ನವದೆಹಲಿ(ಆ.30): ರಿವೋಲ್ಟ್ ಸ್ಟಾರ್ಟ್ ಅಪ್ ಕಂಪನಿ ಸದ್ಯ ಭಾರತದಲ್ಲಿ ಸಂಚಲನ ಮೂಡಿಸುತ್ತಿದೆ. ದೇಶದಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡೋ ಮೂಲಕ ಹೊಸ ಸಂಚಲನ ಮೂಡಿಸಿದೆ.  ಅತ್ಯುತ್ತಮ ಶೈಲಿ, ಶೀಘ್ರ ಚಾರ್ಜಿಂಗ್, ಮೈಲೇಜ್  ಸೇರಿದಂತೆ  ಎಲ್ಲಾ ವಿಚಾರದಲ್ಲಿ ಉತ್ತಮವಾಗಿದೆ. ಇದೀಗ ರಿವೋಲ್ಟ್ ಮುಂಬೈನಲ್ಲಿ ಡೀಲರ್ ಶಿಫ್ ಆರಂಭಿಸಿದೆ. ಈ ಮೂಲಕ ದೇಶದ ಎಲ್ಲಾ ಭಾಗದಲ್ಲಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಸಿಗುಂತೆ ಮಾಡುವ ಗುರಿ ಇಟ್ಟಕೊಂಡಿದೆ.

2999 ರೂ ಕಂತು ಪಾವತಿಸಿ; ರಿವೋಲ್ಟ್ RV ಎಲೆಕ್ಟ್ರಿಕ್ ಬೈಕ್ ಖರೀದಿಸಿ!

ಮುಂಬೈನಲ್ಲಿ ಶೋ ರೂಂ ತೆರೆದ ರಿವೋಲ್ಟ್ ಕೆಲ ಊಹಾಪೋಹಗಳಿಗೆ ತೆರೆ ಎಳೆದಿದೆ. ರಿವೋಲ್ಟ್ ಭಾರತದ ಕಂಪನಿಯಾಗಿದೆ. ಇಷ್ಟೇ ಅಲ್ಲ ಇಲ್ಲಿ ಉತ್ಪಾದನೆಯಾಗುತ್ತಿರುವ ಬೈಕ್ ಮೇಡ್ ಇನ್ ಇಂಡಿಯಾ ಎಂದು ಸ್ಪಷ್ಟಪಡಿಸಿದೆ. ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಕಂಪನಿ ಸಂಸ್ಥಾಪ ರಾಹುಲ್ ಶರ್ಮಾ ಈ ಕುರಿತು ಮಾಹಿತಿ ನೀಡಿದ್ದಾರೆ. ರಾಹುಲ್ ಶರ್ಮಾ ಹೆಸರು ಭಾರತದಲ್ಲಿ ಹೊಸದಲ್ಲ. ಕಾರಣ ಮೈಕ್ರೋಮ್ಯಾಕ್ಸ್ ಮೊಬೈಲ್ ಸಹ ಸಂಸ್ಥಾಪಕನಾಗಿದ್ದ ರಾಹುಲ್ ಶರ್ಮಾ, ಇದೀಗ ರಿವೋಲ್ಟ್ ಎಲೆಕ್ಟ್ರಿಕ್ ವಾಹನ ಮೂಲಕ ಸದ್ದು ಮಾಡುತ್ತಿದ್ದಾರೆ.

ಅಮೇಜಾನ್‌ನಲ್ಲಿ ಬುಕ್ ಮಾಡಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್!.

RV400 ಹಾಗೂ RV300 ಎಲೆಕ್ಟ್ರಿಕ್ ಬೈಕ್ ಹೆಚ್ಚು ಜನಪ್ರಿಯವಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿ ಗ್ರಾಹಕರನ್ನು ಸಳೆದಿದೆ.  ಕೊರೋನಾ ವೈರಸ್ ಕಾರಣ ದೇಶಾದ್ಯಂತ ಶೋ ರೂಂ ಆರಂಭಿಸುವ ರಿವೋಲ್ಟ್ ಯೋಜನೆಗೆ ಹಿನ್ನಡೆಯಾಯಿತು. ಇದೀಗ ಮುಂಬೈಗೆ ಶೋ ರೂಂ ವಿಸ್ತರಿಸಲಾಗಿದೆ ಎಂದು ರಾಹುಲ್ ಶರ್ಮಾ ಹೇಳಿದ್ದಾರೆ