ಸಿಯಾಜ್, ವರ್ನಾ ಸೇರಿದಂತೆ ಇತರ ಸೆಡಾನ್ ಕಾರುಗಳಿಗೆ ಪೈಪೋಟಿ ನೀಡಲು ಟೊಯೊಟಾ ಯಾರಿಸ್ ಮುಂದಾಗಿದೆ. ಇದೀಗ ಬರೋಬ್ಬರಿ 1 ಲಕ್ಷ ರೂಪಾಯಿ ಡಿಸ್ಕೌಂಟ್ ನೀಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ನವದೆಹಲಿ(ನ.13): ಮಾರುತಿ ಸಿಯಾಜ್, ಹ್ಯುಂಡೈ ವರ್ನಾ ಹಾಗೂ ಹೊಂಡಾ ಸಿಟಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾದ ಟೊಯೊಟಾ ಯಾರಿಸ್ ಕಾರು ನಿರೀಕ್ಷಿತ ಮಾರಾಟ ಕಂಡಿಲ್ಲ. ಹೀಗಾಗಿ ಇದೀಗ ಗ್ರಾಹಕರನ್ನ ಸೆಲೆಯಲು ಟೊಯೊಟಾ ಎರಡು ಬಂಪರ್ ಆಫರ್ ಘೋಷಿಸಿದೆ.

Add Asianetnews Kannada as a Preferred SourcegooglePreferred

ಟೊಯೊಟಾ ಯಾರಿಸ್ ಕಾರು ಖರೀದಿಸೋ ಗ್ರಾಹಕರು 1 ಲಕ್ಷ ರೂಪಾಯಿ ಡಿಸ್ಕೌಂಟ್ ಹಾಗೂ ಚಿನ್ನದ ನಾಣ್ಯದ ಆಫರ್ ನೀಡಿದೆ. ಈ ಮೂಲಕ ಇದೀಗ ಮಾರುತಿ, ಹ್ಯುಂಡೈ ಹಾಗೀ ಹೊಂಡಾ ಕಾರುಗಳಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ.

ಅಕ್ಟೋಬರ್‌ ತಿಂಗಳಲ್ಲಿ ಮಾರುತಿ ಸಿಯಾಜ್ 3,892 ಕಾರು ಮಾರಾಟವಾಗಿತ್ತು. ಈ ಮೂಲಕ ಸೆಡಾನ್ ಕಾರುಗಳ ಮಾರಾಟದಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇನ್ನ ಎರಡನೇ ಸ್ಥಾನದಲ್ಲಿರುವ ಹೊಂಡಾ ಸಿಟಿ 3612 ಕಾರು ಮಾರಾಟವಾಗಿದೆ. ಇನ್ನು ಹ್ಯುಂಡೈ ವರ್ನಾ 3301 ಕಾರುಗಳು ಮಾರಾಟವಾಗಿದೆ. ಆದರೆ ಟೊಯೊಟಾ ಯಾರಿಸ್ ಕೇವಲ 421 ಕಾರುಗಳು ಮಾರಾಟವಾಗಿದೆ. 

ಮಾರಾಟದಲ್ಲಿ ಹಿನ್ನಡೆ ಅನುಭವಿಸಿರುವ ಟೊಯೊಟಾ ಯಾರಿಸ್ ಇದೀಗ ರಿಯಾಯಿತಿ ಮೂಲಕ ಗ್ರಾಹಕರನ್ನ ಆಕರ್ಷಿಸೋ ವಿಶ್ವಾಸದಲ್ಲಿದೆ. ಯಾರಿಸ್ ಕಾರಿನ ಬೆಲೆ 9.29 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. 1.5 ಲೀಟರ್ ವಿವಿಟಿ ಪೆಟ್ರೋಲ್ ಎಂಜಿನ್, 106bhp ಹಾಗೂ 140nm ಟಾರ್ಕ್ ಉತ್ವಾದಿಸಲಿದೆ.