ಟಾಟಾ ಮೋಟಾರ್ಸ್‌ನಿಂದ ಉಚಿತ ಸೇವಾ ಶಿಬಿರ
ಟಾಟಾ ವಾಹನ ಮಾಲೀಕರಿಗೆ ಸಿಹಿ ಸುದ್ದಿ. ವಾಣಿಜ್ಯ ವಾಹನಗಳ ಗ್ರಾಹಕರಿಗೆ ಉಚಿತ ಸೇವಾ ಶಿಬಿರಗಳನ್ನ ಆಯೋಜಿಸಿದೆ. ಟಾಟಾ ಮೋಟಾರ್ಸ್ ಆಯೋಜಿಸಿರುವ ಉಚಿತ ಶಿಬಿರದಲ್ಲಿ ಏನೆಲ್ಲಾ ಇರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು(ಅ.24): ವಾಣಿಜ್ಯ ವಾಹನಗಳ ಸರಬರಾಜಿನಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಟಾಟಾ ಮೋಟಾರ್ಸ್ ಈಗ ತನ್ನ ವಾಣಿಜ್ಯ ಬಳಕೆಯ ವಾಹನಗಳ ಗ್ರಾಹಕರಿಗಾಗಿ ಅಕ್ಟೋಬರ್ 23 ರಿಂದ 29ರ ವರೆಗೆ 1500 ಕ್ಕೂ ಹೆಚ್ಚು ಶೋರೂಂಗಳು, ಅಧಿಕೃತ ಸರ್ವೀಸ್ ಸ್ಟೇಶನ್‌ಗಳಲ್ಲಿ ಉಚಿತ ಸೇವಾ ಶಿಬಿರಗಳ ಆಯೋಜನೆ ಮಾಡಿದೆ.
ಈ ಶಿಬಿರದ ಹಿನ್ನೆಲೆಯಲ್ಲಿ ತನ್ನ ಗ್ರಾಹಕರಿಗೆ ವಾಹನಗಳ ಬಗ್ಗೆ ಮಾಹಿತಿ, ಅವುಗಳ ಸಮರ್ಥ ನಿರ್ವಹಣೆ, ಕಂಪನಿ ಗ್ರಾಹಕರಿಗಾಗಿ ಒದಗಿಸುತ್ತಿರುವ ಸೇವಾ ಸೌಲಭ್ಯಗಳ ಮಾಹಿತಿಯನ್ನು ವಿವರವಾಗಿ ಒದಗಿಸಲು ಮುಂದಾಗಿದೆ.
ಗ್ರಾಹಕ ಕೇರ್ ಆ್ಯಪ್
ತುರ್ತು ಪರಿಸ್ಥಿತಿ, ಎಸ್‌ಓಎಸ್, ಸರ್ವೀಸ್ ಬುಕಿಂಗ್ ಸೌಲಭ್ಯ, ನಿರ್ವಹಣಾ ಸಲಹೆಗಳು, ಡೀಲರ್ ಲೊಕೇಶನ್, ಜಿಪಿಎಸ್ ಟ್ರಿಪ್ ಮೀಟರ್, ದಿನಿ ನಿತ್ಯದ
ಡೀಸೆಲ್ ದರಗಳು, ಡಿಇಎಫ್ ಲೊಕೇಟರ್ ಒಳಗೊಂಡಂತೆ ಹಲವು ಅಂಶಗಳನ್ನು ಒಳಗೊಂಡ ಗ್ರಾಹಕ ಕೇರ್ ಆ್ಯಪ್ ಬಗ್ಗೆ ಅರಿವು.
ಟಾಟಾ ಅಲರ್ಟ್
ದೇಶಾದ್ಯಂತ ಯಾವುದೇ ಸ್ಥಳದಲ್ಲಿದ್ದರೂ, ವಾರಂಟಿ ಪೀರಿಯಡ್ ಒಳಗಿರುವ ಎಲ್ಲಾ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳಿಗೆ 24 ಗಂಟೆಯೊಳಗೆ ಸೂಕ್ತ
ಪರಿಹಾರ ಒದಗಿಸಲು ಮಾರ್ಗಬದಿ ನೆರವು ಕಾರ್ಯಕ್ರಮ.
ಟಾಟಾ ಕವಚ್
15 ದಿನಗಳ ರಿಪೇರಿ ಸಮಯದ ಖಾತರಿ ಇರುವ ಅಪಘಾತ ರಿಪೇರಿ ಕಾರ್ಯಕ್ರಮ ಇದು. ಇದು ಸಾಧ್ಯವಾಗದಿದ್ದಲ್ಲಿ, ಅಪಘಾತಗೊಂಡ ವಾಹನಗಳನ್ನು ತಡವಾಗಿ ಡೆಲಿವರಿ ಮಾಡಿದ ಕಾರಣಕ್ಕಾಗಿ ಗ್ರಾಹಕರಿಗೆ ಪ್ರತಿ ದಿನ ರು. 2000 ವರೆಗೆ ಪರಿಹಾರ ನೀಡಲಾಗುತ್ತದೆ. ಇದು ಆಯ್ಕೆ ಮಾಡಲಾದ ಕೆಲವು ಕಾರ್ಯಾಗಾರಗಳಲ್ಲಿ ಮಾತ್ರ, ಟಾಟಾ ಮೋಟರ್ಸ್ ವಿಮೆಯಡಿ ಬರುವ ವಾಹನಗಳಿಗೆ ಈ ಸೇವೆ ಅನ್ವಯವಾಗುತ್ತದೆ.
ಮೊಬೈಲ್ ಸರ್ವೀಸ್ ವ್ಯಾನ್
ಈ ಸೇವೆಯೊಂದಿಗೆ, ಗ್ರಾಹಕರು ತಮ್ಮ ಮನೆಬಾಗಿಲಿನಲ್ಲೇ ಶೀಘ್ರ ಸೇವೆಗಳನ್ನು ಪಡೆದುಕೊಳ್ಳಬಹುದು. ಭಾರತದಾದ್ಯಂತ ಇರುವ 212 ಮೊಬೈಲ್ ವರ್ಕ್‌ಶಾಪ್ ಗಳು ಹಾಗೂ 513 ಕಂಟೇನರ್ ವರ್ಕ್‌ಶಾಪ್‌ಗಳು ಸಮಯ ಮತ್ತು ರಿಪೇರಿಯ ವೆಚ್ಚಗಳನ್ನು ಕಡಿಮೆ ಮಾಡುವ ಸಲುವಾಗಿ ಶ್ರಮಿಸುತ್ತಿದ್ದು, ಇವೆಲ್ಲವುಗಳ ಬಗ್ಗೆ ಶಿಬಿರದಲ್ಲಿ ಗ್ರಾಹಕರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.