ದೆಹಲಿ(ನ.12):  ರೈತರ ಹೊಲ ಗದ್ದೆಗಳಲ್ಲಿ ಅವರ ನಿಜವಾದ ಸಂಗಾತಿಯಾಗಿರುವ ಸ್ವರಾಜ್ ಟ್ರ್ಯಾಕ್ಟರ್‌ಗಳು, ತನ್ನ ಗ್ರಾಹಕರಲ್ಲಿ ಯಾವ ಬಗೆಯಲ್ಲಿ ಉತ್ಸಾಹ ಬಡಿದೆಬ್ಬಿಸಲಿವೆ ಎನ್ನುವುದರ ದ್ಯೋತಕವಾಗಿರುವ ಹೊಸ ಪ್ರಚಾರ ಅಭಿಯಾನ ‘ಜೋಷ್ ಕಾ ರಾಜ್ ಮೇರಾ ಸ್ವರಾಜ್’ ಆರಂಭಿಸಿದೆ. 

ಕೊರೋನಾದಿಂದ ಹಳ್ಳಿಯತ್ತ ಜನ, ಕಾರು ಬೈಕ್‌ಗಿಂತ ಟ್ರಾಕ್ಟರ್ ಖರೀದಿಯಲ್ಲಿ ಏರಿಕೆ!

ಮಹೀಂದ್ರಾ ಗ್ರೂಪ್‍ನ ಭಾಗವಾಗಿರುವ ಸ್ವರಾಜ್ ಟ್ರ್ಯಾಕ್ಟರ್  ಹೊಸ ಬ್ರ್ಯಾಂಡ್ ಪ್ರಚಾರ ಅಭಿಯಾನ ಆರಂಭಿಸಿದೆ.  ಸ್ವರಾಜ್ ಟ್ರ್ಯಾಕ್ಟರ್‌ನ ಪಾಲುದಾರರಲ್ಲಿ ಅದರಲ್ಲೂ ವಿಶೇಷವಾಗಿ ತನ್ನ ಗ್ರಾಹಕರಲ್ಲಿ ಮಾಲೀಕತ್ವ, ಹೆಮ್ಮೆ ಮತ್ತು ಜತೆಯಾಗಿರುವ ಭಾವನೆ ಸ್ಪುರಿಸಿದ್ದ ಈ ಹಿಂದಿನ ‘ಸ್ವರಾಜ್ ಟ್ರ್ಯಾಕ್ಟರ್ – ಮೇರಾ ಸ್ವರಾಜ್’ ಪ್ರಚಾರ ಅಭಿಯಾನದ ಮುಂದುವರೆದ ಭಾಗವಾಗಿದೆ.
 
ಹೊಸ, ‘ಜೋಷ್ ಕಾ ರಾಜ್ ಮೇರಾ ಸ್ವರಾಜ್’ ಪ್ರಚಾರ ಅಭಿಯಾನವು, ಬ್ರ್ಯಾಂಡ್‍ನ ಯಶಸ್ಸು ಮತ್ತು ಕಾರ್ಯಕ್ಷಮತೆಯ ಸಾಮಥ್ರ್ಯ ಸಾಬೀತುಪಡಿಸಲು ಪ್ರಮುಖ ಕಾರಣವಾಗಿರುವ ತನ್ನ ಪಾಲುದಾರರಲ್ಲಿ ಈ ಟ್ರ್ಯಾಕ್ಟರ್ ಬಗ್ಗೆ ಇರುವ ಅಭಿಮಾನವನ್ನು ಬಣ್ಣಿಸುತ್ತದೆ. ‘ಉತ್ಸಾಹ’ ವರ್ಣಿಸಲು, ಹೊಸ ಸ್ವರಾಜ್ ಟ್ರ್ಯಾಕ್ಟರ್ ಘೋಷಣೆಯನ್ನು ಈ ಪ್ರಚಾರ ಅಭಿಯಾನದ ಜತೆ ಬಿಡುಗಡೆ ಮಾಡಲಾಗಿದೆ. ಪ್ರತಿಯೊಂದು ಹೊಸ ಸವಾಲನ್ನು  ಎದುರಿಸಲು ಮತ್ತು ಶಕ್ತಿಯುತ, ಗಟ್ಟಿಮುಟ್ಟಾದ ಮತ್ತು ವಿಶ್ವಾಸಾರ್ಹ ಟ್ರ್ಯಾಕ್ಟರ್‍ಗಳ ವಿನ್ಯಾಸ ರೂಪಿಸಲು ಸ್ವರಾಜ್‍ನ ಎಂಜಿನಿಯರ್‍ಗಳಿಗೆ ಸ್ಪೂರ್ತಿ ನೀಡಲು ತನ್ನ ಪಾಲುದಾರರ  ಉತ್ಸಾಹವನ್ನು ಈ ಘೋಷಣೆಯು ದ್ವಿಗುಣಗೊಳಿಸಲಿದೆ. 

‘ಮೇರಾ ಸ್ವರಾಜ್ ಘೋಷಣೆಯು ನಾವು ಮಾಡುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಮತ್ತು ಪ್ರತಿಯೊಬ್ಬರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ನಾವು ನಂಬಿದ್ದೇವೆ.  ದೇಶದ ಉದ್ದಗಲಕ್ಕೂ ಇರುವ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಉತ್ತಮ ಸಾಧನೆ ತೋರಿಸುವ ನಮ್ಮ ಶಕ್ತಿಯುತ ಟ್ರ್ಯಾಕ್ಟರ್‍ಗಳಲ್ಲಿಯೂ ಈ ಉತ್ಸಾಹವು  ಪ್ರತಿಫಲನಗೊಂಡಿದೆ ಎಂದು  ಸಿಇಒ ಹರೀಶ್ ಚವಾಣ್ ಹೇಳಿದರು. 

‘ಜೋಷ್ ಕಾ ರಾಜ್ ಮೇರಾ ಸ್ವರಾಜ್’ ಹೊಸ ಪ್ರಚಾರ ಅಭಿಯಾನವು, ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಸ್ವರಾಜ್‍ನ ಕಾರ್ಯವೈಖರಿಯ ಸಂಕೇತವೂ ಆಗಿದೆ.
ಈ ಹೊಸ ಪ್ರಚಾರ ಅಭಿಯಾನವನ್ನು ಜಾಹೀರಾತು ಸಂಸ್ಥೆ ಎಫ್‍ಸಿಬಿ ಇಂಟರ್‍ಫೇಸ್ ಸಿದ್ಧಪಡಿಸಿದೆ.