ಬೆಂಗಳೂರು(ಜು.13): ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಭಾರತದಲ್ಲಿ ತನ್ನ ಗ್ರಾಹಕರಿಗೆ ವಿಶೇಷ ಹಣಕಾಸು ಕೊಡುಗೆಗಳು ಮತ್ತು ಯೋಜನೆಗಳನ್ನು ಘೋಷಿಸಿದೆ. ಗ್ರಾಹಕರ ಕಾರು ಖರೀದಿ ಕನಸನ್ನು ಸಾಕಾರಗೊಳಿಸಲು ಬಂಪರ್ ಕೊಡುಗೆ ನೀಡುತ್ತಿದೆ.  ಟೊಯೋಟಾ ಕಿರ್ಲೋಸ್ಕರ್ ಮರು ಖರೀದಿ, ವಿಶೇಷ ಕೊಡುಗೆ, ಕಡಿಮೆ EMI  ಸೇರಿದಂತೆ ಹಲವು ವಿಶೇಷ ಕೊಡುಗೆಗಳನ್ನು ಪರಿಚಯಿಸುತ್ತಿದೆ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟೊಯೋಟಾ ಇನೋವಾ ಕ್ರೈಸ್ಟಾ CNG ಕಾರು!.

ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುವ, ಸರಳೀಕೃತ ಮತ್ತು ಒತ್ತಡ ರಹಿತ ಖರೀದಿ ಪ್ರಕ್ರಿಯೆಗಳ ಕೊಡುಗೆಯನ್ನು ನೀಡುತ್ತಿದೆ. ಇತ್ತೀಚಿಗೆ ಕಂಪನಿಯು ಬಿಡುಗಡೆ ಮಾಡಿದ ಗ್ರಾಹಕ ಕೇಂದ್ರಿತ ನೂತನ ಕ್ರಮಗಳ ಸರಣಿ ಕೊಡುಗೆಗಳು ಇದರ ಜೊತೆ ಮುಂದುವರಿಯಲಿದೆ ಎಂದು ಟೊಯೋಟಾ ಕಿರ್ಲೋಸ್ಕರ್ ಹೇಳಿದೆ. 

ಸುಲಭ EMI, ತಡೆರಹಿತ ಸಂಪರ್ಕ; ವಿಶೇಷ ಸೇವಾ ಕೊಡುಗೆ ಪರಿಚಯಿಸಿದ ಟೊಯೋಟಾ ಕಿರ್ಲೋಸ್ಕರ್!..

ಯಾರಿಸ್ ಮತ್ತು ಗ್ಲಾಂಜಾ ಕಾರಿಗೆ 55% ರಷ್ಟು ವಿಶಿಷ್ಟವಾದ ಮರುಖರೀದಿ ಪ್ರಸ್ತಾಪವನ್ನು ಹೊಸ ಒಪ್ಪಂದವು ಒಳಗೊಂಡಿದೆ. ಇದಲ್ಲದೆ, ಕಂಪನಿಯು ಕಡಿಮೆ EMI ಯೋಜನೆಯಂತಹ ಹಲವಾರು ಗಮನಾರ್ಹ ಯೋಜನೆಗಳನ್ನು ಜಾರಿಗೆ ತಂದಿದೆ. ಇನ್ನೋವಾ ಕ್ರಿಸ್ಟಾಗೆ ರೂ 9999 ಮತ್ತು ದೇಶದ ಎಲ್ಲಾ ಟೊಯೋಟಾ ಮಾದರಿಗಳಲ್ಲಿ ಮೂರು ತಿಂಗಳ EMI ಮುಂದೂಡಿಕೆ ಸೇರಿದಂತೆ ಹಲವು ಕೊಡುಗೆಗಳನ್ನು ಈಗಾಲೇ ನೀಡಿದೆ. 

ಟೊಯೋಟಾದಲ್ಲಿ ನಾವು ಗ್ರಾಹಕರಿಗೆ ವಿಶೇಷ ಪ್ರಾಧಾನ್ಯತೆ ನೀಡುತ್ತೇವೆ. ವಿಶೇಷ ಕೊಡುಗೆಗಳನ್ನು ನೀಡುವುದು, ತತ್ವರಿತವಾಗಿ ಸ್ಪಂದಿಸುವುದು. ಆರ್ಥಿಕವಾಗಿ ವಿನೂತನ ಯೋಜನೆಗಳನ್ನು ಪ್ರಕಟಿಸುವುದು ಸೇರಿದಂತೆ ಗ್ರಾಹಕ ಅಗತ್ಯಗಳಿಗೆ ತಕ್ಕಂತೆ ವಿಶೇಷ ವಿನೂತನ ಸೌಲಭ್ಯಗಳನ್ನು ಒದಗಿಸುತ್ತೇವೆ. ಗ್ರಾಹರಿಗೆ ಮೊದಲ ಪ್ರಾಶಸ್ಥ್ಯ ನೀಡುತ್ತೇವೆ ಎಂದು ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್‍ನ ಮಾರಾಟ ಮತ್ತು ಸೇವೆಗಳ ಹಿರಿಯ ಉಪಾಧ್ಯಕ್ಷ  ನವೀನ್ ಸೋನಿ ಹೇಳಿದರು. 

ಮತ್ತೊಂದು ಹೊಸ ವಿಷಯವೇನೆಂದರೆ, ಮೇ ತಿಂಗಳಲ್ಲಿ ನಾವು ಮಾರಾಟದಲ್ಲಿ ದುಪ್ಪಟ್ಟು ಬೆಳವಣಿಗೆಯನ್ನು ಕಂಡಿದ್ದೇವೆ. ಮಾರುಕಟ್ಟೆಯಲ್ಲಿ ವೇಗದ ಬೆಳವಣಿಗೆಯನ್ನು ಕಾಣುತ್ತಿದ್ದೇವೆ.ಇಂತಹ ನಿರ್ಣಾಯಕ ಸಮಯದಲ್ಲಿ ಗ್ರಾಹಕರ ವೈಯಕ್ತಿಯ ದೃಷ್ಟಿ ಆಧಾರದಲ್ಲಿ ಅಗತ್ಯತೆಗಳನ್ನು ಪೂರೈಸುವುದು ಮತ್ತು ನಾವು ನೀಡುತ್ತಿರುವ ಹೊಸ ಮತ್ತು ನವೀಜ ಹಣಕಾಸು ಯೋಜನೆಗಳನ್ನು ಪರಿಚಯಿಸಿದ್ದರಿಂದ ಗ್ರಾಹಕರ ವಿಶ್ವಾಸ ಮತ್ತು ಗಮನವನ್ನು ಸೆಳೆಯಲು ನಮಗೆ ನೆರವಾಗಿದೆ ಎಂದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಗ್ರಾಹಕರು ನಮ್ಮ ಮೇಲೆ ನಂಬಿಕೆ ಮತ್ತು ವಿಶ್ವಾಸ ಇಟ್ಟಿರುವುದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇವೆ. ಗ್ರಾಹಕರಿಗೆ ನೆರವಾಗುವ ವಿಶೇಷ ಕೊಡುಗೆಗಳನ್ನು ಪರಿಚಯಿಸುವ ಕಾರ್ಯವನ್ನು ಮುಂದುವರೆಸುತ್ತೇವೆ ಎಂದರು.

ಎಲ್ಲಾ ಟೊಯೋಟಾ ಮಾದರಿಗಳ ಇಎಂಐ ಯೋಜನೆಗಳು ಮತ್ತು ಗ್ಲಾಂಜಾ ಮತ್ತು ಯಾರಿಸ್‍ಗೆ 55% ಮರು-ಖರೀದಿ ಭರವಸೆಯ ಕೊಡುಗೆ ಗ್ರಾಹಕರು ಯಾವುದೇ ವಿಳಂಬವಿಲ್ಲದೆ ಟೊಯೋಟಾ ವಾಹನವನ್ನು ಖರೀದಿಸಿ ತಮ್ಮ ಕನಸುಗಳನ್ನು ಈಡೇರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.