ಟಾಟಾ ಹರಿಯರ್ SUV ಕಾರು ಬಿಡುಗಡೆಯಾಗಿದೆ. ಡಸ್ಟರ್, ಜೀಪ್ ಕಂಪಾಸ್ ಸೇರಿದಂತೆ ಬಲಿಷ್ಠ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿರುವ ನೂತನ ಟಾಟಾ ಹರಿಯರ್ ಬೆಲೆ ಕೂಡ ಕಡಿಮೆ. ಈ ಕಾರಿನ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಂಬೈ(ಜ.23): ಭಾರತ ಸೇರಿದಂತೆ ವಿದೇಶದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಇದೀಗ ಬಹುನಿರೀಕ್ಷಿತ Tata Harrier SUV ಕಾರು ಬಿಡುಗಡೆ ಮಾಡಿದೆ. ಜೀಪ್ ಕಂಪಾಸ್, ಹ್ಯುಂಡೈ ಕ್ರೇಟಾ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿದಿರುವ ಟಾಟಾ ಹರಿಯರ್ ಸಂಚಲನ ಮೂಡಿಸಲಿದೆ.

ಇದನ್ನೂ ಓದಿ: ನೂತನ ಮಾರುತಿ ವ್ಯಾಗನ್ಆರ್ ಬಿಡುಗಡೆ- ಬೆಲೆ ಕೇವಲ 4.19 ಲಕ್ಷ ರೂ!

Scroll to load tweet…

Tata Harrier ಬೆಲೆ 12.69 ಲಕ್ಷ ರೂಪಾಯಿಂದ ಆರಂಭಗೊಳ್ಳಲಿದೆ. ಟಾಪ್ ಮಾಡೆಲ್ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). XE, XM, XT, ಹಾಗೂ XZ ಸೇರಿದಂತೆ ಒಟ್ಟು 4 ವೇರಿಯೆಂಟ್‌ಗಳಲ್ಲಿ Tata Harrier ಕಾರು ಲಭ್ಯವಿದೆ. ಕೇವಲ ಡೀಸೆಲ್ ವೇರಿಯೆಂಟ್ ಕಾರು ಮಾತ್ರ ಲಭ್ಯವಿದೆ.

ಇದನ್ನೂ ಓದಿ: Nissan Kicks SUV ಕಾರು ಬಿಡುಗಡೆ - ಕ್ರೇಟಾ, ಮಹೀಂದ್ರ XUV 500ಗೆ ಪೈಪೋಟಿ!

ನೂತನ Tata Harrier ಕಾರು 2.0 ಲೀಟರ್, 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದೆ. ವಿಶೇಷ ಅಂದರೆ ಇದು ಕ್ರಿಯೊಟೆಕ್ 2.0 ಎಂಜಿನ್. ಕ್ರಿಯೊಟೆಕ್ ರಾಕೆಟ್ ಎಂಜಿನ್‌ನಿಂದ ಸ್ಪೂರ್ತಿ ಪಡೆದು ಈ Tata Harrier ಎಂಜಿನ್ ತಯಾರಿಸಲಾಗಿದೆ. 5 ಸೀಟರ್ ಹರಿಯರ್ ಕಾರು 140 ಬಿಹೆಚ್‌ಪಿ ಪವರ್ ಹೊಂದಿದ್ದರೆ, 7 ಸೀಟರ್ ಹರಿಯರ್ ಕಾರು 170 ಬಿಹೆಚ್‌ಪಿ ಪವರ್ ಹೊಂದಿದೆ. ಟಾಟಾ ಹೆಕ್ಸಾ ರೀತಿಯಲ್ಲೇ ಮಲ್ಟಿ ಡ್ರೈವ್ ಮೂಡ್ ತಂತ್ರಜ್ಞಾನ ಹೊಂದಿದೆ. 

ಇದನ್ನೂ ಓದಿ: ನೂತನ ಮಾರುತಿ ವ್ಯಾಗನ್ಆರ್ ಬಿಡುಗಡೆ- ಬೆಲೆ ಕೇವಲ 4.19 ಲಕ್ಷ ರೂ!

2018ರ ಅಕ್ಟೋಬರ್‌ನಲ್ಲಿ Tata Harrier ಕಾರು ಬುಕಿಂಗ್ ಆರಂಭಗೊಂಡಿತು. 30,000 ರೂಪಾಯಿ ನೀಡಿ Tata Harrier ಕಾರು ಬುಕಿಂಗ್ ಮಾಡೋ ಅವಕಾಶ ನೀಡಿತ್ತು. ಮುಂಬೈ, ಡೆಲ್ಲಿ, ಕೋಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ Tata Harrier ಬಿಡುಗಡೆಯಾಗಿದೆ. ಇನ್ನು ಚೆನ್ನೈ, ಹೈದರಾಬಾದ್, ಕೊಚ್ಚಿ ಹಾಗೂ ಅಹಮ್ಮದಾಬಾದ್ ನಗರದಲ್ಲಿ 24ರಂದು ಬಿಡುಗಡೆಯಾಗಲಿದೆ