ಬೆಂಗಳೂರು(ನ.04): ಭಾರತದ ಲಕ್ಸುರಿ ಹಾಗೂ ಸುರಕ್ಷತೆಯ ಕಾರಾಗಿ ಗುರುತಿಸಿಕೊಂಡಿರುವ ಟೊಯೊಟೊ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಇದೀಗ ಮಹೀಂದ್ರ ಹೊಸ ಕಾರನ್ನ ಬಿಡುಗಡೆಗೊಳಿಸುತ್ತಿದೆ. ಇದೇ ನವೆಂಬರ್ 26ರಂದು ಮಹೀಂದ್ರ ಅಲ್ಟುರಾಸ್(XUV700) ಬಿಡುಗಡೆಯಾಗುತ್ತಿದೆ.

ಈಗಾಗಲೇ ಹಲವು ಬಾರಿ ಮಹೀಂದ್ರ ಈ ಕಾರಿನ ಹೆಸರು ಬದಲಾಯಿಸಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೆಸರಿಗೆ ಸಿಗುತ್ತಿರುವ ಸ್ಪಂದನೆ ಕುರಿತು ಅಧ್ಯಯನ ನಡೆಸುತ್ತಿದೆ. ಕಳೆದ ತಿಂಗಳು ಇನ್‌ಫೆರೆನೋ ಎಂದು ಹೆಸರಿಟ್ಟಿದ್ದ ಮಹೀಂದ್ರ ಇದೀಗ ಬಳಿಕ ಅಲ್ಟುರಾಸ್ ಹೆಸರಿಟ್ಟಿದೆ. ಇದೇ ಹೆಸರು ಅಂತಿಮವಾದರೆ,  ಮಹೀಂದ್ರ ಸಂಸ್ಥೆ 'ಒ'(ಇಂಗ್ಲೀಷ್ ಅಕ್ಷರ 'O')ಅಂತ್ಯವಾಗೋ ಹೆಸರಿನ ಬದಲು ಹೊಸ ಎಸ್(S)ಹೆಸರನ್ನ ಆಯ್ಕೆ ಮಾಡಿದಂತಾಗುತ್ತದೆ.

ಮಹೀಂದ್ರ ಸಂಸ್ಥೆಯ ಬಹುತೇಕ ಎಲ್ಲಾ ಕಾರು ಹಾಗೂ ಬೈಕ್‌ಗಳು. ಹೆಸರು ಅಂತ್ಯವಾಗೋದು ಇಂಗ್ಲೀಷ್ ವರ್ಣಮಾಲೆಯ 'O' ಅಕ್ಷರದಿಂದ. ಇದಕ್ಕೆ ಇತ್ತೀಚೆಗೆ ಬಿಡುಗಡೆಯಾದ ಮರಾಜೋ(Marazzo) ಕಾರು ಕೂಡ ಹೊರತಲ್ಲ. ಆದರೆ ಇದೀಗ ನೂತನ ಫಾರ್ಚುನರ್ ಪ್ರತಿಸ್ಪರ್ಧಿ ಕಾರಿಗೆ ಅಲ್ಟುರಾಸ್ ಹೆಸರಿಡೋ ಮೂಲಕ ತಮ್ಮ ಸಂಪ್ರದಾಯ ಮುರಿಯುವ ಸಾಧ್ಯತೆ ಇದೆ.

ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡೆವರ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಮಹೀಂದ್ರ ಕಂಪನಿಯ ಈ ಕಾರು 25 ಲಕ್ಷ  ರೂಪಾಯಿ ಎಂದು ಅಂದಾಜಿಸಲಾಗಿದೆ.  2.2 ಲೀಟರ್ ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 187 bhp ಹಾಗೂ 420nm ಟಾರ್ಕ್ ಉತ್ಪಾದಿಸಲಿದೆ.

7  ಸ್ಪೀಡ್ ಗೇರ್ ಹಾಗೂ AMT ಆಯ್ಕೆ ಕೂಡ ಹೊಂದಿದೆ. ಈ ಮೂಲಕ  ಮಹೀಂದ್ರ 7 ಸೀಟರ್ ಕಾರು ಬಿಡುಗಡೆಗೆ ಮುಂದಾಗಿದೆ. ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್ಸ್  ಹೊಂದಿದೆ. ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 9 ಏರ್‌ಬ್ಯಾಗ್, ABS+EBD, ಟ್ರಾಕ್ಷನ್ ಕಂಟ್ರೋಲ್ ಸೌಲಭ್ಯ ಹೊಂದಿದೆ.