Asianet Suvarna News Asianet Suvarna News

ರೆನಾಲ್ಟ್ Zoe ಎಲೆಕ್ಟ್ರಿಕ್ ಕಾರು ಬಿಡುಗಡೆ ರೆಡಿ!

ಬಿಡುಗಡೆಯಾಗಲಿದೆ. ಹ್ಯುಂಡೈ ಐ ಟಿ20 ರೀತಿಯ ಹ್ಯಾಚ್‌ಬ್ಯಾಕ್ ಎಲೆಕ್ಟ್ರಿಕ್ ಕಾರು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರಿನ ವಿಶೇಷತೆ, ಮೈಲೇಜ್, ಬೆಲೆ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

Renault India set ot launch  Zoe electric car
Author
Bengaluru, First Published Jan 9, 2020, 8:08 PM IST

ನವದೆಹಲಿ(ಜ.09): ರೆನಾಲ್ಟ್ ಇಂಡಿಯಾ ಭಾರತದಲ್ಲಿ ಕಡಿಮೆ ಬೆಲೆ ಕಾರು ಬಿಡುಗಡೆ ಮಾಡಿ ಯಶಸ್ವಿಯಾಗಿದೆ. ರೆನಾಲ್ಟ್ ಡಸ್ಟರ್ ಮೂಲಕ SUV ಸೆಗ್ಮೆಂಟ್‌ನಲ್ಲಿ ಹೊಸ ಶಕೆ ಆರಂಭಿಸಿದ ರೆನಾಲ್ಟ್, ಬಳಿಕ ಕ್ವಿಡ್ ಕಾರು ಬಿಡುಗಡೆ ಮಾಡಿತು. ಇದರೊಂದಿಗೆ ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಹೊಸ ಇತಿಹಾಸ ಸೃಷ್ಟಿಸಿತು. ಕಳೆದ ವರ್ಷ ಅಂತ್ಯದಲ್ಲಿ ರೆನಾಲ್ಟ್ ಟ್ರೈಬರ್ ಕಾರು ಬಿಡುಗಡೆ ಮಾಡಿದೆ. ಇದೀಗ ಈ ವರ್ಷದಲ್ಲಿ ರೆನಾಲ್ಟ್ Zoe ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ಮುಂದಾಗಿದೆ.\

Renault India set ot launch  Zoe electric car

ಇದನ್ನೂ ಓದಿ: ಬರೋಬ್ಬರಿ 26 ವಾಹನ ಪರಿಚಯಿಸಲು ಸಜ್ಜಾದ ಟಾಟಾ ಮೋಟಾರ್ಸ್!

ಫೆಬ್ರವರಿಯಲ್ಲಿ ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಅಟೋ ಎಕ್ಸ್ಪೋ 2020ದಲ್ಲಿ ರೆನಾಲ್ಟ್  Zoe ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಲಿದೆ. ವಿಶೇಷ ಅಂದರೆ ನೂತನ ರೆನಾಲ್ಟ್  Zoe ಎಲೆಕ್ಟ್ರಿಕ್ ಕಾರಿನ ಬಿಡಿ ಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಜೋಡಣೆ ಮಾಡಲಾಗುತ್ತದೆ. ರೆನಾಲ್ಟ್ ಇಂಡಿಯಾ ಚೆನ್ನೈ ಘಟಕದಲ್ಲಿ ಎಲೆಕ್ಟ್ರಿಕ್ ಕಾರು ನಿರ್ಮಾಣವಾಗಲಿದೆ.

Renault India set ot launch  Zoe electric car

ಇದನ್ನೂ ಓದಿ: BS6 ಎಂಜಿನ್ ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭ!

41kWh ಬ್ಯಾಟರಿ ಹೊಂದಿರುವ ಈ ಕಾರು 90 hp ಪವರ್ ಸಾಮರ್ಥ್ಯ ಹೊಂದಿದೆ. ಕಾರಿನ ಕರ್ಬ್ ತೂಕ 1.5 ಟನ್. ನೂತನ ಕಾರು ಸಂಪೂರ್ಣ ಚಾರ್ಜ್‌ಗೆ  300 ರಿಂದ 350km ಮೈಲೇಜ್ ನೀಡಲಿದೆ. ಈ ಕಾರಿನ ಬೆಲೆ 14 ರಿಂದ 16 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. 
 

Follow Us:
Download App:
  • android
  • ios