ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಮಾರುತಿ ಅಲ್ಟೋ ಕಾರು!
ಮಾರುತಿ ಅಲ್ಟೋ ಕಾರು ಈ ವರ್ಷ ಹೊಸ ರೂಪ ಪಡೆಯಲಿದೆ. ಸಣ್ಣ ಹ್ಯಾಚ್‌ಬ್ಯಾಕ್ ಕಾರಾಗಿದ್ದ ಅಲ್ಟೋ ಇದೀಗ SUV ಕಾರಾಗಿ ಬದಲಾಗಿದೆ. ನೂತನ ಕಾರಿ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ನವದೆಹಲಿ(ಜ.27): ಮಾರುತಿ ಸುಜುಕಿ 2019ರಲ್ಲಿ ಹೊಸ ಮಾಡೆಲ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ. ಇದರಲ್ಲಿ ಮಾರುತಿ ಅಲ್ಟೋ ಕಾರು ಕೂಡ ಸೇರಿದೆ. ಹ್ಯಾಚ್‌ಬ್ಯಾಕ್ ಅಲ್ಟೋ ಕಾರು ಹೊಸ ಅವತಾರದಲ್ಲಿ ರಸ್ತೆಗಿಳಿಯಲಿದೆ. ನೂತನ ಅಲ್ಟೋ ಸಣ್ಣ SUV ಕಾರು ರೂಪದಲ್ಲಿ ಬಿಡುಗಡೆ ಮಾಡಲು ತಯಾರಿ ಆರಂಭಿಸಿದೆ.
ಇದನ್ನೂ ಓದಿ: ಮತ್ತೆ ರಸ್ತೆಗಿಳಿಯುತ್ತಿದೆ ಬಜಾಜ್ ಸ್ಕೂಟರ್!
ಮಾರುತಿ ಅಲ್ಟೋ SUV ಡಿಸೈನ್ ಮಾಡೆಲ್‌ನಲ್ಲಿ ಬಿಡುಗಡೆಯಾಗಿದೆ. ಇಷ್ಟೇ ಅಲ್ಲ BS VI ಅಪ್‌ಗ್ರೇಡ್ ಎಂಜಿನ್ ಕೂಡ ಹೊಂದಿರಲಿದೆ. ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಮಾರ್ಟ್ ಫೋನ್ ಕೆನೆಕ್ಟಿವಿಟಿ ಹೊಂದಿದೆ.
ಇದನ್ನೂ ಓದಿ: ಶೀಘ್ರದಲ್ಲೇ ಭಾರತಕ್ಕೆ ಬರಲಿದೆ ಹಾರುವ ಕಾರು-ಬೆಲೆ ಎಷ್ಟು?
ಸುರಕ್ಷತೆಗೂ ಅದ್ಯತೆ ನೀಡಲಾಗಿದೆ. ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್), ಡ್ಯುಯೆಲ್ ಫ್ರಂಟ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ಅಲರ್ಟ್, ಸ್ಪೀಡ್ ಅಲರ್ಟ್ ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದೆ. 800ಸಿಸಿ, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 1.0 ಲೀಟರ್ ಕೆ ಸೀರಿಸ್ ಎಂಜಿನ್‌ಗಳಲ್ಲಿ ಲಭ್ಯವಿದೆ.