ಮುಂಬೈ(ಆ.09): ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬಿಡುಗಡೆಯಾದ ಬಳಿಕ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಕೈಗೆಟುವ ದರ, ಅತ್ಯುತ್ತಮ ಮೈಲೇಜ್ ರೇಂಜ್, ಗರಿಷ್ಠ ಸುರಕ್ಷತೆಯ(5 ಸ್ಟಾರ್) ಸೇರಿದಂತೆ ಹಲವು ಕಾರಣಗಳಿಂದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಇತರ ಎಲ್ಲಾ EV ಕಾರುಗಳಿಗಿಂತ ಮುಂಚೂಣಿಯಲ್ಲಿದೆ. ಬಾಲಿವುಡ್ ಸೆಲೆಬ್ರೆಟಿಗಳು, ಕ್ರಿಕೆಟಿಗರು, ಉದ್ಯಮಿಗಳು ಸೇರಿದಂತೆ ಹಲವರು ಟಾಟಾ ನೆಕ್ಸಾನ್ EV ಕಾರಿಗೆ ಮಾರುಹೋಗಿದ್ದಾರೆ. ಇದೀಗ ನಿರೂಪಕಿ, ನಟಿ, ಫ್ಯಾಶನ್ ಡಿಸೈನರ್ ಮಂದಿರಾ ಬೇಡಿ ಹೊಚ್ಚ ಹೊಸ ಟಾಟಾ ನೆಕ್ಸಾನ್ EV ಕಾರು ಖರೀದಿಸಿದ್ದಾರೆ.

ಹೊಸ ಕೊಡುಗೆ ಘೋಷಣೆ; ವಾಹನ ಖರೀದಿಸದೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಚಾಲನೆ ಆನಂದಿಸಿ!.

ಮಂದಿರಾ ಬೇಡಿ ಹಾಗೂ ಪತಿ ತಮ್ಮ ನೂತನ ಕಾರಿನ ಮುಂದೆ ನಿಂತು ಫೋಟೋಗೆ ಫೋಸ್ ನೀಡಿದ್ದಾರೆ. ಮಂದಿರಾ ಬೇಡಿ ಹಾಗೂ ಅವರ ಪತಿ ರಾಜ್ ಕೌಶಾಲ್‌ಗೆ ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ವಿಭಾಗ ಅಭಿನಂದನೆ ಹೇಳಿದೆ. ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೂತನ ಟಾಟಾ ನೆಕ್ಸಾನ್ ಮಾಲೀಕರ ಫೋಟೋವನ್ನು ಟಾಟಾ ಪೋಸ್ಟ್ ಮಾಡಿದೆ.

 

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು 2020ರ ಜನವರಿಯಲ್ಲಿ ಬಿಡುಗಡೆಯಾಗಿದೆ. ಆರಂಭಿಕ ಬೆೆ  13.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಟಾಪ್ ಮಾಡೆಲ್ ಬೆಲೆ  15.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). XM, XM+ ಹಾಗೂ  XZ+ ಮೂರು ವೇರಿಯೆಂಟ್ ಕಾರುಗಳು ಲಭ್ಯವಿದೆ.

ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ ಈ ಕಾರು 312 ಕಿಲೋಮೀಟರ್ ಪ್ರಯಾಣ ಮಾಡಲಿದೆ.   245 Nm ಪೀಕ್ ಟಾರ್ಕ್ ಸಾಮಾರ್ಥ್ಯ ಹೊಂದಿರು ಟಾಟಾ ನೆಕ್ಸಾನ್ ಎಲೆಕ್ಚ್ರಿಕ್ ಕಾರು 9.9 ಸೆಕೆಂಡ್‌ಗಳಲ್ಲಿ 100 ಕಿ.ಮೀ ವೇಗ ತಲುಪಲಿದೆ. ಕಾರಿನಲ್ಲಿ 35 ಕನೆಕ್ಟ್ ಫೀಚರ್ಸ್ ಹೊಂದಿದೆ.