ಟಾಟಾದಿಂದ ಶೀಘ್ರದಲ್ಲೇ ಹೊಸ 45X ಕಾನ್ಸೆಪ್ಟ್ 2 ಕಾರು!
ಟಾಟಾ ಮೋಟಾರ್ಸ್ ಶೀಘ್ರದಲ್ಲೇ ಹೊಸ ಕಾರು ಬಿಡುಗಡೆ ಮಾಡಲಿದೆ. ಕಾನ್ಸೆಪ್ಟ್ 2 ಕಾರು 45X ಹ್ಯಾಚ್‌ಬ್ಯಾಕ್ ಬಿಡುಗಡೆಯಾದ ಬೆನ್ನಲ್ಲೇ ರಸ್ತೆಗಿಳಿಯಲಿದೆ. ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಜ.28): ಟಾಟಾ ಮೋಟಾರ್ಸ್ ಭಾರತದ ಕಾರು ಮಾರುಕಟ್ಟೆಯನ್ನ ಆಕ್ರಮಿಸಿಕೊಳ್ಳುತ್ತಿದೆ. ಈಗಾಗಲೇ ಟಾಟಾ ಹರಿಯರ್ ಬಿಡುಗಡೆ ಮಾಡಿರುವ ಟಾಟಾ ಮೇ ಅಥವಾ ಜೂನ್‌ನಲ್ಲಿ ಮಾರುತಿ ಬಲೆನೊ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ 45X ಕಾರು ಬಿಡುಗಡೆ ಮಾಡಲಿದೆ. ಇದರ ಬೆನ್ನಲ್ಲೇ ಮತ್ತೊಂದು ನೂತನ ಕಾರು ಬಿಡುಗಡೆಗೆ ಮುಂದಾಗಿದೆ.
ಇದನ್ನೂ ಓದಿ: ಮಾರುತಿ ಬಲೆನೋ ಫೇಸ್‌ಲಿಫ್ಟ್ ಕಾರು ಬಿಡುಗಡೆ -ಬೆಲೆ 5.45 ಲಕ್ಷ!
ಟಾಟಾ ಮೋಟಾರ್ಸ್ ಇದೀಗ 45X ಕಾನ್ಸೆಪ್ಟ್ 2 ಕಾರನ್ನ ಶೀಘ್ರದಲ್ಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ. ಇನ್ನು 5 ರಿಂದ 6 ತಿಂಗಳಲ್ಲಿ ಟಾಟಾ ನೂತನ ಹ್ಯಾಚ್‌ಬ್ಯಾಕ್ 45X ಕಾನ್ಸೆಪ್ಟ್ 2 ಕಾರು ಬಿಡುಗಡೆಯಾಗಲಿದೆ. ಈ ಮೂಲಕ ಮಾರುಕಟ್ಟೆಯಲ್ಲಿರುವ ಇತರ ಹ್ಯಾಚ್‌ಬ್ಯಾಕ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಕಾರು!
ಟಾಟಾ ಮೋಟಾರ್ಸ್ ಮಾರಾಟದಲ್ಲಿ ಏರಿಕೆ ಕಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕಾರುಗಳನ್ನ ಬಿಡುಗಡೆ ಮಾಡಲಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವಾಹನಗಳ ಅಧ್ಯಕ್ಷ ಮಯಾಂಕ್ ಪರೀಕ್ ಹೇಳಿದ್ದಾರೆ.