ರೋಡ್ ಟೆಸ್ಟ್ ಯಶಸ್ವಿ; ಫೆಬ್ರವರಿಯಲ್ಲಿ ಟಾಟಾ H2X ಕಾರು ಅನಾವರಣ!
ಟಾಟಾ ಮೋಟಾರ್ಸ್ ಆಟೋಮೊಬೈಲ್ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದೆ. ಅತ್ಯುಂತ ಸುರಕ್ಷತೆಯ ಕಾರು ಬಿಡುಗಡೆ ಮಾಡುತ್ತಿರುವ ಟಾಟಾ, ಭಾರತದಲ್ಲಿರುವ ಇತರ ಕಾರುಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಇದೀಗ ಮಿನಿ SUV ಕಾರು ಅನಾವರಣಕ್ಕೆ ಟಾಟಾ ಸಜ್ಜಾಗಿದೆ. ಟಾಟಾ H2X ಕಾರು ಹೇಗಿದೆ? ಇಲ್ಲಿದೆ ವಿವರ.
ದೆಹಲಿ(ಜ.27): ಟಾಟಾ ನೆಕ್ಸಾನ್ ಹಾಗೂ ಹ್ಯಾರಿಯರ್ SUV ಕಾರಿನ ಬಳಿಕ ಇದೀಗ ಟಾಟಾ ಮತ್ತೊಂದು SUV ಕಾರು ಬಿಡುಗಡೆ ಮಾಡುತ್ತಿದೆ. ಮಿನಿ SUV ಕಾರು ಇದೇ ಫೆಬ್ರವರಿಯಲ್ಲಿ ಅನಾವರಣವಾಗಿದೆ. ಟಾಟಾ H2X(ಹಾರ್ನ್‌ಬಿಲ್) ನೂತನ ಕಾರು ಈಗಾಗಲೇ ರೋಡ್ ಟೆಸ್ಟ್ ಯಶಸ್ವಿಯಾಗಿ ನಡೆಸಿದೆ. ಫೆಬ್ರವರಿ ಆರಂಭದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋದಲ್ಲಿ ಈ ಕಾರು ಅನಾವರಣಗೊಳ್ಳಲಿದೆ.
ಇದನ್ನೂ ಓದಿ: 21 ಸಾವಿರಕ್ಕೆ ಬುಕ್ ಮಾಡಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!
ಟಾಟಾ H2X ಕಾರು ಆಕರ್ಷಕ ಲುಕ್ ಹೊಂದಿದ್ದು, ಈ ಕಾರು ಕೂಡ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಟೀರಿಂಗ್ ವೀಲ್, ಡ್ಯಾಶ್‌ಬೋರ್ಡ್ ಸೇರಿದಂತೆ ನೂತನ ಕಾರಿನ ಇಂಟಿರಿಯರ್ ಆತ್ಯಂತ ಆಕರ್ಷಕವಾಗಿದೆ.
ಇದನ್ನೂ ಓದಿ: ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!
ಆ್ಯಂಡ್ರಾಯ್ಡ್ ಆಟೋ ಹಾಗೂ ಆ್ಯಪಲ್ ಕಾರ್ ಪ್ಲೆ, ಕ್ಲೈಮೇಟ್ ಕಂಟ್ರೋಲ್, ಮಲ್ಟಿ ಇನ್ಪೋ ಡಿಸ್‌ಪ್ಲೇ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ಕೀ ಲೆಸ್ ಎಂಟ್ರಿ, ಪುಶ್ ಬಟನ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಸೇಫ್ಟಿ ವಿಚಾರದಲ್ಲಿ ಟಾಟಾ ಯಾವತ್ತೂ ಮುಂದಿದೆ. ಏರ್‌ಬ್ಯಾಗ್, ABS-EBD, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ, ಹೈ ಸ್ಪೀಡ್ ಅಲರ್ಟ್ ಸೇರಿದಂತೆ ಎಲ್ಲಾ ಸೇಫ್ಟಿ ಫೀಚರ್ಸ್ ಈ ಕಾರಿನಲ್ಲಿದೆ.
ಇದನ್ನೂ ಓದಿ:ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!
ಟಾಟಾ H2X ಕಾರು BS6 ಎಂಜಿನ್ ಅಪ್‌ಗ್ರೇಡೆಡ್ ಕಾರಾಗಿದೆ. 1.2 ಲೀಟರ್ ರಿವೊಟ್ರೊನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 86PS ಪವರ್ ಹಾಗೂ 114Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ AMT ಆಯ್ಕೆ ಕೂಡ ಈ ಕಾರಿನಲ್ಲಿದೆ. ಕಾರಿನ ಬೆಲೆ ಬಹಿರಂಗವಾಗಿಲ್ಲ.