ಆದಿತ್ಯ ಠಾಕ್ರೆ BMW ಕಾರಿಗೆ ಕೇವಲ 6.5 ಲಕ್ಷ; ಆಫಿಡವಿಟ್‌ನಲ್ಲಿ ಹೇಳಿದ್ರಾ ಸುಳ್ಳಿನ ಲೆಕ್ಕ?
ಶಿವ ಸೇನಾ ಮುಖಂಡ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮಲ್ಲಿರುವ BMW ಕಾರಿನ ಮೌಲ್ಯವನ್ನು ಕೇವಲ 6.5 ಲಕ್ಷ ರೂಪಾಯಿ ಎಂದು ನಮೂದಿಸಿದ್ದಾರೆ. ಇದೀಗ ಚರ್ಚೆಗೆ ಗ್ರಾಸವಾಗಿದೆ.
ಮುಂಬೈ(ಅ.03): ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಅಭ್ಯರ್ಥಿಗಳ ನಾಮ ಪತ್ರ ಸಲ್ಲಿಕೆ, ಶಕ್ತಿ ಪ್ರದರ್ಶನ ಹೆಚ್ಚಾಗುತ್ತಿದೆ. ಇದೀಗ ಶಿವ ಸೇನಾ ಮುಖಂಡ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಮುಂಬೈನ ವರ್ಲಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಅಫಿಡವಿತ್‌ನಲ್ಲಿ ಠಾಕ್ರೆ ತಮ್ಮ ಬಳಿ ಇರುವ BMW ಕಾರಿಗೆ ಕೇವಲ 6.5 ಲಕ್ಷ ರೂಪಾಯಿ ಮೌಲ್ಯ ಎಂದು ನಮೂದಿಸಿದ್ದಾರೆ.
ಇದನ್ನೂ ಓದಿ: ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!
ಲೋವರ್ ಪರೇಲ್‌ನಿಂದ ಮರೆವಣಿಗೆ ಮೂಲಕ ವರ್ಲಿಯ ನಾಕದಲ್ಲಿರುವ ಎಲೆಕ್ಷನ್ ಕಮಿಶನ್ ಕಚೇರಿ ತಲುಪಿದ ಆದಿತ್ಯ ಠಾಕ್ರೆ ನಾಮಪತ್ರ ಸಲ್ಲಿಸಿದ್ದಾರೆ. ಆದಿತ್ಯ ಠಾಕ್ರೆ ತಮ್ಮ ಅಫಿಡವಿತ್‌ನಲ್ಲಿ 11.38 ಕೋಟಿ ರೂಪಾಯಿ ಚರಾಸ್ತಿ ಹಾಗೂ 4.67 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ ಎಂದು ನಮೂದಿಸಿದ್ದಾರೆ. ಬ್ಯಾಂಕ್ ಬ್ಯಾಲೆನ್ಸ್, ನಗದು ಹಣ, ಬಾಂಡ್, ಆಭರಣ ಸೇರಿದಂತೆ 11.38 ಕೋಟಿ ರೂಪಾಯಿ ಚರಾಸ್ತಿ ಹೊಂದಿದ್ದಾರೆ.
ಕಾರು, ಬೈಕ್, ಆಟೋಮೊಬೈಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ರಾಯ್‌ಘಡ ಜಿಲ್ಲೆಯ ಬಿಲಾವ್ಲೆಯಲ್ಲಿ 5 ಪ್ಲಾಟ್, ಥಾಣೆಯಲ್ಲಿ 2 ಶಾಪ್ ಹಾಗೂ ಪಿತ್ರಾರ್ಜಿತ ಆಸ್ತಿ ಸೇರಿದಂತೆ ಒಟ್ಟು 4.67 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ ಎಂದಿದ್ದಾರೆ. ಅಫಿಡವಿತ್‌ನಲ್ಲಿ ಆದಿತ್ಯ ಠಾಕ್ರೆ ಉದ್ಯೋಗ ವ್ಯವಹಾರ ಎಂದು ಉಲ್ಲೇಖಿಸಿದ್ದಾರೆ. 26.3 ಲಕ್ಷ ರೂಪಾಯಿ ಆದಾಯ ತೆರಿಗೆ ಕಟ್ಟಿರುವ ದಾಖಲೆಗಳನ್ನು ಲಗತ್ತಿಸಿದ್ದಾರೆ.