ಮುಂಬೈ(ಜ.09): ಗ್ರೇಟರ್ ನೋಯ್ಡಾದಲ್ಲಿ ನಡೆಯಲಿರುವ ಮೋಟಾರು ಶೋನಲ್ಲಿ ಟಾಟಾ ಮೋಟಾರ್ಸ್ ದಾಖಲೆ ಬರೆಯಲು ಸಜ್ಜಾಗಿದೆ. 26 ವಾಹನಗಳು ಈ ಅಟೋ ಎಕ್ಸ್ಪೋದಲ್ಲಿ ಅನಾವರಣಗೊಳ್ಳಲಿದೆ. ಒಂದೇ ಬಾರಿಗೆ ಇಷ್ಟೊಂದು ವಾಹನ ಪರಚಯಿಸುತ್ತಿರುವ ಟಾಟಾ, ಇತರ ಆಟೋಮೊಬೈಲ್ ಕಂಪನಿಗಳಿಗೆ ನಡುಕು ಹುಟ್ಟಿಸಿದೆ.

ಇದನ್ನೂ ಓದಿ: ಜ.22ಕ್ಕೆ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ; ಬುಕಿಂಗ್ ಬೆಲೆ 21 ಸಾವಿರ!.

ಟಾಟಾ ಮೋಟಾರ್ಸ್‌ನ 4 ವಾಹನಗಳು ವಿಶ್ವದಲ್ಲೇ ಅನಾವರಣಗೊಳ್ಳಲಿದೆ. ಇನ್ನು 14 ವಾಣಿಜ್ಯ ವಾಹನಗಳು ಹಾಗೂ 12 ಪ್ಯಾಸೇಂಜರ್ ವಾಹನಗಳು ನೋಯ್ಡಾ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಎಲ್ಲಾ ವಾಹನಗಳು ಬಿಎಸ್6 ಎಂಜಿನ್ ಹೊಂದಿದೆ.

ಇದನ್ನೂ ಓದಿ: ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!

7 ಸೀಟರ್ ಹ್ಯಾರಿಯರ್, ಸಣ್ಣ SUV ಕಾರು, ನೆಕ್ಸಾನ್ ಎಲೆಕ್ಟ್ರಿಕ್ ಕಾರು ಸೇರಿದಂತೆ ಒಟ್ಟು 26 ಕಾರುಗಳು ಆಟೋ ಶೋನಲ್ಲಿ ಪ್ರದರ್ಶನದಲ್ಲಿ ಗಮನಸೆಳೆಯಲಿದೆ. ನೂತನ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ನಿರ್ಮಾಣ ಮಾಡಲಾಗಿದೆ ಎಂದು ಟಾಟಾ ಮೋಟಾರ್ಸ್ ಸಿಇಓ ಹಾಗೂ ಎಂಡಿ ಗ್ವೆಂಟರ್ ಬಟ್ಸೆಚೆಕ್ ಹೇಳಿದ್ದಾರೆ.

ಇದನ್ನೂ ಓದಿ: ಟಾಟಾ ಅಲ್ಟ್ರೋಝ್ to ಡಿಫೆಂಡರ್: 2020ರಲ್ಲಿ ಬಿಡುಗಡೆಯಾಗಲಿರುವ ಕಾರು ಲಿಸ್ಟ್!

ಜನವರಿ 22 ರಂದು ಟಾಟಾ ಮೋಟಾರ್ಸ್ ಕಂಪನಿಯ ಟಾಟಾ ಅಲ್ಟ್ರೋಝ್ ಕಾರು ಬಿಡುಗಡೆ ಮಾಡುತ್ತಿದೆ. ಮಾರುತಿ ಬಲೆನೋ, ಹ್ಯುಂಡೈ ಐಟಿ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಅಲ್ಟ್ರೋಝ್ ಕಾರು ಬಿಡುಗಡೆಯಾಗುತ್ತಿದೆ.