ಸ್ವಾತಂತ್ರ್ಯ ದಿನಾಚರಣೆ: ಲೇಹ್, ಲಡಾಖ್‌ ಯೋಧರಿಗೆ ವಿಶೇಷ ಗೌರವ ಸಲ್ಲಿಸಿದ ಟೊಯೋಟಾ ಕಿರ್ಲೋಸ್ಕರ್!

  • ಲೇಹ್ ಮತ್ತು ಲಡಾಕ್ ನಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರ ಸೇವೆಗೆ ಗೌರವ ಸಲ್ಲಿಕೆ
  • ಯೋಧರಿಗೆ ಪ್ರೀತಿ ಮತ್ತು ಶುಭಾಶಯಗಳ ಸಂದೇಶವನ್ನು ಕಳುಹಿಸಿದ ಟೊಯೋಟಾ ಕಿರ್ಲೋಸ್ಕರ್
  • ನೌಕರರು ಮತ್ತು ಅವರ ಕುಟುಂಬಗಳು ಸ್ವತಃ ತಯಾರಿಸಿದ ಪರಿಸರ ಸ್ನೇಹಿ ರಾಖಿಗಳು ಮತ್ತು ಶುಭಾಶಯ ಪತ್ರ ರವಾನೆ
Toyota Kirloskar Motor salutes the Indian Armed Forces through their ICARE initiative

ಬೆಂಗಳೂರು(ಆ.15) : 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷ ಮತ್ತು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ (ಟಿಕೆಎಂ) ತನ್ನ 16ನೇ ಐಕೇರ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಕೊರೋನಾ ವೈರಸ್ ಮಹಾಮಾರಿ ಐಕೇರ್ ಸದಸ್ಯರ ಉತ್ಸಾಹವನ್ನು ಕುಂದಿಸಲಿಲ್ಲ. 100ಕ್ಕೂ ಹೆಚ್ಚು ಟಿಕೆಂ ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸ್ವಾತಂತ್ರ್ಯ ದಿನದಂದು ವರ್ಚುಯಲ್ ವೇದಿಕೆಯ ಮೂಲಕ ಒಗ್ಗೂಡಿ ವಿಶೇಷವಾಗಿ ಆಚರಿಸಿದ್ದಾರೆ. ಲೇಹ್ ಮತ್ತು ಲಡಾಕ್ ನಲ್ಲಿ ಕಾವಲು ಕಾಯುತ್ತಿರುವ ಭಾರತೀಯ ಸೈನಿಕರ ಸೇವೆಗೆ ಗೌರವ ಸಲ್ಲಿಸಿದರು. ವರ್ಚುಯಲ್ ಕಾರ್ಯಕ್ರಮದದಲ್ಲಿ ಗೌರವಾನ್ವಿತ ಅತಿಥಿಯಾಗಿ ಉಪನ್ಯಾಸ ನೀಡಿದ 1999 ರಲ್ಲಿ ಕಾರ್ಗಿಲ್ ಯುದ್ಧದ ಭಾಗವಾಗಿದ್ದ ಏರ್‌ವೈಸ್ ಮಾರ್ಷಲ್ ಬಿ.ಕೆ.ಮುರಳಿ ಅವರು, ನಮ್ಮ ಜೀವಗಳನ್ನು ಉಳಿಸಲು ಪ್ರಸ್ತುತ ಸನ್ನಿವೇಶದಲ್ಲಿ ಮುಂಚೂಣಿ ಸೇವೆ ಸಲ್ಲಿಸುತ್ತಿರುವ ಯೋಧರ ನಿಸ್ವಾರ್ಥ ಸೇವೆಯ ಕುರಿತು ಮಾಹಿತಿಗಳನ್ನು ಹಂಚಿಕೊಂಡರು.

Toyota Kirloskar Motor salutes the Indian Armed Forces through their ICARE initiative

ಟೊಯೋಟಾ ಫಾರ್ಚುನರ್ ಸ್ಪೋರ್ಟಿ TRD ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!.

ಹಗಲು-ರಾತ್ರಿ ನಮ್ಮ ಗಡಿಗಳನ್ನು ಕಾಪಾಡುವ ಲಡಾಕ್  ಮತ್ತು ಲೇಹ್‍ನಲ್ಲಿರುವ ನಮ್ಮ ಸೈನಿಕರಿಗೆ ಕೃತಜ್ಞತೆ ಸಲ್ಲಿಸುವುದು ಹಾಗೂ ಪ್ರೀತಿ ಮತ್ತು ಶುಭಾಶಯಗಳ ಸಂದೇಶವನ್ನು ಕಳುಹಿಸುವುದು ಈ ಕಾರ್ಯಕ್ರಮದ ಪ್ರಮುಖ ವಿಷಯ  ಈ ನಿಟ್ಟಿನಲ್ಲಿ ಐಕೇರ್ ಭಾಗವಾಗಿ, ನೌಕರರು ಮತ್ತು ಅವರ ಕುಟುಂಬಗಳು ಸ್ವತಃ ತಯಾರಿಸಿದ ಪರಿಸರ ಸ್ನೇಹಿ ರಾಖಿಗಳು ಮತ್ತು ಶುಭಾಶಯ ಪತ್ರಗಳನ್ನು ಕಳುಹಿಸಿದರು. ಅದನ್ನು ಲಡಾಖ್‍ನ ಲೇಹ್‍ನಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಆರ್ಮಿ  ಪೋಸ್ಟ್ ಆಫೀಸ್ (ಎಪಿಒ) ನಾರ್ದರ್ನ್ ಕಮಾಂಡ್ ಮೂಲಕ ಹಸ್ತಾಂತರಿಸುವ ಜೊತೆಗೆ ಸೈನಿಕರಿಗಾಗಿ ವೀಡಿಯೊ ಸಂದೇಶಗಳನ್ನೂ ಸಹ ಕಳುಹಿಸಲಾಯಿತು.

ಭಾರತೀಯ ಗ್ರಾಹಕರಿಗೆ ಟೊಯೋಟಾ ಕೊಡುಗೆ; ಬಿಡುಗಡೆಯಾಗುತ್ತಿದೆ ಅರ್ಬನ್ ಕ್ರೂಸರ್ SUV

ತಾಯಿನಾಡು ಭಾರತವನ್ನುರಕ್ಷಿಸಲು ಸಶಸ್ತ್ರ ಪಡೆಗಳ ಧೈರ್ಯ, ಉತ್ಸಾಹ ಮತ್ತು ಉತ್ಸಾಹಕ್ಕೆ ಸಾಟಿಯಿಲ್ಲ ಎಂದರು. ಸೈನಿಕರ ಶೌರ್ಯ ಮತ್ತು ಭಕ್ತಿಗೆ ನಾವು ಎಷ್ಟೇ  ಗೌರವ ಸಲ್ಲಿಸಿದರು ಸಾಲುವುದಿಲ್ಲ. ನಮ್ಮ ಐಕೇರ್ ಕಾರ್ಯಕ್ರಮದ ಮೂಲಕ ಸೈನಿಕರಿಗೆ ಕೃತಜ್ಞತೆ ಗೌರವಿಸುವ ಮೂಲಕ ನಾವು ಸೈನಿಕರಿಗೆ ಚಿರಋಣಿಯಾಗಿರುತ್ತೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟಾರ್  ದೇಶದ ಮುಖ್ಯಸ್ಥ ಹಾಗೂ ಹಿರಿಯ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಹೇಳಿದರು.

Toyota Kirloskar Motor salutes the Indian Armed Forces through their ICARE initiative

ಕರ್ನಾಟಕದಲ್ಲಿ ಕೊರೋನಾ ಪರೀಕ್ಷೆ ಹೆಚ್ಚಿಸಲು ಟೊಯೋಟಾ ಕಿರ್ಲೋಸ್ಕರ್ ನೆರವು!

ಐಕೇರ್ ಕಾರ್ಯಕ್ರಮ ನೌಕರರು ಒಗ್ಗೂಡಿ ಸಮುದಾಯದಲ್ಲಿ ಬದಲಾವಣೆಯನ್ನು ತರಲು ಒಂದು ವೇದಿಕೆಯನ್ನು ಸೃಷ್ಟಿಸಿದೆ. ಈ ಕಾರ್ಯಕ್ರಮ ನೌಕರರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ ಮತ್ತು ಹಲವಾರು ಸಾಮಾಜಿಕ ವಿಷಯಗಳ ಬಗ್ಗೆ ಅವರ ತಿಳುವಳಿಕೆಯನ್ನು ಹೆಚ್ಚಿಸಲು ಶ್ರಮಿಸುತ್ತದೆ, ಟಿಕೆಎಂನ ಸಿಎಸ್‍ಆರ್ ಚೌಕಟ್ಟಿನೊಳಗಿನ ಪ್ರಮುಖ ಅಗತ್ಯಗಳನ್ನು ಪರಿಹರಿಸಲು ಸಹಕರಿಸುತ್ತದೆ. ಪ್ರತಿ ಐಕೇರ್ ಚಟುವಟಿಕೆಯಲ್ಲಿ ಸಾಮಾಜಿಕ ಪರಿವರ್ತಕರಾಗಿ ಹೊರಹೊಮ್ಮುತ್ತಿರುವ ನಮ್ಮ ನೌಕರರು ಮತ್ತು ಅವರ ಕುಟುಂಬ ಸದಸ್ಯರ ಭಾಗವಹಿಸುವಿಕೆಯನ್ನು ನೋಡಿ ನಮಗೆ ಸಂತೋಷವಾಗಿದೆ. ಇದರೊಂದಿಗೆ, ನಮ್ಮ ಸಮಗ್ರ ವಿಧಾನದಿಂದ ಸಮಾಜಕ್ಕೆ ಸೇವೆ ಸಲ್ಲಿಸುವ ಬದ್ಧತೆಯನ್ನು ವಿಸ್ತರಿಸಲು ನಾವು ಉದ್ದೇಶಿಸಿದ್ದೇವೆ ಎಂದರು.

Toyota Kirloskar Motor salutes the Indian Armed Forces through their ICARE initiative

ಐಕೇರ್ ನೌಕರರ ಸ್ವಯಂಪ್ರೇರಿತ ಕಾರ್ಯಕ್ರಮ,  ಇದು ನಿರಂತರ ಸಮುದಾಯ ಅಭಿವೃದ್ಧಿಗೆ ಕಂಪನಿಯ ಬದ್ಧತೆಯೊಂದಿಗೆ ಹೊಂದಿಕೆಯಾಗುವ ಪ್ರಯತ್ನವಾಗಿದೆ. ರಾಷ್ಟ್ರ ಮತ್ತು ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಲು ನೌಕರರು ನಮ್ಮ ನೈತಿಕತೆ ಮತ್ತು ತತ್ವಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ ಎಂದು ಟಿಕೆಎಂ ನಂಬಿದೆ. ಈ ಚಟುವಟಿಕೆ ಉದ್ಯೋಗಿಗಳನ್ನು ಸಕ್ರಿಯವಾಗಿ ಒಳಗೊಳ್ಳುತ್ತದೆ ಮತ್ತು ವಿವಿಧ ಸಾಮಾಜಿಕ ವಿಷಯಗಳ ಬಗ್ಗೆ ಅವರ ತಿಳುವಳಿಕೆಯನ್ನು ಹೆಚ್ಚಿಸಲು ಶ್ರಮಿಸುತ್ತದೆ, ಟಿಕೆಎಂನ ಸಿಎಸ್‍ಆರ್ ಚೌಕಟ್ಟಿನೊಳಗಿನ ಪ್ರಮುಖ ಅಗತ್ಯಗಳನ್ನು ಪರಿಹರಿಸಲು ಕೊಡುಗೆ ನೀಡುತ್ತದೆ.

2017 ರಲ್ಲಿ ಪ್ರಾರಂಭವಾದಾಗಿನಿಂದ, ಐಕೇರ್  ಸಮಾಜದಲ್ಲಿ ಗಮನಾರ್ಹ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದೆ, ಅದು 40,000 ಕ್ಕೂ ಹೆಚ್ಚು ಮಂದಿಗೆ ಪ್ರಯೋಜನವನ್ನು ನೀಡಿದೆ. ಪ್ರಸ್ತುತ, ಟಿಕೆಎಂನ ಐಕೇರ್ ಉಪಕ್ರಮದ ಅಡಿಯಲ್ಲಿ 700 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೋಂದಾಯಿಸಲಾಗಿದೆ. ಇಲ್ಲಿಯವರೆಗೆ, ಟಿಕೆಎಂ ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ, ಕೌಶಲ್ಯ ಅಭಿವೃದ್ಧಿ, ವಿಪತ್ತು ನಿರ್ವಹಣೆ ಕ್ಷೇತ್ರದಲ್ಲಿ ಕೆಲಸ ಮಾಡಿದೆ. ಪ್ರತಿ ಬಾರಿಯೂ ಉದ್ಯೋಗಿಗಳಿಗೆ ಸಮೃದ್ಧ ಅನುಭವವನ್ನು ನೀಡುವ ಮೂಲಕ ವಿಶೇಷಚೇತನ ಮಕ್ಕಳನ್ನು ಬೆಂಬಲಿಸುವ ಕ್ಷೇತ್ರದಲ್ಲಿ 15 ಐಕೇರ್ ಚಟುವಟಿಕೆಗಳನ್ನು ಜಾರಿಗೆ ತಂದಿದೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ತನ್ನ ವಿವಿಧ ಐಕೇರ್ ಚಟುವಟಿಕೆಗಳನ್ನು ಸಮಾಜದ ಸಾಮಾಜಿಕ-ಆರ್ಥಿಕ ರಚನೆಯ ಅಭಿವೃದ್ಧಿ ದೃಷ್ಟಿಕೋನವನ್ನು ಇಟ್ಟುಕೊಂಡು ಮುಂದುವರಿಯುತ್ತದೆ ಮತ್ತು ಅನೇಕ ಜನರ ಜೀವನಕ್ಕೆ ಅವರ ಜೀವನೋಪಾಯದಲ್ಲಿ ಬದಲಾವಣೆ ತರಲು ಸಹಕರಿಸಿದೆ.

Latest Videos
Follow Us:
Download App:
  • android
  • ios