ಮುಂಬೈ(ಏ.24): ಬಾಲಿವುಡ್ ನಟಿ ವಿದ್ಯಾಬಾಲನ್ ಮನೆಗೆ ಹೊಸ ಅತಿಥಿ ಆಗಮಿಸಿದ್ದಾರೆ. ಹೌದು, ಇದು ನಿಜ ವಿದ್ಯಾ ಬಾಲನ್ ನೂತನ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. 2019ರಲ್ಲಿ ಬಾಲಿವುಡ್ ನಟ-ನಟಿಯರು ಸರದಿ ಸಾಲಿನಲ್ಲಿ ದುಬಾರಿ ಕಾರುಗಳನ್ನು ಖರೀದಿಸುತ್ತಿದ್ದಾರೆ. ಇದೀಗ ವಿದ್ಯಾ ಬಾಲನ್ ಕೂಡ ಈ ಸಾಲಿಗೆ ಸೇರಿದ್ದಾರೆ.

ಇದನ್ನೂ ಓದಿ: ಮಾರುತಿ 800 to BMW: ವರ್ಷದಿಂದ ವರ್ಷಕ್ಕೆ ಬದಲಾಗುತ್ತೆ ಸಚಿನ್ ಕಾರು!

ವಿದ್ಯಾ ಬಾಲನ್ ನೀಲಿ ಬಣ್ಣದ ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರು ಖರೀದಿಸಿದ್ದಾರೆ. ಈ ಸೆಡಾನ್ ಕಾರು ಅತ್ಯಂತ ಆರಾಮದಾಯಕ ಕಾರು. ಮರ್ಸಿಡೀಸ್ ಬೆಂಝ್ ಇ ಕ್ಲಾಸ್ ಕಾರಿನ ಬೆಲೆ 56.57 ಲಕ್ಷ ರೂಪಾಯಿಯಿಂದ ಆರಂಭಗೊಳ್ಳಲಿದೆ. ಟಾಪ್ ವೇರಿಯೆಂಟ್  ಬೆಲೆ 1.50 ಕೋಟಿ ರೂಪಾಯಿ. 

ಇದನ್ನೂ ಓದಿ: ಭಾರತೀಯ ಕಾರ್ಪೆಂಟರ್‌ಗೆ ಜಾಕ್‌ಪಾಕ್- ಲಕ್ಕಿ ಡ್ರಾನಲ್ಲಿ ಬಂತು 2 ಕೋಟಿ ಕಾರು!

ಮರ್ಸಡೀಸ್ ಬೆಂಝ್ ಇ ಕ್ಲಾಸ್ ಕಾರಿನಲ್ಲಿ  4.0 ಲೀಟರ್ ಟರ್ಬೋ ಚಾರ್ಜಡ್ ಪೆಟ್ರೋಲ್ ಎಂಜಿನ್, ಹೊಂದಿದ್ದು,  612 Bhp ಪವರ್ ಹಾಗೂ 850 Nm ಪೀಕ್ ಟಾರ್ಕ್ ಉತ್ಪಾದಿಸಲಿದೆ. ಇದೇ ವಿಭಾಗದಲ್ಲಿ 2-ಲೀಟರ್ ಪೆಟ್ರೋಲ್ ಎಂಜಿನ್,  2.0 ಲೀಟರ್ ಡೀಸೆಲ್ ಎಂಜಿನ್ ಹಾಗೂ 3.0 ಲೀಟರ್ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ.