ಕಿರಿಕ್ ಪಾರ್ಟಿ ಮತ್ತು ರಾಜರಥ ಬಸ್ ಸಿನಿಮಾದಲ್ಲಿ ಇವರು ಇಲ್ಲ. ಆದರೆ ಇವರ ಪಾತ್ರ ಇದೆ. ಆ ಸಿನಿಮಾಗಳ ಯಶಸ್ಸಿನ ಹಿಂದೆ ಇವರು ಇದ್ದಾರೆ. ಆ ಕಲಾವಿದರೊಬ್ಬರು ನಮ್ಮನ್ನು ಬಿಟ್ಟು ಅಗಲಿದ್ದಾರೆ.
ಬೆಂಗಳೂರು[ಫೆ. 08] ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇತಿಹಾಸ ಬರೆದಿದ್ದ ಕಿರಿಕರ್ ಪಾರ್ಟಿ ಚಿತ್ರದಲ್ಲಿನ ಹಳದಿ ಕಾರು ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರದಲ್ಲಿ ಆ ಕಾರು ಸಹ ಒಂದು ಪಾತ್ರವಾಗಿತ್ತು. ಆದರೆ ಆ ಕಾರನ್ನು ಆಲ್ಟರ್ ಮಾಡಿದ್ದ ದಿಲೀಪ್ ಇಂದು ನಮ್ಮೊಂದಿಗೆ ಇಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಿಲೀಪ್ ಅವರಿಗೆ ಶುಕ್ರವಾರ ಸಂಜೆ ಹೃದಯಾಘಾತವಾಗಿದೆ. ಮನೆಯಿಂದ ಜಯದೇವ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ. ಕಿರಿಕ್ ಪಾರ್ಟಿ ಮತ್ತು ರಾಜರಥ ಅಲ್ಲದೇ ಅಣ್ಣಾ ಬಾಂಡ್, ಉಪ್ಪಿ-2 ಸಿನಿಮಾಕ್ಕೆ ವಿಶಿಷ್ಟ ಶೈಲಿಯ ಬೈಕ್ ಸಿದ್ಧಮಾಡಿದ್ದರು. ಸರಳ ಜೀವಿಯಾಗಿದ್ದ ದಿಲೀಪ್ ಅವರನ್ನು ಕಳೆದುಕೊಂಡಿರುವ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ.

