Asianet Suvarna News Asianet Suvarna News

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಬಿಡುಗಡೆ-ಜಾವಾಗೆ ಪೈಪೋಟಿ!

ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ 350X ಬೈಕ್ ಹೊಸ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಹೊಂದಿರುವ ಥಂಡರ್‌ಬರ್ಡ್ 350X  ಬೈಕ್ ಬೆಲೆ ಎಷ್ಟು? ಇಲ್ಲಿದೆ ಹೆಚ್ಚಿನ ವಿವರ

Royal Enfield Thunderbird 350X ABS priced at Rs 1.63 lakh
Author
Bengaluru, First Published Nov 10, 2018, 5:42 PM IST

ನವದೆಹಲಿ(ನ.10): ಎಬಿಎಸ್ ಬ್ರೇಕ್ ಸಿಸ್ಟಮ್ ಅಳವಡಿಕೆ ಜೊತೆಗೆ ಕೆಲ ಹೆಚ್ಚುವರಿ ಫೀಚರ್ಸ್‌ನೊಂದಿಗೆ ನೂತನ  ಥಂಡರ್‌ಬರ್ಡ್ 350X ಬೈಕ್ ಬೆಲೆ  ನಿಗದಿಪಡಿಸಲಾಗಿದೆ. 2018ರ ಅಂತ್ಯದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪೆನಿಯ ಎಲ್ಲಾ ಬೈಕ್‌ಗಳಿಗೆ ಎಬಿಎಸ್ ಅಳವಡಿಸುವುದಾಗಿ ಹೇಳಿತ್ತು. ಇದೀಗ ಥಂಡರ್‌ಬರ್ಡ್ ಬೈಕ್ ಕೂಡ ಎಬಿಎಸ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದೆ.

Royal Enfield Thunderbird 350X ABS priced at Rs 1.63 lakh

ಎಬಿಎಸ್ ಬ್ರೇಕಿಂಗ್‌ನಿಂದ ಇದೀಗ ಥಂಡರ್‌ಬರ್ಡ್ 350X ಬೈಕ್ ಕೂಡ ಗರಿಷ್ಠ ಸುರಕ್ಷತೆ ಒದಗಿಸೋ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.  ನೂತನ ಥಂಡರ್‌ಬರ್ಡ್ 350X ಬೈಕ್ ಡ್ಯುಯೆಲ್ ಚಾನೆಲ್ ಎಬಿಎಸ್ ಬೈಕ್ ಬೆಲೆ 1.63 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದ ಸ್ಟಾಂಡರ್ಡ್‌ ಬೈಕ್‌ಗಿಂತ 7,000 ರೂಪಾಯಿ ಹೆಚ್ಚಳವಾಗಿದೆ. 

Royal Enfield Thunderbird 350X ABS priced at Rs 1.63 lakh

ರಾಯಲ್ ಎನ್‌ಫೀಲ್ಡ್ ಸಿಗ್ನಲ್ಸ್ 350, ಹಿಮಾಲಯನ್ ಹಾಗೂ ಕ್ಲಾಸಿಕ್ 500 ಬೈಕ್‌ಗಳಲ್ಲಿಈಗಾಗಲೇ ಎಬಿಎಸ್ ತಂತ್ರಜ್ಞಾನವಿದೆ. ಇದಕ್ಕೆ ಥಂಡರ್‌ಬರ್ಡ್ 350X ಬೈಕ್ ಕೂಡ ಸೇರಿಕೊಂಡಿದೆ. ನೂತನ ಥಂಡರ್‌ಬರ್ಡ್ 350X ಬೈಕ್ 346 ಸಿಸಿ ಎಂಜಿನ್, 19.8hp, 28nm ಟಾರ್ಕ್ ಹಾಗೂ 5 ಸ್ಪೀಡ್ ಗೇರ್ ಹೊಂದಿದೆ.

Follow Us:
Download App:
  • android
  • ios