ನವದೆಹಲಿ(ಡಿ.23):  ಮಾರುತಿ ಸುಜುಕಿ ಜನಪ್ರೀಯ ಕಾರು ಅಲ್ಟೋ ಟಾಪ್ ಮಾಡೆಲ್ ಬಿಡುಗಡೆ ಮಾಡಿದೆ. ಮಾರುತಿ ಸುಜುಕಿ ಅಲ್ಟೋ VXI+ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಕಾರಿನ ಬೆಲೆ 3.80 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ದೆಹಲಿ). ಸದ್ಯ ಮಾರುಕಟ್ಟೆಯಲ್ಲಿರುವ ಅಲ್ಟೋ VXI trim ಹಾಗೂ ನೂತನ ಅಲ್ಟೋ VXI+ ಕಾರಿನಲ್ಲಿ ಕೆಲ ಬದಲಾವಣೆಗಳಿವೆ.

ಇದನ್ನೂ ಓದಿ: 2019ರಲ್ಲಿ ಮಿಂಚಿದ SUV ಕಾರು ಲಿಸ್ಟ್; ಅಗ್ರಸ್ಥಾನದಲ್ಲಿ ವೆನ್ಯು, ಸೆಲ್ಟೋಸ್!

ಅಲ್ಟೋ VXI trim ಕಾರಿನಲ್ಲಿರುವ ಎಲ್ಲಾ ಫೀಚರ್ಸ್ ಅಲ್ಟೋ VXI+  ಕಾರಿನಲ್ಲಿದೆ. ಜೊತೆಗೆ 7 ಇಂಚಿನ ಸ್ಮಾರ್ಟ್ ಪ್ಲೇ ಸ್ಟುಡಿಯೋ ಟಚ್ ಸ್ಕ್ರೀನ್ ಸಿಸ್ಟಮ್ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಆ್ಯಪಲ್ ಕಾರ್ ಪ್ಲೇ ಹಾಗೂ ಆ್ಯಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡಲಿದೆ.

ಮಾರುತಿ ಅಲ್ಟೋ ವೇರಿಯೆಂಟ್ ಹಾಗೂ ಬೆಲೆ
ಮಾರುತಿ ಅಲ್ಟೋ STD - 2.89 ಲಕ್ಷ ರೂ
ಮಾರುತಿ ಅಲ್ಟೋ STD (O) -  2.92 ಲಕ್ಷ ರೂ
ಮಾರುತಿ ಅಲ್ಟೋ LXI -  3.45 ಲಕ್ಷ ರೂ
ಮಾರುತಿ ಅಲ್ಟೋ LXI (O) - 3.50 ಲಕ್ಷ ರೂ
ಮಾರುತಿ ಅಲ್ಟೋ VXI -  3.67 ಲಕ್ಷ ರೂ
ಮಾರುತಿ ಅಲ್ಟೋ VXI+ -  3.80 ಲಕ್ಷ ರೂ
ಮಾರುತಿ ಅಲ್ಟೋ LXI CNG -  4.05 ಲಕ್ಷ ರೂ
ಮಾರುತಿ ಅಲ್ಟೋ LXI (O) CNG -  4.09 ಲಕ್ಷ ರೂ

ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!

ನೂತನ ಅಲ್ಟೋ bs6 ಎಂಜಿನ್ಅಪ್‌ಗ್ರೇಡ್ ಮಾಡಲಾಗಿದೆ.  3-ಸಿಲಿಂಡರ್, 796 cc ಪೆಟ್ರೋಲ್ ಎಂಜಿನ್ ಹೊಂದಿದ್ದು,  48 hp ಪವರ್ ಹಾಗೂ 69 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  CNG ವೇರಿಯೆಂಟ್ ಕಾರು 41 hp ಪವರ್ ಹಾಗೂ 60 Nm  ಪೀಕ್ ಟಾರ್ಕ್ ಉತ್ಪಾದಿಸಲಿದೆ. 5 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ.