ಚೆನ್ನೈ(ಮೇ.17):BS6 ಎಮಿಶನ್ ಎಂಜಿನ್ ಉತ್ಪಾದನೆ ವೆಚ್ಚ ಹೆಚ್ಚುತ್ತಿರುವ ಕಾರಣ ಕೆಲ ಕಂಪನಿಗಳು ಕೆಲ ವಾಹನಗಳಿಗೆ ಗುಡ್ ಬೈ ಹೇಳಿದೆ. ಇದೀಗ   ರಾಯಲ್ ಎನ್‌ಫೀಲ್ಡ್ ಬೈಕ್ BS6 ಬೈಕ್ ಮೇಲಿನ ಬೆಲೆ ಹೆಚ್ಚಿಸಿದೆ. ಅದರಲ್ಲೂ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಹಾಗೂ ಬುಲೆಟ್ 350 ಬೈಕ್ ಬೆಲೆ ಹೆಚ್ಚಳವಾಗಿದೆ. ಈ ಎರಡೂ ಬೈಕ್ ಮೇಲಿನ ಬೆಲೆಯನ್ನು 2,755 ರೂಪಾಯಿ ಹೆಚ್ಚಿಸಿದೆ. 

ರಾಯಲ್ ಎನ್‌ಫೀಲ್ಡ್ ಮೆಟೊರ್ 350 ಬೈಕ್ ಬಿಡುಗಡೆ ರೆಡಿ, ಬೆಲೆ ಬಹಿರಂಗ!

BS6 ರಾಯಲ್ ಎನ್‌ಫೀಲ್ಡ್ ಸಿಂಗಲ್ ಚಾನೆಲ್ ABS ಬೈಕ್ ಬಿಡುಗಡೆಯಾದ ಇದರ ಬೆಲೆ 1.57 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಬೆಲೆ ಹೆಚ್ಚಳ ಬಳಿಕ ಇದೀಗ 1.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). BS6 ರಾಯಲ್ ಎನ್‌ಫೀಲ್ಡ್ ಡ್ಯುಯೆಲ್ ಚಾನೆಲ್ ABS ಬೈಕ್ ಬೆಲೆ ಇದೀಗ 1.68 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ರಾಯಲ್‌ ಎನ್‌ಫೀಲ್ಡ್ ಫೊಟೊನ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಗೆ ರೆಡಿ!.

ರಾಯಲ್ ಎನ್‌ಫೀಲ್ಡ್ ಬೈಕ್ ಪೈಕಿ ಕಡಿಮೆ ಬೆಲೆಯ ಬೈಕ್ ಆಗಿ ಗುರುತಿಸಿಕೊಂಡಿರುವ ಬುಲೆಟ್ 350 ಬೈಕ್ ಬೆಲೆ ಕೂಡ ಹೆಚ್ಚಳವಾಗಿದೆ. ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್ ಬೆಲೆ  1.21 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ದರ ಪರಿಷ್ಕರಣೆ ಬಳಿಕ ಬುಲೆಟ್ 350 ಬೈಕ್ ಬೆಲೆ 1.24 ಲಕ್ಷ ರೂಪಾಯಿ(ಎಕ್ ಶೋ ರೂಂ). ಇನ್ನು ಬುಲೆಟ್ 350 ಎಲೆಕ್ಟ್ರಿಕ್ ಸ್ಟಾರ್ಟ್ ಬೆಲೆ 1.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ.

ಕ್ಲಾಸಿಕ್ 350 ಹಾಗೂ ಬುಲೆಟ್ 350 ಬೈಕ್ 346 cc ಸಿಂಗಲ್ ಸಿಲಿಂಡರ್,  FI ಎಂಜಿನ್ ಹೊಂದಿದ್ದು,  19.1 bhp ಪವರ್ ಹಾಗೂ   28 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  5 ಸ್ಪೀಡ್ ಗೇರ್ ಬಾಕ್ಸ್ ಹೊಂದಿದೆ