ನವದೆಹಲಿ(ಮಾ.15): ಹೊಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ(HMSI) CB ಯುನಿಕಾರ್ನ್ 150 ಬೈಕ್ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ನಿಯಮದ ಪ್ರಕಾರ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಅಳವಡಿಸಿ ನೂತನ ಹೊಂಡಾ CB ಯುನಿಕಾರ್ನ್ ಬೈಕ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ಯಮಹಾ MT-15 ಬೈಕ್ ಬಿಡುಗಡೆ- ಡ್ಯೂಕ್, ಅಪಾಚೆಗೆ ಪೈಪೋಟಿ!

ABS ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿರುವ ನೂತನ ಹೊಂಡಾ CB ಯುನಿಕಾರ್ನ್ ಬೈಕ್ ಬೆಲೆ 78,815 ರೂಪಾಯಿ(ಎಕ್ಸ್  ಶೋ ರೂಂ).  149.2 2cc, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು,  12.91bhp ಪವರ್(@ 8,000rpm) ಹಾಗೂ 12.80Nm ಟಾರ್ಕ್(@ 5,500rpm)ಟಾರ್ಕ್ ಉತ್ಪಾದಿಸಲಿದೆ.

ಇದನ್ನೂ ಓದಿ: ಬಜಾಜ್ ಪಲ್ಸಾರ್ 180F ಬಿಡುಗಡೆ - ಪೈಪೋಟಿ ಶುರು!

ಫ್ರಂಟ್ 260mm ಡಿಸ್ಕ್  ಹಾಗೂ 130mm ರೇರ್ ಡ್ರಮ್ ಬೇಕ್ ಹೊಂದಿದೆ.  18 ಇಂಚಿನ ಅಲೋಯ್ ವೀಲ್ಹ್ ಹೊಂದಿದೆ. ಬಜಾಜ್ ಪಲ್ಸರ್ 150 ಬೈಕ್‌ಗೆ ಪ್ರತಿಸ್ಪರ್ಧಿಯಾಗಿರುವ ಈ ಬೈಕ್ ಇದೀಗ ABS ಮೂಲಕವೂ ಪೈಪೋಟಿ ನೀಡಲಿದೆ.