ಟೊಕಿಯೊ(ಡಿ.29): ಮಾರುತಿ ಸುಜುಕಿ ಹೊಸ ವರ್ಷಕ್ಕೆ ಭರ್ಜರಿ ಕೊಡುಗೆ ನೀಡುತ್ತಿದೆ. 2019ರಲ್ಲಿ ಮಾರುತಿ ಸಣ್ಣ ಕಾರು S ಪ್ರೆಸ್ಸೋ ಕಾರು ಬಿಡುಗಡೆ ಮಾಡಿತ್ತು. 2020ರಲ್ಲಿ ಮಾರುತಿ ಮತ್ತೊಂದು ಸಣ್ಣ ಕಾರು ಬಿಡುಗಡೆ ಮಾಡುತ್ತಿದೆ. ಇದುವೆ ಮಾರುತಿ ಸುಜುಕಿ ಹಸ್ಟ್ಲರ್.  ಎಸ್ ಪ್ರೆಸ್ಸೋ ಕಾರಿಗಿಂತ ಗಾತ್ರದಲ್ಲಿ ಸ್ವಲ್ಪ ದೊಡ್ಡದಾದ ಈ ಕಾರು ಸುಜುಕಿ ಜಿಮ್ಮಿ ಕಾರಿನ ಮಾಡೆಲ್  ಹೊಂದಿದೆ.

ಇದನ್ನೂ ಓದಿ: ಬರುತ್ತಿದೆ ಸ್ಪೊರ್ಟೀವ್ ಮಾರುತಿ ಸ್ವಿಫ್ಟ್ ಕಾರು!

ಟೊಕಿಯೊ ಮೋಟಾರು ಶೋ ಎಕ್ಸ್ಪೋದಲ್ಲಿ ಮಾರುತಿ ಸುಜುಕಿ ಹಸ್ಟ್ಲರ್ ಕಾರು ಬಿಡುಗಡೆ ಮಾಡಿದೆ. ಆಕರ್ಷಕ ಲುಕ್ ಹೊಂದಿರುವ ಹಸ್ಟ್ಲರ್ ಕಾರಿನ ಎಂಜಿನ್‌ನಲ್ಲಿ ಎರಡು ಆಯ್ಕೆಗಳಿವೆ. 660cc ಎಂಜಿನ್ ಹೊಂದಿರುವ ಹಸ್ಟ್ಲರ್ ಕಾರು 64hp ಪವರ್ ಹೊಂದಿದೆ. ಎರಡನೇ ವೇರಿಯೆಂಟ್ ಕಾರು ಟರ್ಬೋಚಾರ್ಜ್ಡ್ ಎಂಜಿನ್ 64hp ಪವರ್ ನೀಡಲಿದೆ.

ಇದನ್ನೂ ಓದಿ: ಮಾರುತಿ ಸುಜುಕಿ ಅಲ್ಟೋ VXI+ ಕಾರು ಬಿಡುಗಡೆ!

ಸೆಕೆಂಡ್ ಜನರೇಶನ್ ಹಸ್ಟ್ಲರ್ ಕಾಂಪಾಕ್ಟ್ SUV ಕಾರು ಡ್ಯುಯೆಲ್ ಕಲರ್‌ನಲ್ಲಿ ಲಭ್ಯ. 2020ರ ಎಪ್ರಿಲ್ ತಿಂಗಳಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ. ಆರಂಭಿಕ ಹಂತದಲ್ಲಿ ವಿದೇಶಿ ಮಾರುಕಟ್ಟೆಗಳಲ್ಲಿ ಹಸ್ಟ್ಲರ್ ಕಾರು ಬಿಡುಗಡೆಯಾಗಲಿದೆ. ಬಳಿಕ ಭಾರತಕ್ಕೆ ಆಗಮಿಸುವ ಸಾಧ್ಯತೆ ಇದೆ. ಈ ಕಾರಿನ ಬೆಲೆ ಕುರಿತ ಮಾಹಿತಿ ಬಹಿರಂಗವಾಗಿಲ್ಲ