ನವದೆಹಲಿ(ಜ.29): ಸಣ್ಣ ಕಾರಿಗೆ ಭಾರತದಲ್ಲಿ ಹೆಚ್ಚು ಬೇಡಿಕೆ ಇದೆ. ಮಧ್ಯಮ ವರ್ಗದ ಜನರು ಹೆಚ್ಚು ಸಣ್ಣ ಕಾರಿನ ಮೊರೆ ಹೋಗುತ್ತಾರೆ. ಈ ವಿಭಾದದಲ್ಲಿ ಮಾರುತಿ 800 ಬಳಿಕ ಮಾರುತಿ ಅಲ್ಟೋ ಅದೇ ದಾಖಲೆ ಉಳಿಸಿಕೊಂಡಿದೆ. ಅಲ್ಟೋ ಕಾರಿಗೆ ತೀವ್ರ ಪೈಪೋಟಿ ನೀಡಿದ ಹೆಗ್ಗಳಿಕೆ ರೆನಾಲ್ಟ್ ಕ್ವಿಡ್ ಕಾರಿಗಿದೆ. ಇದೀಗ ರೆನಾಲ್ಟ್ ಕ್ವಿಡ್ ಕಾರು  BS6 ಎಂಜಿನ್ ಅಪ್‌ಗ್ರೇಡೆಡ್ ವರ್ಶನ್ ಬಿಡುಗಡೆಯಾಗಿದೆ.

ಇದನ್ನೂ ಓದಿ: HBC ಕಾಂಪಾಕ್ಟ್ SUV ಕಾರು ಬಿಡುಗಡೆ ಖಚಿತ ಪಡಿಸಿದ ರೆನಾಲ್ಟ್!

ರೆನಾಲ್ಟ್ ಕ್ವಿಡ್ ಬೆಲೆ  2.92 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 4.79 ಲಕ್ಷ ರೂಪಾಯಿ. ಕ್ವಿಡ್ ಕ್ಲೈಂಬರ್ ಬೆಲೆ 4.63 ಲಕ್ಷ ರೂಪಾಯಿಂದ ಗರಿಷ್ಟ ಬೆಲೆ 5.01 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ. ಇದೀಗ ರೆನಾಲ್ಟ್ ಕ್ವಿಡ್ BS6 ಎಂಜಿನ್ ಕಾರಿನ ಎಲ್ಲೆ ವೇರಿಯೆಂಟ್‌ಗಳಿಗೆ 9,000 ರೂಪಾಯಿ ಹೆಚ್ಚಳವಾಗಿದೆ. 

ಇದನ್ನೂ ಓದಿ: ಲಕ್ಕಿ ಡ್ರಾ ಎಡವಟ್ಟು; ಮಾಲೀಕನಿಗೆ ರೆನಾಲ್ಟ್ ಡೀಲರ್ ನೀಡಬೇಕಾಯ್ತು 2 ಲಕ್ಷ ರೂ!

ಎಮಿಶನ್ ಎಂಜಿನ್ ಹೊರತು ಪಡಿಸಿದರೆ ನೂತನ ಕಾರಿನಲ್ಲಿ ಇತರ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದಿನ ಕಾರಿನಲ್ಲಿದ್ದ ಎಂಜಿನ್ ಎಂಜಿನ್ ಪವರ್, ಫೀಚರ್ಸ್ ಈ ಕಾರಿನಲ್ಲೂ ಇರಲಿದೆ. ಕ್ವಿಡ್ ಕಾರು 799cc ಎಂಜಿನ್ ಹೊಂದಿದ್ದು,  54 PS ಪವರ್ ಹಾಗೂ 72 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಕ್ನಿಡ್  ಕ್ಲೈಂಬರ್ ಕಾರು  1.0 ಲೀಟರ್ ಎಂಜಿನ್ ಹೊಂದಿದ್ದು,   68 PS ಪವರ್ ಹಾಗೂ  91 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. 

ರೆನಾಲ್ಟ್ ಟ್ರೈಬರ್ MPV ಕಾರು ಲಾಂಚ್; ಬೆಲೆ 4.95 ಲಕ್ಷ ರೂ!...

ರೆನಾಲ್ಟ್ ಕ್ವಿಡ್ BS6 ಎಂಜಿನ್ ಕಾರಿನ ಬೆಲೆ(ಎಕ್ಸ್ ಶೋ ರೂಂ)
ಕ್ವಿಡ್ STD 0.8: Rs 2.92 ಲಕ್ಷ ರೂ.
ಕ್ವಿಡ್ RXE 0.8: Rs 3.62  ಲಕ್ಷ ರೂ.
ಕ್ವಿಡ್ RXL 0.8: Rs 3.92  ಲಕ್ಷ ರೂ.
ಕ್ವಿಡ್ RXT 0.8: Rs 4.22  ಲಕ್ಷ ರೂ.
ಕ್ವಿಡ್ RXT 1.0L: Rs 4.42  ಲಕ್ಷ ರೂ.
ಕ್ವಿಡ್ RXT 1.0L (O): Rs 4.49  ಲಕ್ಷ ರೂ.
ಕ್ವಿಡ್ RXT 1.0L AMT: Rs   4.72  ಲಕ್ಷ ರೂ.
ಕ್ವಿಡ್ RXT (O) 1.0L AMT: Rs 4.79  ಲಕ್ಷ ರೂ.
ಕ್ವಿಡ್ ಕ್ಲೈಂಬರ್: Rs 4.63  ಲಕ್ಷ ರೂ.
ಕ್ವಿಡ್ ಕ್ಲೈಂಬರ್ (O): Rs 4.71  ಲಕ್ಷ ರೂ.
ಕ್ವಿಡ್ ಕ್ಲೈಂಬರ್ AMT: Rs 4.93  ಲಕ್ಷ ರೂ.
ಕ್ವಿಡ್ ಕ್ಲೈಂಬರ್ (O) AMT: Rs 5.01  ಲಕ್ಷ ರೂ.