BS6 ಎಂಜಿನ್ ಇನ್ನೋವಾ ಕ್ರಿಸ್ಟಾ ಬುಕಿಂಗ್ ಆರಂಭ!

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರು ಸದ್ಯ MPV ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಹೆಚ್ಚಿನ ಪ್ರಯಾಣಿಕರು ಇಷ್ಟಪಡುವ ಕಾರಾಗಿರುವ ಇನ್ನೋವಾ ಇದೀಗ BS6 ಎಂಜಿನ್ ಅಪ್‌ಗ್ರೇಡ್ ಮಾಡಿದೆ. ನೂತನ ಕಾರಿನ ಬುಕಿಂಗ್ ಆರಂಭಗೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ

BS6 engine toyota innova mpv car bookings open

ನವದೆಹಲಿ(ಜ.09):  ಟೊಯೋಟ ಕಂಪನಿಯ ಅತ್ಯಂತ ಯಶಸ್ವೀ ಕಾರು ಇನ್ನೋವಾ. ಈ ಇನೋವಾ ಕಾರು ಹೊಸ ಅವತಾರದಲ್ಲಿ ಇನೋವಾ ಕ್ರಿಸ್ಟಾ ಆಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನೋವಾ ಕ್ರಿಸ್ಟಾಕೂಡ ಭಾರಿ ಜನಪ್ರೀತಿ ಗಳಿಸಿದೆ. ಇದೀಗ ಇನೋವಾ ಕ್ರಿಸ್ಟಾ ಕೂಡ BS6 ಎಂಜಿನ್ ಕಾರಾಗಿ ಅಪ್‌ಗ್ರೇಡ್ ಮಾಡಲಾಗಿದೆ. 

BS6 engine toyota innova mpv car bookings open

ಇದನ್ನೂ ಓದಿ: ಕಡಿಮೆ ಬೆಲೆ; ಟಾಟಾ ಅಲ್ಟ್ರೋಝ್ ಎಲೆಕ್ಟ್ರಿಕ್ ಕಾರು ಲಾಂಚ್ ಡೇಟ್ ಬಹಿರಂಗ!.

ಟೊಯೋಟ ಕಂಪನಿ ಬಿಎಸ್‌ 6 ಇಂಜಿನ್‌ನ ಇನ್ನೋವಾ ಕ್ರಿಸ್ಟಾಸಿದ್ಧಗೊಳಿಸಿದ್ದು, ಬುಕಿಂಗ್‌ ಆರಂಭಗೊಂಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ನಲ್ಲಿ ಎಟಿ, ಎಂಟಿ ಎರಡೂ ಮಾದರಿಗಳಲ್ಲಿ ಲಭ್ಯ ಇರುವ ಇನ್ನೋವಾ ಕ್ರಿಸ್ಟಾಆರಂಭಿಕ ಬೆಲೆ ರು.15.36 ಲಕ್ಷ. ಹೈ ಎಂಡ್‌ ಕಾರಿಗೆ 24.06 ಲಕ್ಷ ರು. ಬೆಲೆ ಇದೆ. 

BS6 engine toyota innova mpv car bookings open

ಇದನ್ನೂ ಓದಿ: ಮಂಜು ಮುಸುಕಿದ ದಾರಿಯಲ್ಲಿ ಡ್ರೈವಿಂಗ್; 5 ತಪ್ಪು ಮಾಡದಿರಿ!.

ಬಿಎಸ್‌ 6 ಇಂಜಿನ್‌ನ ಇನ್ನೋವಾ ಕ್ರಿಸ್ಟಾ ಪೆಟ್ರೋಲ್ ಕಾರಿನ ಬೆಲೆ 11,000 ರೂಪಾಯಿಂದ 43,000 ರೂಪಾಯಿವರೆಗೆ ಏರಿಕೆಯಾಗಿದೆ. ಇನ್ನು ಡೀಸೆಲ್ ಎಂಜಿನ್ ಕಾರುಗಳಿಗೆ 39,000 ರೂಪಾಯಿಂದ 1.12 ಲಕ್ಷ ರೂಪಾಯಿ ಏರಿಕೆಯಾಗಿದೆ. ವೆಹಿಕಲ್‌ ಸ್ಟೆಬಿಲಿಟಿ ಕಂಟ್ರೋಲ್‌, ಹಿಲ್‌ ಅಸಿಸ್ಟ್‌ ಕಂಟ್ರೋ, ಎಮರ್ಜೆನ್ಸಿ ಬ್ರೇಕ್‌ ಸಿಗ್ನಲ್‌ ಹೊಂದಿರುವ ಈ ಕಾರು ಫೆಬ್ರವರಿಯಿಂದ ಬುಕ್‌ ಮಾಡಿದವರ ಮನೆ ಬಾಗಿಲಿಗೆ ಬರಲಿದೆ.  
 

Latest Videos
Follow Us:
Download App:
  • android
  • ios