ನವದೆಹಲಿ(ಮಾ.21): ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಹಾಗೂ ಕ್ಲಾಸಿಕ್ ಬೈಕ್‌ಗಳ ಆಲೋಯ್ ವೀಲ್ಹ್ ಬೆಲೆ ಬಹಿರಂಗ ಪಡಿಸಿದೆ. ಇದೀಗ ಎಲ್ಲಾ ರಾಯಲ್ ಎನ್‌ಫೀಲ್ಡ್ ಶೋ ರೂಂಗಳಲ್ಲಿ ಆಲೋಯ್ ವೀಲ್ಹ್ ಲಭ್ಯವಿದೆ. ಈ ಮೂಲಕ ಗ್ರಾಹಕರು ಬೆರೆಡೆ ಮಾಡಿಫಿಕೇಶನ್ ಮಾಡುವ ಅಗತ್ಯವಿಲ್ಲ. ಅದೀಕೃತ RE ಬ್ರ್ಯಾಂಡ್ ಆಲೋಯ್ ವೀಲ್ಹ್ ಅಳವಿಸಬಹುದು.

ಇದನ್ನೂ ಓದಿ: ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!

ಥಂಡರ್‌ಬರ್ಡ್, ಕ್ಲಾಸಿಕ್ 350 ಹಾಗೂ 500 ಬೈಕ್‌ಗಳ ಅಲೋಯ್ ವೀಲ್ಹ್  ಬೆಲೆ 10,000 ರೂಪಾಯಿ. ಇನ್ನು ಅಲೋಯ್ ವೀಲ್ಹ್‌ಗೆ 2 ವರ್ಷದ ವಾರೆಂಟಿ ಕೂಡ ನೀಡಲಾಗುತ್ತೆ. ಇದರ ಜೊತೆ ಎಕ್ಸ್‌ಚೇಂಜ್ ಆಫರ್ ಕೂಡ ಘೋಷಿಸಲಾಗಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಹೊಂಡಾ CB ಯುನಿಕಾರ್ನ್ ಬೈಕ್ ಬಿಡುಗಡೆ!

ಭಾರತದಲ್ಲಿ ರಾಯಲ್‌ಫೀಲ್ಡ್ ಬೈಕ್ ಹೆಚ್ಚು ಮಾಡಿಫೈ ಮಾಡಲಾಗುತ್ತೆ. ಶೋ ರೂಂನಿಂದ ಬೈಕ್ ಖರೀದಿಸಿ ನೇರವಾಗಿ ಬೇರೆಡೆಯಲ್ಲಿ ಮಾಡಿಫಿಕೇಶನ್ ಮಾಡಲಾಗುತ್ತೆ. ಇದೀಗ ರಾಯಲ್ ಎನ್‌ಫೀಲ್ಡ್ ಅಲೋಯ್ ವೀಲ್ಹ್ ಬಿಡುಗಡೆ ಮಾಡಿದೆ. ಹೀಗಾಗಿ ಮಾಲೀಕರು ಶೋ ರೂಂನಲ್ಲೇ ನೆಚ್ಚಿನ ಅಲೋಯ್ ವೀಲ್ಹ್ ಹಾಕಿಸಿಕೊಳ್ಳಬಹುದು.