ಬೈಕ್-ಸ್ಕೂಟರ್ ಬದಲಾಯಿಸುತ್ತೀರಾ?- ಇಲ್ಲಿದೆ ಅತ್ಯುತ್ತಮ ಆಯ್ಕೆ!

ಹಳೇ ದ್ವಿಚಕ್ರ ವಾಹನ ಬದಲಾಯಿಸಿ, ಹೊಸ ವಾಹನ ಖರೀದಿಸಲು ಮುಂದಾಗಿದ್ದೀರಾ? ಅಥವಾ ಹೊಸ ಬೈಕ್ ಸ್ಕೂಟರ್ ಖರೀದಿಸಲು ಯೋಜನೆ ಹಾಕಿಕೊಂಡಿದ್ದರೆ ಈ ವರ್ಷ ಅತ್ಯುತ್ತಮ ಆಯ್ಕೆಗಳಿವೆ. ಈ ವರ್ಷ  ಸುರಕ್ಷತೆ ದೃಷ್ಟಿಯಿಂದ ABS,CBS ಬ್ರೇಕಿಂಗ್ ಸಿಸ್ಟಮ್ ಹಾಗೂ ಹೆಚ್ಚುವರಿ ಫೀಚರ್ಸ್‌ನೊಂದಿಗೆ ಹಲವು ಬೈಕ್ ಹಾಗೂ ಸ್ಕೂಟರ್ ಬಿಡುಗಡೆಯಾಗಿದೆ. ಅತ್ಯುತ್ತಮ ಬೈಕ್ ವಿವರ ಇಲ್ಲಿದೆ.

We guess you are thinking of changing your two wheeler Well here goes couple of option

ಬೆಂಗಳೂರು(ಮಾ.20): 2019ರಲ್ಲಿ ಬೈಕ್ ಅಥವಾ ಸ್ಕೂಟರ್ ಖರೀದಿಸಲು ಅತ್ಯುತ್ತಮ ಸಮಯ. ಈ ವರ್ಷ ಹಲವು ಬೈಕ್ ಹಾಗೂ ಸ್ಕೂಟರ್ ಬಿಡುಡೆಯಾಗಿದೆ. ವಿಶೇಷ ಅಂದರೆ ನೂತನ ಬೈಕ್ ಎಲ್ಲೂ ಗರಿಷ್ಠ ಸುರಕ್ಷತೆ ಒದಗಿಸಲಿದೆ. ಕೇಂದ್ರ ಸರ್ಕಾರದ ನೂತನ ನಿಯಮದ ಪ್ರಕಾರ 125 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಬೈಕ್‌ಗಲು ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸುವುದು ಖಡ್ಡಾಯ. ಇದರ ಜೊತೆಗೆ ಹೆಚ್ಚುವರಿ ಫೀಚರ್ಸ್ ಕೂಡ ಲಭ್ಯವಿದೆ. 47,000 ರೂಪಾಯಿಂದ 10 ಲಕ್ಷ ರೂಪಾಯಿ ವರೆಗಿನ ಬೈಕ್ ವಿವರ ಇಲ್ಲಿ ನೀಡಲಾಗಿದೆ. 

We guess you are thinking of changing your two wheeler Well here goes couple of option

ಹೊಂಡಾ CB ಯುನಿಕಾರ್ನ್
ಬೆಲೆ: 78,815 (ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ(HMSI) CB ಯುನಿಕಾರ್ನ್ 150 ಬೈಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸಿ ನೂತನ ಹೊಂಡಾ CB ಯುನಿಕಾರ್ನ್ ಬೈಕ್ ಬಿಡುಗಡೆಯಾಗಿದೆ.ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿರುವ ನೂತನ ಹೊಂಡಾ CB ಯುನಿಕಾರ್ನ್ ಬೈಕ್ ಬೆಲೆ 78,815 ರೂಪಾಯಿ(ಎಕ್ಸ್  ಶೋ ರೂಂ).  149.2 2cc, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  12.91bhp ಪವರ್(@ 8,000rpm) ಹಾಗೂ 12.80Nm ಟಾರ್ಕ್(@ 5,500rpm)ಟಾರ್ಕ್ ಉತ್ಪಾದಿಸಲಿದೆ.

ಬಜಾಜ್ ಪಲ್ಸಾರ್ 180F
ಬೆಲೆ: 87,450 ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಬಜಾಜ್ ಪಲ್ಸಾರ್ 180F ಬಿಡುಗಡೆಯಾಗಿದೆ. 220F ಶೈಲಿಯಲ್ಲಿರುವ ನೂತನ ಬೈಕ್ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬಜಾಜ್ ಪಲ್ಸಾರ್ 180F ನಿಯಾನ್ ಎಡಿಶನ್ ಬೆಲೆ 87,450 ರೂಪಾಯಿ(ಎಕ್ಸ್ ಶೋ ರೂಂ). ಪಲ್ಸಾರ್ 180 ಎಂಜಿನ್ ನೂತನ ಬೈಕ್‌ನಲ್ಲೂ ಬಳಸಲಾಗಿದೆ.  178.6 ಸಿಸಿ, 2-ವೇಲ್ವ್, ಏರ್‌ಕೂಲ್ಡ್ DTS-i ಎಂಜಿನ್,  17 BHP ಪವರ್  14.2 Nm ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಇದನ್ನೂ ಓದಿ: ಬಜಾಜ್ ಪಲ್ಸರ್ 150 vs KTM 125 ಡ್ಯೂಕ್ ರೇಸ್- ಅಚ್ಚರಿ ಫಲಿತಾಂಶ!

TVS ಸ್ಟಾರ್ ಸಿಟಿ ಕಾರ್ಗಿಲ್ ಎಡಿಶನ್
ಬೆಲೆ: 54,399 ರೂಪಾಯಿ(ಎಕ್ಸ್ ಶೋ ರೂಂ). 

We guess you are thinking of changing your two wheeler Well here goes couple of option
TVS ಮೋಟರ್ ಸ್ಟಾರ್ ಸಿಟಿ + ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ವಿಶೇಷ ಅಂದರೆ 1999ರ ಕಾರ್ಗಿಲ್ ಯುದ್ಧದ ಹಾಗೂ ಹುತಾತ್ಮ ಯೋಧರಿಗಾಗಿ  ನೂತನ ಕಾರ್ಗಿಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಭಾರತೀಯ ಸೇನೆಯ ಬಣ್ಣದಲ್ಲಿ ನೂತನ ಬೈಕ್ ಲಭ್ಯವಿದೆ. VS ಕಾರ್ಗಿಲ್ ಎಡಿಶನ್ ಬೈಕ್ ಬೆಲೆ 54,399 ರೂಪಾಯಿ(ಎಕ್ಸ್ ಶೋ ರೂಂ). TVS ಕಾರ್ಗಿಲ್ ಎಡಿಶನ್ ಬೈಕ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. TVS ಮೋಟರ್ ಸ್ಟಾರ್ ಸಿಟಿ + ಎಂಜಿನ್ ಹಾಗೂ ವಿನ್ಯಾಸ ಹೊಂದಿದೆ. 110 ಸಿಸಿ, ಸಿಂಗಲ್ ಸಿಲಿಂಡರ್ ಎಂಜಿನ್, 8bhp ಹಾಗೂ 8.7 nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಯಮಹಾ MT-15 
ಬೆಲೆ: 1.39 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಸ್ಪೋರ್ಟ್ ಲುಕ್, ಅಗ್ರೆಸ್ಸೀವ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿರುವ ಯಮಹಾ MT-15 ಬೈಕ್ ಈಗಾಗಲೇ ಬಿಡುಗಡೆಯಾಗಿದೆ. KTM,TVS ಅಪಾಚೆ ಹಾಗೂ ಬಜಾಜ್ ಪಲ್ಸಾರ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿರೋ ಈ ಬೈಕ್, ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, SOHC, 4-ವೇಲ್ವ್, 155 cc, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಿದ್ದು,  19.3 PS ಪವರ್ (@ 10,000 rpm) ಹಾಗೂ 14.7 Nm ಟಾರ್ಕ್(@  8,500 rpm)ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಗೇರ್‌ಬಾಕ್ಸ್ ಹಾಗೂ ಸ್ಲಿಪ್ಪರ್ ಕ್ಲಚ್ ಹೊಂದಿದೆ.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ನೀಡಿ ಹಾರ್ಲೆ ಡೇವಿಡ್ಸನ್ ಖರೀದಿಸಿ - ಭರ್ಜರಿ ಎಕ್ಸ್‌ಚೇಂಜ್ ಆಫರ್!

ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ABS
ಬೆಲೆ: 1.53 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ)

We guess you are thinking of changing your two wheeler Well here goes couple of option
ರಾಯಲ್ ಎನ್‌ಫೀಲ್ಡ್ 350 ಬೈಕ್ ಇದೀಗ ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಈ ಮೂಲಕ ಅವಧಿಗೂ ಮುನ್ನ ಕೇಂದ್ರ ಸರ್ಕಾರದ ನಿಯಮ ಪಾಲಿಸಿದೆ. ನೂತನ ರಾಯಲ್ ಎನ್‌ಫೀಲ್ಡ್ ಬೈಕ್ ABS ತಂತ್ರಜ್ಞಾನದೊಂದಿಗೆ ಈಗಾಲೇ ಬಿಡುಗಡೆಯಾಗಿದೆ. ಆದರೆ ಕ್ಲಾಸಿಕ್ 350 ಬೈಕ್ ಇದೀಗ ABS ತಂತ್ರಜ್ಞಾನ ಅಳವಡಿಸಿಕೊಂಡಿದೆ.ನೂತನ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ABS ಬೈಕ್ ಬೆಲೆ 1.53 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ). ABS ಇಲ್ಲದ ಹಳೇ ಕ್ಲಾಸಿಕ್ 350 ಬೈಕ್‌ಗಿಂತ ನೂತನ ಬೈಕ್ ಬೆಲೆ 5800 ರೂ. ಹೆಚ್ಚಾಗಿದೆ. 

ಸುಜುಕಿ V Strom 650XT
ಬೆಲೆ: 7. 46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಸುಜುಕಿ ಮೋಟಾರ್ ಸಂಸ್ಥೆಯ ನೂತನ ಸುಜುಕಿ ವಿ ಸ್ಟ್ರೋಮ್ 650 XT ABS ಬೈಕ್ ಜನವರಿಯಲ್ಲಿ ಬಿಡುಗಡೆಯಾಗಿದೆ.  ನೂತನ ವಿ ಸ್ಟ್ರೋಮ್ 650 ಬೈಕ್ 645 ಸಿಸಿ ಇಂಜಿನ್ ಹೊಂದಿದೆ. ಕವಾಸಕಿ ನಿಂಜಾ 650 ಬೈಕ್‌ಗೆ ಪೈಪೋಟಿಯಾಗಿ ಇದೀಗ ಸುಜುಕಿ ವಿ ಸ್ಟ್ರೋಮ್ 650 ರಸ್ತೆಗಿಳಿದಿದೆ. ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ಬೆಲೆ 7. 46 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಲಿಕ್ವಿಡ್ ಕೂಲ್‌ಡ್, 70 ಬಿಹೆಚ್‌ಪಿ ಪವರ್ ಹಾಗೂ 8,800 ಆರ್‌ಪಿಎಂ ಹೊಂದಿದೆ.  ಟ್ವಿನ್ ಇಂಜಿನ್ ನೂತನ ಸುಜುಕಿ ವಿ ಸ್ಟ್ರೋಮ್ 650 ಬೈಕ್ ವಿಶೇಷತೆ.

ಇದನ್ನೂ ಓದಿ: ಶೀಘ್ರದಲ್ಲಿ ಎಪ್ರಿಲಿಯಾ 160cc ಮ್ಯಾಕ್ಸಿ ಸ್ಕೂಟರ್ ಬಿಡುಗಡೆ!

ಯಮಹಾ FZ, ಫೆಜರ್ ABS ಬೈಕ್ 
ಬೆಲೆ : 1.33 ಲಕ್ಷ ರೂಪಾಯಿ, ಫೆಜರ್ ABS ಬೆಲೆ 1.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) 

We guess you are thinking of changing your two wheeler Well here goes couple of option
ಯಮಹಾ ಬೈಕ್ ಇದೀಗ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಎರುಡು ಬೈಕ್ ಜನವರಿಯಲ್ಲಿ ಬಿಡುಗಡೆ ಮಾಡಿದೆ. ಡುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಯಮಹಾ FZ, ಫೆಜರ್ ABS ಬೈಕ್ ಈಗಾಗಲೇ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಯಮಹಾ FZ 25 ABS ಬೈಕ್ ಬೆಲೆ 1.33 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಹಾಗೂ ಫೆಜರ್ ABS ಬೆಲೆ 1.43 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ನಿಗಧಿಪಡಿಸಲಾಗದೆ.  ಎಬಿಎಸ್ ರಹಿತ ಬೈಕ್‌ಗಿಂತ 12,000 ರೂಪಾಯಿ ಹೆಚ್ಚಾಗಿದೆ.

ಕವಾಸಕಿ ನಿಂಜಾ ZX-6R
ಬೆಲೆ : 10.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಖವಾಸಕಿ ಇಂಡಿಯಾ ನೂತನ ನಿಂಜಾ ZX-6R ಸೂಪರ್ ಬೈಕ್ ಜನವರಿಯಲ್ಲಿ ಬಿಡುಗಡೆಯಾಗಿದೆ.  ನಿಂಜಾ ZX-6R ಬೈಕ್ ಬೆಲೆ 10.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹೊಸ ವಿನ್ಯಾಸದೊಂದಿಗೆ ರಸ್ತೆಗಿಳಿದಿರುವ ನೂತನ ನಿಂಜಾ ZX-6R ಬೈಕ್ ಭಾರತದಲ್ಲೇ ಬಿಡಿ ಭಾಗಗಳ ಜೋಡಣೆ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ನಿಂಜಾ ZX-6R ಬೈಕ್ 636 ಸಿಸಿ, 4 ಸಿಲಿಂಡರ್ ಎಂಜಿನ್, 128 bhp ಪವರ್ ಹಾಗೂ 70.5nm ಪೀಕ್ ಟಾರ್ಕ್ ಉತ್ವಾದಿಸಲಿದೆ. 6 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಖವಾಸಕಿ ಇಂಟೆಲಿಜೆಂಟ್ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್(KIBS),ಖವಾಸಕಿ ಟ್ರಾಕ್ಷನ್ ಕಂಟ್ರೋಲ್(KTRC), ಖವಾಸಕಿ ಕ್ವಿಕ್ ಶಿಫ್ಟರ್( KQS) ತಂತ್ರಜ್ಞಾನ ಹೊಂದಿದೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಆಲೋಯ್ ವೀಲ್ಹ್ ಹಾಕಿದ್ರೆ ಎಚ್ಚರ!

ಅವಾನ್‌ ಇಲೆಕ್ಟ್ರಿಕ್‌ ಸ್ಕೂಟರ್
ಬೆಲೆ : 47,000 ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಪುಣೆ ಮೂಲದ ಅವನ್ ಮೋಟಾರ್ಸ್ ಭಾರತದ ಅತ್ಯಂತ ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಅವನ್ ಮೋಟಾರ್ಸ್ ನೂತನ ಕ್ಸಿರೋ ಪ್ಲಸ್(XERO PLUS)ಎಲೆಕ್ಟ್ರಿಕ್ ಸ್ಕೂಟರ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ನೂತನ ಅವನ್ XERO PLUS ಸ್ಕೂಟರ್ ಬೆಲೆ 47,000 ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 110 ಕಿ.ಮೀ ಪ್ರಯಾಣ ಮಾಡಬಹುದು. ಎರಡು ಬ್ಯಾಟರಿ ಇರುವುದರಿಂದ ಒಂದು ಬ್ಯಾಟರಿ ಗರಿಷ್ಠ 60 ಕಿ.ಮೀ ಪ್ರಯಾಣ ಒದಗಿಸಲಿದೆ. ಎರಡು ಬ್ಯಾಟರಿಗಳಿಂದ ಒಟ್ಟು 110 ಕಿ.ಮೀ ಪ್ರಯಾಣ ರೇಂಜ್ ನೀಡಲಿದೆ.

ಯಮಹಾ ಫ್ಯಾಸಿನೋ ಡಾರ್ಕ್ ನೈಟ್
ಬೆಲೆ:  56,793 ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಯಮಹಾ ಫ್ಯಾಸಿನೋ ಡಾರ್ಕ್ ನೈಟ್ ಎಡಿಶನ್ ಸ್ಕೂಟರ್ ಹೊಸ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಡಾರ್ಕ್ ನೈಟ್ ಎಡಿಶನ್  ಸ್ಕೂಟರ್ ಡಾರ್ಕ್ ಬ್ಲಾಕ್ ಹಾಗೂ ಮರೂನ್ ಸೀಟ್ ಹೊಂದಿದೆ. ಯುನಿಫೈಡ್ ಬ್ರೇಕಿಂಗ್ ಸಿಸ್ಟಮ್(UBS) ಇದು ಹೊಂಡಾದ ಕಾಂಬಿ ಬ್ರೇಕಿಂಗ್ ಸಿಸ್ಟಮ್(CBS) ಸರಿಸಮವಾಗಿದೆ. ಇನ್ನು ಎಂಜಿನ್‍ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.113 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್,  7 bhp ಪವರ್ ಹಾಗೂ 8.1 Nm ಪೀಕ್ ಪವರ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. 

ಸುಜುಕಿ ಆ್ಯಸೆಸ್ 125 ಸಿಸಿ CBS
ಬೆಲೆ: 56,667 ರೂಪಾಯಿ(ಎಕ್ಸ್ ಶೋ ರೂಂ)

We guess you are thinking of changing your two wheeler Well here goes couple of option
ಸುಜುಕಿ ಸಂಸ್ಥೆಯ ಆಸೆಸ್ 125 ಸಿಸಿ  ಸ್ಕೂಟರ್ CBS(ಕಾಂಬಿ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. CBS ರಹಿತ ಸ್ಕೂಟರ್ ಬೆಲೆ 55,977 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ನೂತನ  125 ಸಿಸಿ CBS ಸ್ಕೂಟರ್ ಬೆಲೆ 56,667 ರೂಪಾಯಿ(ಎಕ್ಸ್ ಶೋ ರೂಂ).  CBS ತಂತ್ರಜ್ಞಾನದ ಜೊತೆಗೆ ಹೆಚ್ಚುವರಿ ಫೀಚರ್ಸ್ ಅಳವಡಿಸಲಾಗಿದೆ. ಅಲೋಯ್ ವೀಲ್ಹ್ಸ್, ಅನಲಾಗ್ ಡಿಜಿಟಲ್ ಮೀಟರ್, ಪುಶ್ ಸೆಂಟ್ರಲ್ ಲಾಕ್ ಸಿಸ್ಟಮ್, ಲಾಂಗ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ನೀಡಲಾಗಿದೆ.
 

Latest Videos
Follow Us:
Download App:
  • android
  • ios