುವ ಮೂಲಕ ಮಹಿಳಾ ರೇಸಿಂಗ್‍ಗೆ ಬದ್ಧರಾಗಿರುವ ದೇಶದ ಏಕೈಕ ಉತ್ಪಾದಕ ಕಂಪನಿ ನಮ್ಮದು. ಪ್ರತಿಭಾವಂತ ಮಹಿಳೆಯರನ್ನು ಸೂಕ್ತ ತರಬೇತಿ ನೀಡುವ ವಿನೂತನ ಉಪಕ್ರಮವನ್ನು ನಾವು ಕೈಗೊಂಡಿದ್ದೇವೆ ಎಂದು  ಟಿವಿಎಸ್ ರೇಸಿಂಗ್‍ನ ಟೀಂ ಮ್ಯಾನೇಜರ್ ಬಿ.ಸೆಲ್ವರಾಜ್ ಹೇಳಿದ್ದಾರೆ.

ಆಯ್ಕೆಯಾಗೋ ತಂಡವು, ತರಬೇತಿ ಪಡೆದ ಟಿವಿಎಸ್ ಅಪಾಚೆ RTR 200 4 ಆವೃತ್ತಿ 2.0. ರೇಸ್‍ನ 5 ಸುತ್ತುಗಳಲ್ಲಿ ಚಾಂಪಿಯನ್‍ಶಿಪ್‍ಗಾಗಿ ಸ್ಪರ್ಧಿಸಲಿದೆ. ಚೆನ್ನೈನಲ್ಲಿ ಅಂತಿಮ ಸುತ್ತಿನ ಆಯ್ಕೆ ನಡೆದ ಬಳಿಕ, ರೇಸರ್‌ಗಳಿಗೆ ರಾಷ್ಟ್ರಮಟ್ಟದ ಚಾಂಪಿಯನ್ ಸವಾರರಿಂದ ಟಿವಿಎಸ್ ರೇಸಿಂಗ್‍ಗೆ ನಿರ್ದಿಷ್ಟವಾದ ತರಬೇತಿಯನ್ನು ನೀಡಲಾಗುತ್ತದೆ. ಈ ತರಬೇತಿಯಲ್ಲಿ ದೈಹಿಕ ಕ್ಷಮತೆಯನ್ನು ಸುಧಾರಿಸಲು ಮತ್ತು ರೇಸಿಂಗ್ ಕೌಶಲಗಳನ್ನು ಬೆಳೆಸಿಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಆಯ್ಕೆಯಾದ ಸ್ಪರ್ಧಿಗಳು 2019ರ ಜೂನ್‍ನಲ್ಲಿ ನಡೆಯುವ ರಾಷ್ಟ್ರಮಟ್ಟದ ಮೋಟರ್ ಸೈಕಲ್ ರೇಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸೋ ಅವಕಾಶ ಸಿಗಲಿದೆ. ಆಸಕ್ತರು ಟಿವಿಎಸ್ ರೇಸಿಂಗ್ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: ಹೊಸ ವಿನ್ಯಾಸ-ಕಡಿಮೆ ಬೆಲೆ- ಟಿವಿಎಸ್ ರೆಡಿಯೊನ್ ಬೈಕ್!

ರೇಸ್ ಆಯ್ಕೆ ದಿನಾಂಕ: 9ನೇ ಫೆಬ್ರುವರಿ 2019
ಸ್ಥಳ: ಮೆಕೊಕಾರ್ಟೋಪಿಯಾ, ಹೆಣ್ಣೂರು, ಬೆಂಗಳೂರು
ವರದಿ ಮಾಡಿಕೊಳ್ಳುವ ಸಮಯ: ಬೆಳಿಗ್ಗೆ 8
ಪ್ರವೇಶ ಶುಲ್ಕ: ರೂಪಾಯಿ. 1000