ಗ್ರೇಟರ್ ನೋಯ್ಡಾ(ಫೆ.09): ದೆಹಲಿ ಆಟೋ ಎಕ್ಸ್ಪೋ 2020ರಲ್ಲಿ ಟಾಟಾ ಮೋಟಾರ್ಸ್ ಕ್ರಾಂತಿ ಮಾಡಿದೆ. SUV, ಎಲೆಕ್ಟ್ರಿಕ್ ಕಾರು ಸೇರಿದಂತೆ ಹಲವು ವಾಹನಗಳನ್ನು ಅನಾವರಣ ಮಾಡಿದೆ. ಇದರಲ್ಲಿ ಟಾಟಾ ವಿಂಗರ್ ವಾಹನ ಎಲ್ಲರ ಗಮನ ಸೆಳೆದಿದೆ. ನೂತನ ವಿಂಗರ್ ವಾಹನಕ್ಕೆ 2.0 ಡಿಸೈನ್‌ ಬಳಸಲಾಗಿದೆ. ಇದೇ ಮಾದರಿಯನ್ನು ಟಾಟಾ ಹ್ಯಾರಿಯರ್ ಹಾಗೂ ಟಾಟಾ ಅಲ್ಟ್ರೋಜ್ ಕಾರಿಗೂ ಬಳಸಲಾಗಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಮತ್ತೆ ಬಂತು ಟಾಟಾ ಸಿಯೆರಾ!

ಹ್ಯಾರಿಯರ್ ಹಾಗೂ ಅಲ್ಟ್ರೋಜ್ ಕಾರಿನಲ್ಲಿರುವಂತೆ LED ಹೆಡ್‌ಲ್ಯಾಂಪ್ಸ್, ಲಾಂಗ್ ಫಿನೀಶ್ ಕ್ರೋಮ್ ಜೊತೆಗೆ ಟಾಟಾ ಲೋಗೋ ಬಳಸಲಾಗಿದೆ. ಮುಭಾಗದ ಗ್ರಿಲ್ ಹಾಗೂ ಬಂಪರ್ ವಿನ್ಯಾಸದಲ್ಲೂ ಬದಲಾವಣೆ ಮಾಡಲಾಗಿದೆ. ಬೊನೆಟ್ ಕೂಡ ಮಹತ್ವದ ಬದಲಾವಣೆ ಮಾಡಲಾಗಿದೆ. ಹೀಗಾಗಿ ಕರ್ಮಷಿಯಲ್ ವಾಹನ ಮೊದಲ ನೋಟಕ್ಕೆ ಪ್ಯಾಸೆಂಜರ್ ವಾಹನದ ಲುಕ್ ನೀಡುತ್ತಿದೆ.

ಇದನ್ನೂ ಓದಿ: ರೋಡ್ ಟೆಸ್ಟ್ ಯಶಸ್ವಿ; ಫೆಬ್ರವರಿಯಲ್ಲಿ ಟಾಟಾ H2X ಕಾರು ಅನಾವರಣ!

ಸುಪ್ರೀಂ ಕೋರ್ಟ್ ಆದೇಶದಂತೆ ಟಾಟಾ ವಿಂಗರ್ ಕಾರು BS6 ಎಂಜಿನ್ ಹೊಂದಿದೆ. ನೂತನ ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, 89 BHP ಪವರ್ ಹಾಗೂ  190 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಪ್ರತಿ ಲೀಟರ್ ಡೀಸೆಲ್‌ಗೆ 10 ಕಿ.ಮೀ ಮೈಲೇಜ್ ನೀಡಲಿದೆ.

21 ಸಾವಿರಕ್ಕೆ ಬುಕ್ ಮಾಡಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!

ನೂತನ ಟಾಟ್ ವಿಂಗರ್ ವಾಹನ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ವಿಂಗರ್ ಕಾರಿನ ಬೆಲೆ 12-15 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಎಂದು ಅಂದಾಜಿಸಲಾಗಿದೆ.