Asianet Suvarna News Asianet Suvarna News

ಹಬ್ಬದ ಉಡುಗೊರೆ: ಬಂಪರ್ ಆಫರ್ ಘೋಷಿಸಿದ ಟಿವಿಎಸ್

ಟಿವಿಎಸ್ ಕಂಪನಿ ಇದೀಗ  ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಟಿವಿಎಸ್ ಬೈಕ್, ಸ್ಕೂಟರ್‌ಗಳಿಗೆ ಹಬ್ಬದ ಆಫರ್ ನೀಡಿದೆ. ಟಿವಿಎಸ್‌ನ  ಯಾವೆಲ್ಲಾ ವಾಹನಗಳಿಗೆ ಆಫರ್ ನೀಡಲಾಗಿದೆ? ಇಲ್ಲಿದೆ ವಿವರ.

TVS  introduced offers on its entire portfolio for this festive season
Author
Bengaluru, First Published Oct 15, 2018, 8:50 PM IST
  • Facebook
  • Twitter
  • Whatsapp

ಚೆನ್ನೈ(ಅ.15): ಹಬ್ಬದ ಪ್ರಯುಕ್ತ ಬಹುತೇಕ ಮೋಟಾರ್ಸ್ ಕಂಪೆನಿಗಳು ಭರ್ಜರಿ ಆಫರ್ ಘೋಷಿಸಿದೆ. ಈ ಮೂಲಕ ತಮ್ಮ ಮಾರಾಟದಲ್ಲಿ ದಾಖಲೆ ಬರೆಯಲು ರೆಡಿಯಾಗಿದೆ. ಇದೀಗ ಟಿವಿಎಸ್ ಕಂಪೆನಿ ಕೂಡ ತಮ್ಮ ಬೈಕ್ ಹಾಗೂ ಸ್ಕೂಟರ್‌ಗಳ ಮೇಲೆ ಭರ್ಜರಿ ಆಫರ್ ಘೋಷಿಸಿದೆ.

ಟಿವಿಎಸ್ ಕಂಪನಿಯ ನೂತನ ಎನ್‌ಟಾರ್ಕ್ ಹೊರತು ಪಡಿಸಿ ಉಳಿದೆಲ್ಲಾ ದ್ವಿ ಚಕ್ರ ವಾಹನಗಳಿಗೆ ಆಫರ್ ಘೋಷಿಸಿದೆ. ಇತ್ತೀಚೆಗೆ ಬಿಡುಗಡೆಯಾದ ನೂತನ ಟಿವಿಎಸ್ ವೆಗೋ ಖರೀದಿಸೋ ಗ್ರಾಹಕರಿಗೂ ಆಕರ್ಷಕ ಆಫರ್ ನೀಡಿದೆ.

ಅಪಾಚೆ RR310,RTR 160 4V, RTR200 4V 2.0 ಬೈಕ್‌:  ಈ ಬೈಕ್‌ಗಳನ್ನ ಖರೀದಿಸೋ ಗ್ರಾಹಕರಿಗೆ ಡೌನ್‌ಪೇಮೆಂಟ್ 16,999 ರೂಪಾಯಿಂದ ಆರಂಭವಾಗಲಿದೆ. ಬಡ್ಡಿ ದರ 3.99%, ಇಎಂಐ 2018 ರೂಪಾಯಿ ಆಫರ್ ನೀಡಿದೆ. ಈ ಮೂಲಕ 9200 ರೂಪಾಯಿ ಉಳಿತಾಯ ಮಾಡಬಹುದಾಗಿದೆ. ಯಾವುದೇ ಪ್ರೊಸೆಸಿಂಗ್ ಫೀ ಇರುವುದಿಲ್ಲ.

ಟಿವಿಎಸ್ ವಿಕ್ಟರ್:   ಡೌನ್‌ಪೇಮೆಂಟ್ 14,999, ಬಡ್ಡಿ ದರ 3.99%, ಇಎಂಐ 2018 ರೂಪಾಯಿ, ಯಾವುದೇ ಪ್ರೊಸೆಸಿಂಗ್ ಫೀ ಇರುವುದಿಲ್ಲ. ಹೀಗಾಗಿ ಒಟ್ಟು 9200 ರೂಪಾಯಿ ಉಳಿತಾಯ ಮಾಡಬಹುದಾಗಿದೆ.

ಟಿವಿಎಸ್ ಸ್ಟಾರ್ ಸಿಟಿ: ಡೌನ್‌ಪೇಮೆಂಟ್ 7444 ರೂಪಾಯಿ, 3.99% ಬಡ್ಡಿ ದರ, ಇನ್ಶುರೆನ್ಸ್‌ನಲ್ಲಿ 1500 ರೂಪಾಯಿ ಕಡಿತ(ಷರತ್ತುಗಳು ಅನ್ವಯ).

ಟಿವಿಎಸ್ ಸ್ಪೋರ್ಟ್:  ಡೌನ್‌ಪೇಮೆಂಟ್ 4999 ರೂಪಾಯಿ, 100% ಲೋನ್ ಸೌಲಭ್ಯ(ಷರತ್ತುಗಳು ಅನ್ವಯ) ಇನ್ಶುರೆನ್ಸ್‌ನಲ್ಲಿ 1500 ರೂಪಾಯಿ ಕಡಿತ(ಷರತ್ತುಗಳು ಅನ್ವಯ).

ಜುಪಿಟರ್: ಡೌನ್‌ಪೇಮೆಂಟ್ 7444 ರೂಪಾಯಿ, 3.99% ಬಡ್ಡಿ ದರ, ಸರ್ಕಾರಿ ಉದ್ಯೋಗಿಗಳಿಗೆ ಶೇಕಡಾ 100ರಷ್ಟು ಲೋನ್ ಸೌಲಭ್ಯ, ಯಾವುದೇ ಪ್ರೋಸೆಸಿಂಗ್ ಫೀ ಇರುವುದಿಲ್ಲ.

ಸ್ಕೂಟಿ ಜೆಸ್ಟ್ 110: ಡೌನ್‌ಪೇಮೆಂಟ್ 6999 ರೂಪಾಯಿ, 0% ಬಡ್ಡಿ ದರ, 4800 ರೂಪಾಯಿ ಉಳಿತಾಯ.

ಸ್ಕೂಟಿ ಪೆಪ್: ಡೌನ್‌ಪೇಮೆಂಟ್ 5999 ರೂಪಾಯಿ,  0% ಬಡ್ಡಿ ದರ, 4000 ರೂಪಾಯಿ ಉಳಿತಾಯ.

ವೆಗೊ : ಡೌನ್‌ಪೇಮೆಂಟ್ 6999 ರೂಪಾಯಿ, ಸರ್ಕಾರಿ ಉದ್ಯೋಗಿಗಳಿಗೆ 100% ಲೋನ್ ಸೌಲಭ್ಯ, 1500 ಇನ್ಶುರೆನ್ಸ್ ಡಿಸ್ಕೌಂಟ್ (ಷರತ್ತುಗಳು ಅನ್ವಯ)

XL100: ಡೌನ್‌ಪೇಮೆಂಟ್ 3333 ರೂಪಾಯಿ ಮಾತ್ರ.
 

Follow Us:
Download App:
  • android
  • ios