ನವದೆಹಲಿ(ಡಿ.25): ಭಾರತದ ಕಾರು ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಪೈಪೋಟಿ ಹೆಚ್ಚಾಗುತ್ತಿದೆ.  ಹೊಸ ಹೊಸ ಕಾರುಗಳು, ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುತ್ತಿದೆ. ಇದೀಗ ತೀವ್ರ ಪೈಪೋಟಿ ಎದುರಿಸಿದರೂ ಮಾರುತಿ ಸುಜುಕಿ ಮಾರಾಟದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ.

ಇದನ್ನೂ ಓದಿ: ಮಹೀಂದ್ರ XUV300 ಕಾರಿನ ಬುಕಿಂಗ್ ಆರಂಭ-ಮಾರುತಿ ಬ್ರಿಜಾಗೆ ಪೈಪೋಟಿ!

ಕಳೆದ ನವೆಂಬರ್‌ನಲ್ಲಿ ಗರಿಷ್ಠ ಮಾರಾಟವಾದ ಕಾರು ಪಟ್ಟಿಗಳಲ್ಲಿ ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಆಗ್ರಸ್ಥಾನದಲ್ಲಿದೆ. 2018ರಲ್ಲಿ ಬಿಡುಗಡೆಯಾದ ನೂತನ ಮಾರುತಿ ಸ್ವಿಫ್ಟ್ ಕಳೆದ ನವೆಂಬರ್‌ ತಿಂಗಳಲ್ಲೂ ಮಾರಾಟದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: 2018ರಲ್ಲಿ ಸಂಚಲನ ಮೂಡಿಸಿದ ಬೈಕ್-ಜಾವಾಗೆ ಮೊದಲ ಸ್ಥಾನ!

2018- ನವೆಂಬರ್ ತಿಂಗಳಲ್ಲಿ ಗರಿಷ್ಠ ಮಾರಾಟವಾದ ಕಾರು!

ಮಾಡೆಲ್ ನವೆಂಬರ್- 2018
ಮಾರುತಿ ಸ್ಪಿಫ್ಟ್ 22,191
ಮಾರುತಿ ಡಿಸೈರ್ 21,037
ಮಾರುತಿ ಬಲೆನೊ 18,649
ಮಾರುತಿ ಅಲ್ಟೋ 18,643
ವಿಟಾರ ಬ್ರಿಜಾ 14,378
ವ್ಯಾಗನ್ ಆರ್ 11,311
ಎಲೈಟ್ ಐ20 10,555
ಹ್ಯುಂಡೈ ಕ್ರೆಟಾ 9,677
ಗ್ರ್ಯಾಂಡ್ ಐ10 9,252
ಸ್ಯಾಂಟ್ರೋ 9,009