ನವದೆಹಲಿ(ಅ.04):  ಟಾಟಾ ಮೋಟಾರ್ಸ್ ಕಾರುಗಳ ಪೈಕಿ ಮಧ್ಯಮ ವರ್ಗದ ಜನ ಹೆಚ್ಚು ಇಷ್ಟ ಪಟ್ಟಿರುವ ಟಾಟಾ ಟಿಯಾಗೋ ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಟಿಯಾಗೋ  Wizz ನೂತನ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ ಕೇವಲ 5.40 ಲಕ್ಷ ರೂಪಾಯಿ.

 

ಇದನ್ನೂ ಓದಿ: ಶೀಘ್ರದಲ್ಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು; 300KM ಮೈಲೇಜ್!

ಲಿಮಿಟೆಡ್ ಎಡಿಶನ್ ಟಿಯಾಗೋ Wizz ಕಾರು 1.2 ಲೀಟರ್ ರಿವೊಟ್ರೊನ್ ಪೆಟ್ರೋಲ್ ಎಂಜಿನ್ ಹೊಂದಿದೆ. ನೂತನ ಕಾರು 10 ಹೆಚ್ಚುವರಿ ಫೀಚರ್ಸ್ ಹೊಂದಿದೆ. ಟೈಟಾನಿಯಂ ಗ್ರೇ ಕಲರ್ ಹೊಂದಿರುವ ಲಿಮಿಟೆಡ್ ಎಡಿಶನ್ ಕಾರು, ಬ್ಲಾಕ್ ಸನ್‌ರೂಫ್ ಹಾಗೂ ಮಿರರ್, ಆಲೋಯ್ ವೀಲ್ಹ್‌ಗಳಲ್ಲಿ ಕೇಸರಿ ಶೇಡ್ ಹೊಂದಿದೆ. ಇದು ಈ ಕಾರಿನ ಲುಕ್ ಹೆಚ್ಚಿಸಿದೆ.

ಇದನ್ನೂ ಓದಿ: ಮಾರುತಿ ಸುಜುಕಿ s presso ಕಾರು ಲಾಂಚ್; ಬೆಲೆ ಕೇವಲ 3.69 ಲಕ್ಷ!

ನೂತನ ಟಾಟಾ ಟಿಯಾಗೋ Wizz ಕಾರು 84bhp ಪವರ್ ಹಾಗೂ 114Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಟ್ರಾನ್ಸ್‌ಮಿಶನ್ ಆಯ್ಕೆ ಹೊಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ  ಟಾಟಾ ಟಿಯಾಗೋ ಕಾರನ್ನು 2.5 ಲಕ್ಷ ಮಂದಿ ಖರೀದಿಸಿದ್ದಾರೆ.