ಮುಂಬೈ(ಏ.15); ಬಜಾಜ್ ಹಾಗೂ KTM ಬೈಕ್‌ಗಳೆಂದರೆ ತಕ್ಷಣ ನೆನಪಾಗುವುದು ಪಲ್ಸಾರ್ ಹಾಗೂ ಡ್ಯೂಕ್. ಕಾರಣ ಬಜಾಜ್ ಪಲ್ಸಾರ್ ಹಾಗೂ KTM ಡ್ಯೂಕ್ ಭಾರತದಲ್ಲಿ ಅಷ್ಟರ ಮಟ್ಟಿಗೆ ಮೋಡಿ ಮಾಡಿದೆ. ಇದೀಗ ಈ ಎರಡು ಕಂಪನಿ ಜೊತೆಯಾಗಿ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆ ಮಾಡಲು ಸಜ್ಜಾಗಿದೆ. ಸದ್ಯ ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಬಜಾಜ್ ಹಾಗೂ KTM ಕಂಪನಿಗಳ ಪ್ಲಾನ್ ಅರ್ಧಕ್ಕೆ ಸ್ಥಗಿತಗೊಂಡಿದೆ. ಆದರೆ ಲಾಕ್‌ಡೌನ್ ಬಳಿಕ ಬಜಾಜ್ -KTM ಎಲೆಕ್ಟ್ರಿಕ್ ಮೊಪೆಡ್ ಮಾರುಕಟ್ಟೆಗೆ ಪ್ರವೇಶಿಸಲಿದೆ.

ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ದುಬಾರಿ ಬೈಕ್; ಇಲ್ಲಿದೆ ಲಿಸ್ಟ್!...

ಬಜಾಜ್ ಹಾಗೂ KTM 2019ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್ ಉತ್ಪಾದಿಸಲು ಒಪ್ಪಂದ ಮಾಡಿಕೊಂಡಿದೆ. ಇದೀಗ ಈ ಒಪ್ಪಂದದ ಅಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ ಮೊದಲು ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆ ಮಾಡಲು ಮುಂದಾಗಿದೆ. ಪುಣೆಯಲ್ಲಿರುವ ಬಜಾಜ್ ಉತ್ಪಾದನ ಘಟಕದಲ್ಲಿ ನೂತನ ಎಲೆಕ್ಟ್ರಿಕ್ ಮೊಪೆಡ್ ನಿರ್ಮಾಣವಾಗಲಿದೆ. 

ಬಜಾಜ್ ಹಾಗೂ KTM ಜೊತೆಯಾಗಿ ಎಲೆಕ್ಟ್ರಿಕ್ ಮೋಟಾರ್ ಹಾಗೂ ಬ್ಯಾಟರಿ ಅಭಿವೃದ್ಧಿ ಪಡಿಸಲಿದೆ. ಬಜಾಜ್ ಈಗಾಗಲೆ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ಹೀಗಾಗಿ ಇದೀಗ ಜೊತೆಯಾಗಿ ಮೊಪೆಡ್ ಸ್ಕೂಟರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಕೊರೋನಾ ವೈರಸ್ ಕಾರಣ ಎಲ್ಲಾ ಆಟೋಮೊಬೈಲ್ ಕಂಪನಿಗಳ ಉತ್ಪಾದನೆ ಸ್ಥಗಿತಕೊಂಡಿದೆ. ಹೀಗಾಗಿ ನೂತನ ಮೊಪೆಡ್ ಬಿಡುಗಡೆ ಕೊಂಟ ವಿಳಂಬಗವಾಗಲಿದೆ.

ಬಜಾಜ್ ಮೂಲಗಳ ಪ್ರಕಾರ ನೂತನ ಬೈಕ್ 2022ರ ಆರಂಭದಲ್ಲಿ ಬಿಡುಗಡೆಯಾಗಲಿದೆ. ಇನ್ನು ಕಡಿಮೆ ಬೆಲೆ ಗರಿಷ್ಠ ಮೈಲೇಜ್ ನೀಡಲಿದೆ ಎಂದಿದೆ. ಈ ಕುರಿತ ಇನ್ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.