2013ರಿಂದ ಭಾರತದಿಂದ ಕಣ್ಮರೆಯಾಗಿದ್ದ ಹೊಂಡಾ ಸಿವಿಕ್ ಕಾರು ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ. ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.

ನವದೆಹಲಿ(ನ.01): ಲಕ್ಸುರಿ ಕಾರು ಎಂದೇ ಹೆಸರುವಾಸಿಯಾಗಿರುವ ಹೊಂಡಾ ಸಿವಿಕ್ ಕಾರು 2013ರಲ್ಲಿ ಭಾರತದಲ್ಲಿ ಮಾರಾಟ ಸ್ಥಗಿತಗೊಳಿಸಿತು. ಹೊಂಡಾ ದಿಢೀರ್ ನಿರ್ಧಾರ ಕಾರು ಪ್ರಿಯರಿಗೆ ಶಾಕ್ ನೀಡಿತ್ತು. ಇದೀಗ 5 ವರ್ಷಗಳ ಬಳಿಕ ಹೊಂಡಾ ಸಿವಿಕ್ ಮತ್ತೆ ಭಾರತದ ರಸ್ತೆಗಿಳಿಯುತ್ತಿದೆ.

Scroll to load tweet…

ನೂತನ ಹೊಂಡಾ ಸಿವಿಕ್ ಪೆಟ್ರೋಲ್ ಹಾಗೂ ಡೀಸೆಲ್ ಇಂಜಿನ್ ಲಭ್ಯವಿದೆ. 1.6 ಲೀಟರ್ ಡೀಸೆಲ್ ಎಂಜಿನ್, 120 ಬಿಹೆಚ್‌ಪಿ ಪವರ್ ಹಾಗೂ 300nm ಟಾರ್ಕ್ ಉತ್ವಾದಿಸಲಿದೆ. ಇನ್ನು 1.8 ಲೀಟರ್ ಪೆಟ್ರೋಲ್ ಎಂಜಿನ್ 140 ಬಿಹೆಚ್‌ಪಿ ಪವರ್ ಹೊಂದಿದೆ.

Scroll to load tweet…

9 ಸ್ವೀಡ್ ಅಟೋಮ್ಯಾಟಿಕ್ ಗೇರ್‌ಬಾಕ್ಸ್ ನೂತನ ಹೊಂಡಾ ಸಿವಿಕ್ ಕಾರಿನ ವಿಶೇಷ. ಇನ್ನು ಹಳೇ ಕಾರಿಗಿಂತ ಹೆಚ್ಚು ಸ್ಪೇಸ್, 7.0 ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ, ಆಟೋಮ್ಯಾಟಿಕ್ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವಿಶೇಷತೆಗಳು ನೂತನ ಹೊಂಡಾ ಸಿವಿಕ್ ಕಾರಿನಲ್ಲಿದೆ.

Scroll to load tweet…

2019ರಲ್ಲಿ ನೂತನ ಹೊಂಡಾ ಸಿವಿಕ್ ಬಿಡುಗಡೆಯಾಗಲಿದೆ. ಆದರೆ ಇದರ ಬೆಲೆ ಎಷ್ಟು ಅನ್ನೋದನ್ನ ಹೊಂಡಾ ಬಹಿರಂಗ ಪಡಿಸಿಲ್ಲ. 14 ಲಕ್ಷ ರೂಪಾಯಿಯಿಂದ ಬೆಲೆ ಪ್ರಾರಂಭವಾಗಲಿದೆ ಎಂದು ಅಂದಾಜಿಸಲಾಗಿದೆ.