Asianet Suvarna News Asianet Suvarna News

ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಭರ್ಜರಿ ಆಫರ್! ಕಾರು ಖರೀದಿ ಇನ್ನೂ ಸುಲಭ!

ಸೆಕೆಂಡ್ ಹ್ಯಾಂಡ್(ಬಳಸಿರುವ ಕಾರು) ಖರೀದಿಸಲು ಪ್ಲಾನ್ ಮಾಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿ. ಇದೀಗ ದೀಪಾವಳಿ ಹಬ್ಬದ ಪ್ರಯುಕ್ತ ಸೆಕೆಂಡ್ ಹ್ಯಾಂಡ್ ಕಾರುಗಳ ಮೇಲೆ ಭರ್ಜರಿ ಆಫರ್ ಘೋಷಿಸಲಾಗಿದೆ. 

This festive season offers buy your dream car with Truebil
Author
Bengaluru, First Published Oct 17, 2018, 2:56 PM IST
  • Facebook
  • Twitter
  • Whatsapp

ಬೆಂಗಳೂರು(ಅ.17):  ಬಳಸಿರುವ ಕಾರುಗಳ(ಸೆಕೆಂಡ್ ಹ್ಯಾಂಡ್) ಮಾರಾಟದಲ್ಲಿ ಭಾರತದಾದ್ಯಂತ ಹೆಸರು ಮಾಡಿರುವ ಟ್ರೂಬಿಲ್ ಸಂಸ್ಥೆಯು ದೀಪಾವಳಿ ಹಬ್ಬದ ಅಂಗವಾಗಿ ಎಲ್ಲ ಬಗೆಯ ಕಾರುಗಳ ಖರೀದಿಗೂ ಅನ್ವಯವಾಗುವಂತೆ 10,000 ರೂ.ಗಳ ರಿಯಾಯಿತಿಯನ್ನು ಘೋಷಿಸಿದೆ.

ಈ ಬಗ್ಗೆ ಮಾತನಾಡಿರುವ ಟ್ರೂಬಿಲ್ ಸಂಸ್ಥೆಯ ಸಹ-ಸಂಸ್ಥಾಪಕ ಶುಭ್ ಬನ್ಸಾಲ್, ``ಕಳೆದ ವರ್ಷಕ್ಕೆ ಹೋಲಿಸಿದರೆ ಕಾರುಗಳ ಮಾರಾಟದಲ್ಲಿ ಈ ವರ್ಷ ನಾವು ಶೇಕಡ 25ರಷ್ಟು ಹೆಚ್ಚು ವಹಿವಾಟನ್ನು  ನಿರೀಕ್ಷಿಸುತ್ತಿದ್ದೇವೆ. 2017ರಲ್ಲಿ ಇಡೀ ದೇಶದಲ್ಲಿ 35 ಲಕ್ಷದಷ್ಟು ಬಳಕೆಯಾದ ಕಾರುಗಳು (ಪ್ರೀ-ಓನ್ಡ್ ಕಾರ್) ಮಾರಾಟವಾಗಿವೆ. 

ಈ ವರ್ಷ ಇದರಲ್ಲಿ ಶೇಕಡ 15ರಷ್ಟು ಏರಿಕೆ ಕಂಡುಬರಬಹುದೆಂದು ನಾವು ಅಂದಾಜಿಸಿದ್ದೇವೆ. ನಮ್ಮ ಗ್ರಾಹಕರಿಗೆ ಮುಂಬರುವ ದೀಪಾವಳಿಯು ಸಂತಸದಾಯಕವಾಗಿರಬೇಕು ಎನ್ನುವುದು ನಮ್ಮ ಆಸೆಯಾಗಿದೆ. ಹೀಗಾಗಿ, ಎಲ್ಲ ಬಗೆಯ ಕಾರುಗಳ ಖರೀದಿಗೂ ಅನ್ವಯವಾಗುವಂತೆ 10 ಸಾವಿರ ರೂ.ಗಳ ರಿಯಾಯಿತಿಯನ್ನು ನೀಡುತ್ತಿದ್ದೇವೆ,’’ ಎಂದಿದ್ದಾರೆ.

 ಗ್ರಾಹಕರಿಗೆ ತಾವು ಖರೀದಿಸಲಿರುವ ಕಾರಿನ ನಿಜವಾದ ಬೆಲೆ ಎಷ್ಟೆಂಬುದು ಗೊತ್ತಾಗಬೇಕು ಎನ್ನುವುದು ಟ್ರೂಬಿಲ್ ಸಂಸ್ಥೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಟ್ರೂಪ್ರೈಸ್ ಮತ್ತು ಟ್ರೂಸ್ಕೋರ್ ಎಂಬ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ. 

ಇವುಗಳ ಮೂಲಕ ಗ್ರಾಹಕರು ತಾವು ಖರೀದಿಸಬೇಕು ಎಂದುಕೊಂಡಿರುವ ಕಾರಿನ ಬೆಲೆ ಬೇರೆಡೆ ಎಷ್ಟಿದೆ ಎನ್ನುವುದನ್ನು ಹೋಲಿಸಿ ನೋಡಬಹುದು. ಜತೆಗೆ, ತಾವು ಖರೀದಿಸಲು ಬಯಸಿರುವ ಕಾರಿನ ಸ್ಥಿತಿಗತಿ ಹೇಗಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯು ಹೇಳಿದೆ. ಟ್ರೂಬಿಲ್ ಸಂಸ್ಥೆಯು ಅಕ್ಟೋಬರ್ 15ರಿಂದ ಘೋಷಿಸಿರುವ ಈ ರಿಯಾಯಿತಿಯು ದೀಪಾವಳಿ ಹಬ್ಬವು ಮುಗಿಯುವವರೆಗೂ ಚಾಲ್ತಿಯಲ್ಲಿರುತ್ತದೆ.

Follow Us:
Download App:
  • android
  • ios