ಚೀನಾ(ಮೇ.04): ಕೊರೋನಾ ವೈರಸ್ ಅಪ್ಪಳಿಸದ ಮೇಲೆ ಇದೀಗ ಪ್ರತಿಯೊಬ್ಬರಿಗೂ ಕಾರು ಬೇಕು ಎಂದು ಅನಿಸುತ್ತಿದೆ. ಕಾರಣ ಸಾರ್ವಜನಿಕ ವಾಹನ ಉಪಯೋಗಿಸುವಂತಿಲ್ಲ. ಇನ್ನು ನಿಯಮ ಸಡಿಲಿಕೆ ಮಾಡಿದರೂ ವೈರಸ್ ಎಲ್ಲಿ ತಗಲುತ್ತದೋ ಅನ್ನೋ ಭೀತಿ. ಹೀಗಾಗಿ ಕಾರು ಇದ್ದರೆ ಯಾವುದೇ ಭಯವಿಲ್ಲದೆ ಪ್ರಯಾಣ ಮಾಡಬಹುದು ಅನ್ನೋ ಲೆಕ್ಕಾಚಾರ. ಕಡಿಮೆ ನಿರ್ವಹಣೆಯ ಎಲೆಕ್ಟ್ರಿಕ್ ಕಾರು ಖರೀದಿ ದುಬಾರಿ. ಆದರೆ ಇದೀಗ ಕಡಿಮೆ ಬೆಲೆಯ, ಗರಿಷ್ಠ ಮೈಲೇಜ್ ನೀಡಬಲ್ಲ ಮಿನಿ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

SIAC GM ವುಲ್ಲಿಂಗ್ ಕಂಪನಿ ನೂತನ ಹೊಂಗ್ವಾಂಗ್ ಮಿನಿ ಎಲೆಕ್ಟ್ರಿಕ್ ಕಾರನ್ನು ಚೀನಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಎರಡು ಬ್ಯಾಟರಿ ವೇರಿಯೆಂಟ್ ಹೊಂದಿರು ಈ ಕಾರು ಒಂದು ಸಂಪೂರ್ಣ ಚಾರ್ಜ್‌ಗೆ 150 ರಿಂದ 200 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. 9.2kWH ಹಾಗೂ 13.8kWH ಬ್ಯಾಟರಿ ವೇರಿಯೆಂಟ್ ಲಭ್ಯವಿದೆ.

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್!.

ನೂತನ ಕಾರಿನ ಬೆಲೆ $6000. ಭಾರತೀಯ ರೂಪಾಯಿಗಳಲ್ಲಿ ಇದರ ಬೆಲೆ 4.5 ಲಕ್ಷ ರೂಪಾಯಿ. 2.9 ಮೀಟರ್ ಉದ್ದ ಹಾಗೂ 1940mm ವೀಲ್ಹ್ ಬೇಸ್ ಹೊಂದಿರುವ  ಈ ಕಾರು ಆಕರ್ಷಕ ವಿನ್ಯಾಸ ಹೊಂದಿದೆ. ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಕಾರು ಇತರ ದೇಶದಲ್ಲೂ ಬಿಡುಗಡೆಗೆ ಯೋಜನೆ ಹಾಕಿದೆ. ಆದರೆ ಕೊರೋನಾ ವೈರಸ್ ಲಾಕ್‌ಡೌನ್ ಹಾಗೂ ಇತರ ದೇಶಗಳ ಚೀನಾ ವಿರುದ್ಧ ಕೆಂಡ ಕಾರುತ್ತಿರುವ ಕಾರಣ ಸದ್ಯ ಚೀನಾದಲ್ಲಿ ಮಾತ್ರ ಲಭ್ಯವಿದೆ.