ನವದೆಹಲಿ(ಸೆ.05):ಕೊರೋನಾ ಹಾಗೂ ಲಾಕ್‌ಡೌನ್ ಸಮಯದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ ಭಾರತೀಯ ಆಟೋಮೇಕರ್ ಇದೀಗ ಚೇತರಿಸಿಕೊಳ್ಳುತ್ತಿದೆ. ದಸರಾ ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಪ್ರತಿ ವರ್ಷದ ಹಬ್ಬದ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ವಾಹನ ಮಾರಾಟವಾಗಿದೆ. ಈ ಬಾರಿ ನಷ್ಟ ಸರಿದೂಗಿಸಲು ಆಟೋಮೊಬೈಲ್ ಕಂನಿಗಳ ಮುಂದಾಗಿದ್ದು, ಹಚ್ಚುವರಿ ಫೀಚರ್ಸ್ ಮೂಲಕ ಕಾರು ಬಿಡುಗಡೆ ಮಾಡುತ್ತಿದೆ. ಇದೀಗ ಟೊಯೋಟಾ ತನ್ನ ಯಾರಿಸ್ ಲಿಮಿಟೆಡ ಎಡಿಶನ್ ಬ್ಲಾಕ್ ಕಾರು ಅನಾವರಣ ಮಾಡಿದೆ.

11 ಸಾವಿರ ರೂಪಾಯಿಗೆ ಬುಕ್ ಮಾಡಿ ನೂತನ ಟೊಯೋಟಾ ಅರ್ಬನ್ ಕ್ರೂಸರ್ SUV!

ಸ್ಪೆಷಲ್ ಎಡಿಶನ್ ಕಾರು ಯಾರಿಸ್ ಕಾರು, ಬ್ಲಾಕ್ ಗ್ರಿಲ್ ಹೊಂದಿದೆ. ಫ್ರಂಟ್ ಹಾಗೂ ರೇರ್ ಬಂಪರ್ ಹಾಗೂ ಬಾನೆಟ್ ಕೂಡ ಬ್ಲಾಕ್ ಕಲರ್ ನೀಡಲಾಗಿದ್ದು, ಕಾರಿನ ಅಂದ ಹೆಚ್ಚಿಸಿದೆ. ORVMs, ಫಾಗ್ ಲ್ಯಾಂಪ್ಸ್, ಕ್ರೋಮ್ ಗಾರ್ನಿಶ್ ಹೆಡ್‌ಲ್ಯಾಂಪ್ಸ್ ಹೊಂದಿದೆ. ಬ್ಲಾಕ್ ಎಡಿಶನ್ ಕಾರಿನಲ್ಲಿ ಮರೂನ್ ಕಲರ್ ಬಾಡಿ ಕೂಡ ಲಭ್ಯವಿದೆ. 

ಟೊಯೋಟಾ ಫಾರ್ಚುನರ್ ಸ್ಪೋರ್ಟಿ TRD ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!.

ಸದ್ಯ ಟೊಯೋಟಾ ಇಂಡಿಯಾ ಕಾರಿನ ಒಳಭಾಗದ ಚಿತ್ರ, ಇಂಟೀರಿಯರ್ ಕುರಿತು ಮಾಹಿತಿ ನೀಡಿಲ್ಲ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.  ABS, EBD, ಬ್ರೇಕ್ ಅಸಿಸ್ಟ್, ಡಿಸ್ಕ್ ಬ್ರೇಕ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸಿಸ್ಟ್, ಟೈಯರ್ ಪ್ರೆಶರ್ ಮಾನಿಟರ್ ಸಿಸ್ಟಮ್ ಸೇರಿದಂತೆ ಹಲವು ಫೀಚರ್ಸ್ ಸೇರಿಲಾಗಿದೆ.

ಎಂಜಿನ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. 1.5 ಲೀಟರ್, 4 ಸಿಲಿಂಡರ್, ಡ್ಯುಯೆಲ್ VVT-i ಪೆಟ್ರೋಲ್ ಎಂಜಿನ್ ಹೊಂದಿದೆ. 106 bhp ವರ್ ಹಾಗೂ  140 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 6 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹಾಗೂ 7 ಸ್ಪೀಡ್ CVT ಟ್ರಾನ್ಸ್‌ಮಿಶನ್ ಹೊಂದಿದೆ.