ನವದೆಹಲಿ(ಮೇ.12); ಕಳೆದ ವರ್ಷ ರೆನಾಲ್ಟ್ ಟ್ರೈಬರ್ ಭಾರತದಲ್ಲಿ ಬಿಡುಗಡೆಯಾಗಿ ಸಂಚಲನ ಮೂಡಿಸಿತ್ತು. ಮಾರ್ಚ್ 2020ರಲ್ಲಿ ಗರಿಷ್ಠ ಮಾರಾಟ ದಾಖಲೆ ಹೊಂದಿದ್ದ ತನ್ನದೇ ಕಂಪನಿಯ ಕ್ವಿಡ್ ಕಾರನ್ನು ಹಿಂದಿಕ್ಕಿದ ಟ್ರೈಬರ್ ಹೊಸ ಇತಿಹಾಸ ಬರೆದಿತ್ತು. ಬಳಿಕ ಲಾಕ್‌ಡೌನ್ ಕಾರಣ ಎಲ್ಲವೂ ಅದಲು ಬದಲಾಗಿ ಹೋಯಿತು. ಇದೀಗ ಮೇ.18ಕ್ಕೆ ರೆನಾಲ್ಟ್ ಟ್ರೈಬರ್  AMT ಕಾರು ಬಿಡುಗಡೆಯಾಗುತ್ತಿದೆ.

ಹೊಸ ವಿನ್ಯಾಸ, ಗಾತ್ರದಲ್ಲೂ ಬದಲಾವಣೆ; ಬಿಡುಗಡೆಗೆ ರೆಡಿಯಾಗಿದೆ ಮಹೀಂದ್ರ ಥಾರ್!

ಮೇ.18ರಿಂದ ಬುಕಿಂಗ್ ಕೂಡ ಆರಂಭಗೊಳ್ಳಲಿದೆ. ಕಳೆದ ಆಟೋ ಎಕ್ಸ್ಪೋದಲ್ಲಿ ರೆನಾಲ್ಟ್ ಟ್ರಬರ್  AMT ಮಾಡೆಲ್ ಪರಿಚಯಿಸಲಾಗಿತ್ತು. ಎಪ್ರಿಲ್ ಅಂತ್ಯದಲ್ಲಿ ಬಿಡುಗಡೆಯಾಗಬೇಕಿದ್ದ ಈ ಕಾರು, ಲಾಕ್‌ಡೌನ್ ಕಾರಣ ವಿಳಂಬವಾಯಿತು. ನೂತನ ಟ್ರೈಬರ್  AMT ಕಾರಿನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED DRLs, ಮುಂಭಾಗದ ಗ್ರಿಲ್ ಸೇರಿದಂತೆ ಹಲವು ಬದಲಾವಣೆಗಳು ಈ ಕಾರಿನಲ್ಲಿದೆ.

ಜೂನ್ ಆರಂಭದಲ್ಲಿ ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ!.

ರೆನಾಲ್ಟ್ ಟ್ರೈಬರ್  AMT ಕಾರು 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಹೊಂದಿದ್ದು, 95bhp ಪವರ್ ಸಾಮರ್ಥ್ಯ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ರೆನಾಲ್ಟ್ ಟ್ರೈಬರ್  ಕಾರಿನ ಬೆಲೆ 4.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದ ಗರಿಷ್ಠ 6.82 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇದೀಗ ನೂತನ ಟ್ರೈಬರ್  AMT ಕಾರಿನ ಬೆಲೆ 50,000 ರೂಪಾಯಿ ಹೆಚ್ಚಾಗಲಿದೆ.