ನವದೆಹಲಿ[ಡಿ.08]: ಟಾಟಾ ಸಮೂಹದ ಟಾಟಾ ನೆಕ್ಸಾನ್‌ ಕಾರು, ಸುರಕ್ಷತಾ ಮಾನದಂಡದಲ್ಲಿ 5 ಸ್ಟಾರ್‌ ಶ್ರೇಯಾಂಕ ಪಡೆದಿದೆ.

ಈ ಮೂಲಕ ಇಂಥ ಸಾಧನೆ ಮಾಡಿದ ಮೊದಲ ಭಾರತೀಯ ತಯಾರಿಕಾ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ಬ್ರಿಟನ್‌ ಮೂಲದ ಗ್ಲೋಬಲ್‌ ಎನ್‌ಸಿಎಪಿ ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಎಲ್ಲಾ ಹಂತಗಳನ್ನು ಯಶಸ್ವಿಯಾಗಿ ಪೂರೈಸಿದ ಟಾಟಾ ನೆಕ್ಸಾನ್‌ ಎಸ್‌ಯುವಿ ಈ ಹಿರಿಮೆಗೆ ಪಾತ್ರವಾಗಿದೆ.

ಇತ್ತೀಚೆಗೆ ನಡೆಸಲಾದ ಪರೀಕ್ಷೆ ವೇಳೆ ಹಿರಿಯರ ಸುರಕ್ಷತೆಯಲ್ಲಿ ಕಾರಿಗೆ 5 ಸ್ಟಾರ್‌, ಮಕ್ಕಳ ಸುರಕ್ಷತೆಯಲ್ಲಿ 3 ಸ್ಟಾರ್‌ ಸಿಕ್ಕಿದೆ. ಈ ಕಾರನ್ನು ಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಿಸಲಾಗಿದೆ.