Asianet Suvarna News Asianet Suvarna News

ರಸ್ತೆ ನಿಯಮ ಉಲ್ಲಂಘನೆ- ಕಾರು ಮಾಲೀಕನಿಗೆ 1 ರೂ.ಲಕ್ಷ ದಂಡ!

ಪೊಲೀಸರ ಇಲ್ಲ ಎಂದುಕೊಂಡು ಸಿಗ್ನಲ್ ಜಂಪ್, ಯೂ ಟರ್ನ್, ಒನ್ ವೇಗಳಲ್ಲಿ ಸಂಚರಿಸಿದ ಕಾರು ಮಾಲೀಕ ಇನ್ನೆಂದು ನಿಯಮ ಉಲ್ಲಂಘಿಸಲ್ಲ ಎಂದು ಶಪಥ ಮಾಡಿದ್ದಾನೆ. ಇದಕ್ಕೆ ಕಾರಣ ಪೊಲೀಸರು ಹಾಕಿದ ದಂಡ. ಇಲ್ಲಿದೆ ಬರೊಬ್ಬರಿ 1 ಲಕ್ಷ ರೂಪಾಯಿ ದಂಡದ ವಿವರ ಇಲ್ಲಿದೆ.
 

Traffic rules break 1 lakh rupee fined for toyota etios owner
Author
Bengaluru, First Published May 13, 2019, 7:15 PM IST

ಚೆನ್ನೈ(ಮೇ.13): ರಸ್ತೆ ನಿಯಮ ಪಾಲನೆಗೆ ಇದೀಗ ಕಟ್ಟು ನಿಟ್ಟಿನ ಕ್ರಮಗಳು ಜಾರಿಯಲ್ಲಿದೆ. ಸಿಗ್ನಲ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಹೀಗಾಗಿ ಟ್ರಾಫಿಕ್ ಪೊಲೀಸರು ಕ್ಯಾಮರ ಸಹಾಯದಿಂದ ರಸ್ತೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ. ಹೀಗೆ ಸಿಗ್ನಲ್ ಜಂಪ್ ಮಾಡಿ ಮುಂದೆ ಸಾಗಿದ ಟೊಯೊಟಾ ಇಟಿಯೋಸ್ ಕಾರನ್ನು ಪೊಲೀಸರು ನಿಲ್ಲಿಸಿ ಬರೊಬ್ಬರಿ 1 ಲಕ್ಷ ರೂಪಾಯಿ ದಂಡ ಹಾಕಿದ ಘಟನೆ ನಡೆದಿದೆ.

ಇದನ್ನೂ ಓದಿ:ಆಟಿಕೆ ಕಾರಿನಲ್ಲಿ ಮುಖ್ಯ ರಸ್ತೆಗೆ ಬಂದ ಪುಟಾಣಿ- ಕಕ್ಕಾಬಿಕ್ಕಿಯಾದ ಪೊಲೀಸ್!

ನಿಯಮ ಉಲ್ಲಂಘಿಸಿ ಮುಂದೆ ಸಾಗಿದಾಗ ಕಾದು ಕುಳಿತಿದ್ದ ಪೊಲೀಸರು ಇಟಿಯೋಸ್ ಕಾರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಕಾರಿನ ನಂಬರ್ ನಮೂದಿಸಿದಾಗ ಬರೋಬ್ಬರಿ 76 ಬಾರಿ ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದೆ. ಇದರ ಒಟ್ಟು ಮೊತ್ತ 96,830 ರೂಪಾಯಿ. 

ಇದನ್ನೂ ಓದಿ:ಶಾಲಾ ವಾಹನ ಹಾಗೂ ಮಕ್ಕಳ ಸುರಕ್ಷತೆ- ಶೀಘ್ರದಲ್ಲೇ ಹೊಸ ನೀತಿ!

ನಿಮಯ ಉಲ್ಲಂಘನೆ ಸಂಖ್ಯೆ ಕೇಳಿದಾಗ ಕಾರು ಮಾಲೀಕನಿಗೆ ಯಾವುದೇ ಅಚ್ಚರಿಯಾಗಲಿಲ್ಲ.  ಕಾರು ಇಟಿಯೊಸ್ ಮಾಲೀಕ ಇದಕ್ಕಿಂತ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದ್ದ. ಹಲವು ಕಡೆ ಕ್ಯಾಮರ ಇಲ್ಲದ ಕಾರಣ ಬಚಾವ್ ಆಗಿದ್ದ. ಆದರೆ 76 ಪ್ರಕರಣದ ಒಟ್ಟು ಮೊತ್ತ   96,830 ರೂಪಾಯಿ ಎಂದಾಗ ಕಂಗಾಲಾಗಿ ಹೋದ. ಇಷ್ಟೇ ಈ ಮೊತ್ತ ಕಟ್ಟಲು ತನ್ನಿಂದ ಸಾಧ್ಯವಿಲ್ಲ ಎಂದಿದ್ದಾನೆ.

ಇದನ್ನೂ ಓದಿ:ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಯಾಕೆ?-ಇಲ್ಲಿದೆ ವೀಡಿಯೋ!

ತಕ್ಷಣವೇ ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ದಂಡ ಪಾವತಿಸಿ ಕಾರುನ್ನ ವಾಪಾಸ್ ಪಡೆದ ಮಾಲೀಕ ಇನ್ನೆಂದು ನಿಯಮ ಉಲ್ಲಂಘಿಸಿವುದಿಲ್ಲ ಎಂದು ಶಪಥ ಮಾಡಿದ್ದಾನೆ. ಈ ರೀತಿ ಲಕ್ಷ ಮೊತ್ತ ದಂಡ ಹಾಕಿರುವುದು ಇದೇ ಮೊದಲಲ್ಲ. ಹೈದರಾಬಾದ್ ಪೊಲೀಸರು ವರ್ಷಗಳ ಹಿಂದೆ ಹೊಂಡಾ ಜಾಝ್ ಕಾರು ನಿಲ್ಲಿಸಿ ಪರಿಶೀಲಿಸಿದಾಗ ಬರೋಬ್ಬರಿ 127 ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ 1.82 ಲಕ್ಷ ರೂಪಾಯಿ ದಂಡ ಹಾಕಿಲಾಗಿತ್ತು.

Follow Us:
Download App:
  • android
  • ios