ಚೆನ್ನೈ(ಆ.16):  ಚೆನ್ನೈ ಮೂಲದ ಭಾರತೀಯ ಆಟೋಮೈಕರ್ ರಾಯಲ್ ಎನ್‌ಫೀಲ್ಡ್ ದೇಶ ವಿದೇಶದಲ್ಲಿ ಬಹು ಬೇಡಿಕೆಯ ಬೈಕ್ ಆಗಿ ಹೊರಹೊಮ್ಮಿದೆ. ಸುದೀರ್ಘ ವರ್ಷಗಳಿಂದ ಉತ್ಪಾದನೆ ಕಾಣುತ್ತಿರುವ ವಿಶ್ವದ ಏಕೈಕ ಬೈಕ್ ಅನ್ನೋ ಹೆಗ್ಗಳಿಕೆಗೂ ರಾಯಲ್ ಎನ್‌ಫೀಲ್ಡ್ ಪಾತ್ರವಾಗಿದೆ. ರಾಯಲ್ ಎನ್‌ಫೀಲ್ಡ್ ತನ್ನೆಲ್ಲಾ ಬೈಕ್‌ಗಳನ್ನು BS6 ಎಂಜಿನ್‌ಗೆ ಪರಿವರ್ತಿಸಿದೆ. ಇದೀಗ ಹೊಚ್ಚ ಹೊಚ್ಚ BS6 ರಾಯಲ್ ಎನ್‌ಫೀಲ್ಡ್ ಬುಲೆಟ್ 350, ಹಲವು ವಿಶೇಷತೆಗಳೊಂದಿಗೆ ಬೈಕ್ ಪ್ರಿಯರನ್ನು ಸಳೆಯುತ್ತಿದೆ.

ಕೇವಲ 3 ಕ್ಲಿಕ್, ಮನೆಗೆ ಬರಲಿದೆ ರಾಯಲ್ ಎನ್‌ಫೀಲ್ಡ್ ಬೈಕ್!...

ರಾಯಲ್ ಎನ್‌ಫೀಲ್ಡ್ ಬುಲೆಟ್ 350 ರೆಟ್ರೋ ಸ್ಟೈಲ್ ಹೊಂದಿದೆ. ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕ್ರೋಮ್ ಡಿಸೈನ್ ಹೊಂದಿರುವ ರೌಂಡ್ ಹೆಡ್‌ಲ್ಯಾಂಪ್ಸ್, ರೌಂಡ್ ಟರ್ನ್ ಇಂಡಿಕೇಟರ್, ಟ್ಯಾಂಕ್ ಮೇಲಿನ ರಾಯಲ್ ಎನ್‌ಫೀಲ್ಡ್ ಲೋಗೋ ಹೊರತು ಪಡಿಸಿದರೆ ಹೆಚ್ಚುವರಿ ಗ್ರಾಫಿಕ್ಸ್ ಇಲ್ಲ. ಸಿಂಗಲ್ ಸೀಟ್ ಹೊಂದಿದೆ. ವಿಶೇಷ ಅಂದರೆ 6 ಬಣ್ಣಗಳಲ್ಲಿ ನೂತನ ರಾಯಲ್ ಎನ್‌ಫೀಲ್ಡ್ ಬುಲೆಟ್ 350 BS6 ಬೈಕ್ ಲಭ್ಯವಿದೆ.

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

ರಾಯಲ್ ಎನ್‌ಫೀಲ್ಡ್ ಬುಲೆಟ್ 350
ಉದ್ದ = 2170 mm
ಅಗಲ = 810 mm
ಎತ್ತರ =  1120 mm
ವೀಲ್ಹ್ ಬೇಸ್ =  1395 mm
ಗ್ರೌಂಡ್ ಕ್ಲಿಯರೆನ್ಸ್ =  135 mm
ಸೀಟ್ ಎತ್ತರ =  800 mm
ಇಂಧನ ಸಾಮರ್ಥ್ಯ =  13.5-litres
ಕರ್ಬ್ ತೂಕ =  191 kilograms

ನೂತನ ರಾಯಲ್ ಎನ್‌ಫೀಲ್ಡ್ 350 ಬುಲೆಟ್ ಬೈಕ್ 346cc, ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, ಫ್ಯೂಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದೆ.  20.07 PS ಪವರ್ ಹಾಗೂ   28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ. ಇನ್ನು ಒಂದು ಲೀಟರ್ ಪೆಟ್ರೋಲ್‌ಗೆ 30 ರಿಂದ 35 ಕಿ.ಮೀ ಮೈಲೇಜ್ ನೀಡಲಿದೆ.

ಬೆಲೆ: (ಎಕ್ಸ್ ಶೋ ರೂಂ)
ಬುಲೆಟ್ 350 ಸಿಲ್ವರ್ & Onyx ಬ್ಲಾಕ್ = 1.24 ಲಕ್ಷ ರೂಪಾಯಿ
ಬುಲೆಟ್  350 ಬ್ಲಾಕ್ & ಫಾರೆಸ್ಟ್ ಗ್ರೀನ್ = 1.30 ಲಕ್ಷ ರೂಪಾಯಿ
ಬುಲೆಟ್  350 ES ಜೆಟ್ ಬ್ಲಾಕ್, ರೆಗಲ್ ರೆಡ್ & ರಾಯಲ್ ಬ್ಲೂ  = 1.39 ಲಕ್ಷ ರೂಪಾಯಿ