ಟಾಟಾ ಅಲ್ಟ್ರೋಜ್ ಬಿಡುಗಡೆ; ಕಡಿಮೆ ಬೆಲೆ, ಅತ್ಯಂತ ಸುರಕ್ಷತೆಯ ಕಾರು!
ಮುಂಬೈ(ಜ.22): ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆಯಾಗಿದೆ. ನೂತನ ಕಾರಿನ ಬೆಲೆ 5.29 ಲಕ್ಷ ರೂಪಾಯಿಯಿಂದ ಆರಂಭವಾಗಲಿದೆ. ಇದು ಅತ್ಯಂತ ಕಡಿಮೆ ಬೆಲೆಯ ಹ್ಯಾಚ್‌ಬ್ಯಾಕ್ ಕಾರು ಅನ್ನೋ ಹೆಗ್ಗಳಿಗೆಗೆ ಪಾತ್ರವಾಗಿದೆ. ಇಷ್ಟೇ ಅಲ್ಲ ಅಲ್ಟ್ರೋಜ್ 5 ಸ್ಟಾರ್ ಸುರಕ್ಷತೆ ಹೊಂದಿದೆ. ನೂತನ ಕಾರಿನ ಹೆಚ್ಚಿನ ವಿವರ ಹಾಗೂ ಇತರ ಮಾಹಿತಿ ಇಲ್ಲಿದೆ,
ಟಾಟಾ ಮೋಟಾರ್ಸ್ ಕಂಪನಿಯ ಬಹುನಿರೀಕ್ಷಿತ ಟಾಟಾ ಅಲ್ಟ್ರೋಜ್ ಕಾರು ಬಿಡುಗಡೆ
ಟಾಟಾ ನೆಕ್ಸಾನ್ ಬಳಿಕ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿರುವ ಅಲ್ಟ್ರೋಜ್ ಕಾರು
ಭಾರತದ ಅತ್ಯಂತ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಅಲ್ಟ್ರೋಜ್ ಕಾರು ಪಾತ್ರವಾಗಿದೆ
ಅಲ್ಟ್ರೋಜ್ ಪೆಟ್ರೋಲ್ ಕಾರಿನ ಬೆಲೆ 5.29 ಲಕ್ಷ ರೂ.ನಿಂದ ಗರಿಷ್ಠ 7.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಡೀಸೆಲ್ ಕಾರಿನ ಬೆಲೆ 6.99 ಲಕ್ಷ ರೂ.ನಿಂದ ಗರಿಷ್ಠ 9.29 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಮಾರುತಿ ಬಲೆನೊ, ಹ್ಯುಂಡೈ i20, ಹೊಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿ ಟಾಟಾ ಅಲ್ಟ್ರೋಜ್
ಅಲ್ಟ್ರೋಜ್ 3990 mm ಉದ್ದ, 1755 mm ಅಗಲ, 1523 mm ಎತ್ತರ ಹಾಗೂ 2501 mm ವೀಲ್ಹ್ ಬೇಸ್ ಹೊಂದಿದೆ
ಟಾಟಾ ಅಲ್ಟ್ರೋಜ್ XE, XM, XT, XZ ಹಾಗೂ XZ(O) ಐದು ವೇರಿಯೆಂಟ್‌ಗಳಲ್ಲಿ ಲಭ್ಯ
ಬೇಸ್ ಮಾಡಲೆ ಕಾರಿನಲ್ಲಿ 2 ಏರ್‌ಬ್ಯಾಗ್, ABS ಹಾಗೂ EBD, ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರಾಂ ಹೊಂದಿದೆ
BoT ಗೂಗಲ್ ವಾಯ್ಸ್ ಕೆನೆಕ್ಟ್, ಆಂಡ್ರಾಯ್ಡ್, ಅಟೋ ಆ್ಯಪಲ್ ಕಾರ್ ಪ್ಲೇ ಸೌಲಭ್ಯ ಹೊಂದಿದೆ
ಪೆಟ್ರೋಲ್ ಕಾರು 1.2-ಲೀಟರ್, 1199 cc ಎಂಜಿನ್ ಹೊಂದಿದ್ದು, 85 bhp ಪವರ್ ಹಾಗೂ 113 Nm ಪೀಕ್ ಟಾರ್ಕ್ ಸಾಮರ್ಥ್ಯ
ಡೀಸೆಲ್ ಕಾರು 1.5-ಲೀಟರ್ ಟರ್ಬೋಚಾರ್ಜ್ಡ್, 1497 cc,4 ಸಿಲಿಂಡರ್ ಎಂಜಿನ್ ಹೊಂದಿದ್ದು, 89 bhp ಪವರ್ 200 Nm ಪೀಕ್ ಟಾರ್ಕ್ ಸಾಮರ್ಥ್ಯ