ನವದೆಹಲಿ(ಜ.03): ಟಾಟಾ ಮೋಟಾರ್ಸ್ ಇತರ ಕಾರು ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. SUV ಕಾರುಗಳ ಮೂಲಕ ಇತರ ಬ್ರಾಂಡ್ ಕಾರುಗಳ ನಿದ್ದೆಗೆಡಿಸಿರುವ ಟಾಟ ಇದೀಗ ಮಹೀಂದ್ರ KUV100 ಸೇರಿದಂತೆ ಇತರ ಸಣ್ಣ SUV ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಬೀಚ್‌ಗೆ ಹೋದ ಸಚಿವರ ಕಾರಿಗೆ ಬಂತು ಸಂಕಟ-ವಿಡಿಯೋ ವೈರಲ್

ಟಾಟಾ ಮೋಟಾರ್ಸ್ ಸಣ್ಣ SUV ಹಾರ್ನ್‌ಬಿಲ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಸಣ್ಣ SUV ಕಾರುಗಳ ವಿಭಾಗದಲ್ಲಿ ನೂತನ ಟಾಟ ಹಾರ್ನ್‌ಬಿಲ್ ಕಾರು ಸಂಚಲನ ಮೂಡಿಸಲಿದೆ. ಬಹುತೇಕ  ಟಾಟಾ ನೆಕ್ಸಾನ್ ಶೈಲಿಯಲ್ಲೇ ಈ ಕಾರು ಬಿಡುಗಡೆಯಾಗಲಿದೆ.

BS-VI ಎಮಿಶನ್ ಎಂಜಿನ್ ಹೊಂದಿರುವ ನೂತನ ಹಾರ್ನ್‌ಬಿಲ್ 1.2 ಲೀಟರ್ ಎಂಜಿನ್ ಹೊಂದಿದೆ. ಮೈಕ್ರೋ ಹೈಬ್ರಿಡ್ ಟೆಕ್ನಾಲಜಿ ಬಳಸಿಕೊಂಡಿರುವ ಹಾರ್ನ್‌ಬಿಲ್ 5 ಸ್ಪೀಡ್ ಮ್ಯಾನ್ಯುಯೆಲ್ ಹಾಗೂ 5 ಸ್ಪೀಡ್ ಅಟೋಮ್ಯಾಟಿಕ್ ಟ್ರಾನ್ಸಿಮಿಶನ್ ಲಭ್ಯವಿದೆ. ಈಗಾಗಲೇ ರೋಡ್ ಟೆಸ್ಟ್ ಕೂಡ ನಡೆಸಿದೆ.

ಇದನ್ನೂ ಓದಿ: ಕಾರಿನಲ್ಲಿ ಮಾಡಬೇಡಿ ಈ 6 ತಪ್ಪು- ಆಗಬಹುದು ಪ್ರಾಣಕ್ಕೆ ಕುತ್ತು!

ನೂತನ ಹಾರ್ನ್ ಬಿಲ್ ಬೆಲೆ 5-8 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಹೀಂದ್ರ KUV100, ಮಾರುತಿ ಇಗ್ನಿಸ್ ಹಾಗೂ ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಮಾರುತಿ Y1K ಮೈಕ್ರೋ SUV ಕಾರಿಗೆ ಪೈಪೋಟಿ ನೀಡಲಿದೆ.

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: