ಒಂದೇ ದಿನದಲ್ಲಿ ದಾಖಲೆ ಬರೆದ ನೂತನ ಹ್ಯುಂಡೈ ವೆನ್ಯೂ ಕಾರು!

ಮಾರುತಿ ಬ್ರಿಜಾ, ಫೋರ್ಡ್ ಇಕೋಸ್ಪೋರ್ಟ್, ಟಾಟಾ ನೆಕ್ಸಾನ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗುತ್ತಿರುವ ಹ್ಯುಂಡೈ ವೆನ್ಯೂ ಕಾರು ಇದೀಗ ಒಂದೇ ದಿನದಲ್ಲಿ ದಾಖಲೆ ಬರೆದಿದೆ. ಹ್ಯುಂಡೈ ವೆನ್ಯೂ ಕಾರು ಬರೆದೆ ದಾಖಲೆ ಏನು? ಇಲ್ಲಿದೆ ವಿವರ.

Hydundai venue car cross 2000 booking on opening day

ನವದೆಹಲಿ(ಮೇ.04): ಹ್ಯುಂಡೈ ವೆನ್ಯೂ ಕಾರು ಮೇ. 21ಕ್ಕೆ ಬಿಡುಗಡೆಯಾಗಲಿದೆ. ಮಾರುತಿ ಬ್ರೆಜಾ ಸೇರಿದಂತೆ ಸಬ್‌ಕಾಂಪಾಕ್ಟ್ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಸ್ತೆಗಿಳಿಯುತ್ತಿರುವ ಹ್ಯುಂಡೈ ಆಕರ್ಷಕ ವಿನ್ಯಾಸ ಹಾಗೂ ಹಲವು ವಿಶೇಷತೆಗಳನ್ನೊಳಗೊಂಡಿದೆ. ಈಗಾಗಲೇ ಈ ಕಾರಿನ ಬುಕಿಂಗ್ ಆರಂಭಗೊಂಡಿದೆ. ಬುಕಿಂಗ್ ಆರಂಭಿಸಿದ ಒಂದೇ ದಿನದಲ್ಲಿ ಹ್ಯುಂಡೈ ವೆನ್ಯೂ ಕಾರು ದಾಖಲೆ ಬರೆದಿದೆ.

Hydundai venue car cross 2000 booking on opening day

ಇದನ್ನೂ ಓದಿ: ಡಿ ಬಾಸ್ ದರ್ಶನ್ ಖರೀದಿಸಿದ ಲ್ಯಾಂಬೋರ್ಗಿನ್ ಉರುಸ್ ಕಾರಿನ ವಿಶೇಷತೆ ಇಲ್ಲಿದೆ!

ಒಂದೇ ದಿನದಲ್ಲಿ 2000 ಹ್ಯುಂಡೈ ವೆನ್ಯೂ ಕಾರುಗಳು ಬುಕ್ ಆಗಿದೆ. ಮೇ.2ರಂದು ಹ್ಯುಂಡೈ ವೆನ್ಯೂ ಕಾರಿನ ಬುಕಿಂಗ್ ಆರಂಭಗೊಂಡಿಜೆ. ಅನ್‌ಲೈನ್ ಮೂಲಕ ಹ್ಯುಂಡೈ ವೆನ್ಯೂ ಕಾರಿನ ಬುಕಿಂಗ್ ಆರಂಭಗೊಂಡಿದೆ. 21,000 ರೂಪಾಯಿ ನೀಡಿ  ವೆನ್ಯೂ ಕಾರನ್ನು ಬುಕ್ ಮಾಡಿಕೊಳ್ಳಬಹುದು. ಕಂಪನಿ ವೆಬ್‌ಸೈಟ್ ಹಾಗೂ ಎಲ್ಲಾ ಡೀಲರ್‌ಶಿಪ್ ಬಳಿ ನೂತನ ಕಾರನ್ನು ಬುಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ.

Hydundai venue car cross 2000 booking on opening day

ಇದನ್ನೂ ಓದಿ: ಜೀಪ್ ಕಂಪಾಸ್, ಟಾಟಾ ಹ್ಯಾರಿಯರ್ ಪ್ರತಿಸ್ಪರ್ಧಿ- ಬಿಡುಗಡೆಯಾಗ್ತಿದೆ MG ಹೆಕ್ಟರ್ ಕಾರು!

ನೂತನ ಕಾರಿನ ಬೆಲೆ 8 ರಿಂದ 12 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಹ್ಯುಂಡೈ  ವೆನ್ಯೂ ಕಾರಿನಲ್ಲಿ 3 ವೇರಿಯೆಂಟ್‌ಗಳು ಲಭ್ಯವಿದೆ. 1.2 ಲೀಟರ್ ಪೆಟ್ರೋಲ್, 1.0 ಲೀಟರ್ ಪೆಟ್ರೋಲ್ ಟರ್ಬೋ ಹಾಗೂ 1.4 ಲೀಟರ್ ಡೀಸೆಲ್ ವೇರಿಯೆಂಟ್ ಲಭ್ಯವಿದೆ.

Hydundai venue car cross 2000 booking on opening day

Latest Videos
Follow Us:
Download App:
  • android
  • ios