ಇಂಡೋನೇಷಿಯಾ(ಮೇ.05): ಸುಜುಕಿ ಅಂಗಸಂಸ್ಥೆ  ಸುಜುಕಿ ಕ್ಯಾರಿ ನೂತನ ಟೆಂಪೋ ಟ್ರಾವಲರ್ ವಾಹನ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸ, ಹಾಗೂ 1.5 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ನೂತನ ಟೆಂಪೋ ಟ್ರಾವಲರ್ ವಾಹನ ಕ್ಷೇತ್ರದಲ್ಲಿ ಇದೀಗ ಹೊಸ ಸಂಚಲನ ಸೃಷ್ಟಿಸಲಿದೆ. ಕಾರಣ ನೂತನ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್ ಬೆಲೆ 6.69 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ.

ಇದನ್ನೂ ಓದಿ: ಕಾರಿನ ಮೇಲೆ ಸ್ಟಿಕ್ಕರ್- ಮಾಲೀಕನ ಮೇಲೆ ಕೇಸ್, ಕಾರು ಸೀಝ್!

ನೂತನ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್  3 ವೇರಿಯೆಂಟ್‌ಗಳಲ್ಲಿ ಲಭ್ಯವಿದೆ.   FD, FS AC/PS, WD ಹಾಗೂ WD AC/PS. ಈ ಕಾರಿನ ಬೆಲೆ 6.69 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದ್ದು, ಟಾಪ್ ವೇರಿಯೆಂಟ್ ಬೆಲೆ 7.16 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ).

ಇದನ್ನೂ ಓದಿ: ಒಂದೇ ದಿನದಲ್ಲಿ ದಾಖಲೆ ಬರೆದ ನೂತನ ಹ್ಯುಂಡೈ ವೆನ್ಯೂ ಕಾರು!

ನೂತನ ಸುಜುಕಿ ಕ್ಯಾರಿ ಟೆಂಪೋ ಟ್ರಾವಲರ್ 4,195 mm ಉದ್ದ, 1,675 mm ಅಗಲ ಹಾಗೂ  1,870 mm ಎತ್ತರವಿದೆ.. 43 ಲೀಟರ್ ಇಂಧನ ಸಾಮರ್ಥ್ಯ ಹೊಂದಿದೆ.  K15B-C, 4 ಸಿಲಿಂಡಕರ್, 1,462cc ಎಂಜಿನ್ ಹೊಂದಿದ್ದು, 97 PS ಪವರ್ ಹಾಗೂ 135 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಸದ್ಯ ಇಂಡೋನೇಷಿಯಾದಲ್ಲಿ ಬಿಡುಗಡೆಯಾಗಿರುವ ಈ ವಾಹನ ಶೀಘ್ರದಲ್ಲೇ ಭಾರತಕ್ಕೆ ಬರಲಿದೆ.