ಟಾಟಾ ಮೋಟಾರ್ಸ್ ಇದೀಗ ಭರ್ಜರಿ ಆಫರ್ ಘೋಷಿಸಿದೆ. ಪ್ರತಿ ಖರೀದಿಗೆ ಅದೃಷ್ಟವಂತರಿಗೆ ಟಾಟಾ ಟಿಗೋರ್ ಕಾರು , ಐಫೋನ್ ಸೇರಿದಂತೆ ಹಲವು ಉಡುಗೊರೆ ಘೋಷಿಸಲಾಗಿದೆ. ಇಲ್ಲಿದೆ ಆಫರ್ ವಿವರ.

ಬೆಂಗಳೂರು(ಅ.15): ಹಬ್ಬದ ಪ್ರಯುಕ್ತ ಟಾಟಾ ಮೋಟಾರ್ಸ್ ಭರ್ಜರಿ ಆಫರ್ ಘೋಷಿಸಿದೆ. "ಫೆಸ್ಟಿವಲ್ ಆಫ್ ಗಿಫ್ಟ್" ಅನ್ನೋ ಅಭಿಯಾನ ಆರಂಭಿಸಿರುವ ಟಾಟಾ ಗ್ರಾಹಕರಿಗೆ ಬಂಪರ್ ಆಫರ್ ಘೋಷಿಸಿದೆ. ಕಾರಿನ ಡಿಸ್ಕೌಂಟ್ ಆಫರ್ ಜೊತೆಗೆ ಗ್ರಾಹರಿಗೆ ಬಂಪರ್ ಉಡುಗೊರೆ ನೀಡಲು ಟಾಟಾ ಮುಂದಾಗಿದೆ.

ಹಬ್ಬದ ಅವಧಿಯಲ್ಲಿ ಟಾಟಾ ಕಾರು ಖರೀದಿಸೋ ಗ್ರಾಹಕರಿಗೆ ಟಾನಿಷ್ಕ್ ಆಭರಣ ಮಳಿಗೆಯ ಕೂಪನ್, ಐಫೋನ್, LED ಟಿವಿ ಸೇರಿದಂತೆ 1 ಲಕ್ಷ ರೂಪಾಯಿವರೆಗಿನ ಉಡುಗೊರೆಗಳ ಆಫರ್ ನೀಡಲಾಗಿದೆ. ಈ ಆಫರ್ ಅಕ್ಟೋಬರ್ 31 ವರೆಗೆ ಇರಲಿದೆ.

ಪ್ರತಿ ಖರೀದಿಗೂ ಲಕ್ಕಿ ಕೂಪನ್ ನೀಡಲಾಗುತ್ತೆ. ಪ್ರತಿ ವಾರ ಲಕ್ಕಿ ಡ್ರಾ ಮೂಲಕ ವಿಜೇತರ ಘೋಷಸಲಾಗುವುದು. ಇಷ್ಟೇ ಅಲ್ಲ ವಿಜೇತರು ನೂತನ ಟಾಟಾ ಟಿಗೋರ್ ಕಾರಿನ ಮಾಲೀಕರಾಗೋ ಅದೃಷ್ಟ ಇಲ್ಲಿದೆ. ಜೊತೆಗೆ ಆಕರ್ಷಕ ಉಡುಗೊರೆಗಳು ಸಿಗಲಿದೆ. ಇದರ ಜೊತೆಗೆ ಎಕ್ಸ್‌ಚೇಂಜ್ ಆಫರ್ ಕೂಡ ನೀಡಲಾಗಿದೆ.

ಟಾಟಾ ಎಕ್ಸ್‌ಚೇಂಜ್ ಆಫರ್:

ಮಾಡೆಲ್ಮೂಲ ಬೆಲೆ (ಲಕ್ಷ ರೂಪಾಯಿ)ಎಕ್ಸ್‌ಚೇಂಜ್ ಆಫರ್(ರೂ)
ಟಿಗೋರ್5.0673,000
ನೆಕ್ಸಾನ್6.2357,000
ಸ್ಟ್ರೋಮ್10.987,000
ಹೆಕ್ಸಾ12.5798,000
ಜೆಸ್ಟ್5,5483,000
ಟಿಯಾಗೋ3.440,000