Asianet Suvarna News Asianet Suvarna News

ಟಾಟಾದ 3 ಕಾರುಗಳು ಸ್ಥಗಿತ- ಇಲ್ಲಿದೆ ಕಾರಣ!

ಟಾಟಾ ಮೋಟಾರ್ಸ್ ಮೂರು ಕಾರುಗಳು ಕೆಲ ವೇರಿಯೆಂಟ್ ಸ್ಥಗಿತಗೊಳಿಸಿದೆ. ಕಾರು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ ಟಾಟಾ ಕೆಲ ಕಾರುಗಳನ್ನು ಸ್ಥಗಿತಗೊಳಿಸಿದ್ದೇಕೆ? ಇಲ್ಲಿದೆ ವಿವರ.
 

Tata motors 3 cars production of select variants discontinued
Author
Bengaluru, First Published May 25, 2019, 7:07 PM IST

ನವದಹೆಲಿ(ಮೇ.25): ಟಾಟಾ ಮೋಟಾರ್ಸ್ 3 ಕಾರುಗಳ ಕೆಲ ವೇರಿಯೆಂಟ್ ಕಾರುಗಳನ್ನು ಸ್ಥಗಿತಗೊಳಿಸಿದೆ. ಕನಿಷ್ಠ ಸುರಕ್ಷತೆ ಇಲ್ಲದ ಕಾರಗಳನ್ನು ಸ್ಥಗಿತಗೊಳಿಸಲು ಟಾಟಾ ನಿರ್ಧರಿಸಿದೆ. ಹೀಗಾಗಿ ಟಾಟಾ ಜೆಸ್ಟ್, ಟಾಟಾ ಬೋಲ್ಟ್, ಹಾಗೂ ಟಾಟಾ ಸಫಾರಿ 4X4 ABS ಇಲ್ಲದ ವೇರಿಯೆಂಟ್ ಕಾರುಗಳು ಸ್ಥಗಿತಗೊಳ್ಳುತ್ತಿದೆ. ಆದರೆ ಈ ಮೂರು ಕಾರುಗಳು ಟಾಪ್ ವೇರಿಯೆಂಟ್ ಹಾಗೂ ABS ತಂತ್ರಜ್ಞಾನವಿರುವ ಕಾರುಗಳು ಲಭ್ಯವಿದೆ.

ಸದ್ಯ ಡೀಲರ್‌ಗಳ ಬಳಿ ಇರುವ ಸ್ಟಾಕ್ ಕಾರುಗಳು ಲಭ್ಯವಿದೆ. ಆದರೆ ಈ ಮೂರು ಕಾರುಗಳ ನಿರ್ಮಾಣವನ್ನು ಟಾಟಾ ಸ್ಥಗಿತಗೊಳಿಸಿದೆ. ಟಾಟಾ ಬೋಲ್ಟ್, ಜೆಸ್ಟ್ ಹಾಗೂ ಸಫಾರಿ XM,XT ಕಾರುಗಳು ಲಭ್ಯವಿದೆ. ಲಭ್ಯವಿರು ಟಾಪ್ ಮಾಡೆಲ್ ಕಾರುಗಳು ನೂತನ BS-VI ಎಮಿಶನ್ ಎಂಜಿನ್ ನಿಯಮ ಹಾಗೂ ಕ್ರಾಶ್ ಟೆಸ್ಟ್‌ಗಾಗಿ  ಅಪ್‌ಗ್ರೇಡ್ ಆಗಲಿದೆ.  

ಟಾಟಾ ಸ್ಥಗಿತಗೊಳಿಸಿದ ಕಾರುಗಳು:
ಬೋಲ್ಟ್ ಡೀಸೆಲ್ XM
ಬೋಲ್ಟ್ ಪೆಟ್ರೋಲ್ XE XM
ಜೆಸ್ಟ್ ಡೀಸೆಲ್ XM
ಜೆಸ್ಟ್ ಪೆಟ್ರೋಲ್ XE XM
ಸಫಾರಿ ಸ್ಟ್ರೋಮ್ Lx Vx 4X4

Follow Us:
Download App:
  • android
  • ios