ರೆನಾಲ್ಟ್ ಟ್ರೈಬರ್ ಕಾರಿನ ಟೀಸರ್ ಬಿಡುಗಡೆಯಾಗಿದೆ. ರೆನಾಲ್ಟ್ ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಗೆ ದೊಡ್ಡ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ನೂತನ ಕಾರಿನ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ನವದೆಹಲಿ(ಜೂ.17): ರೆನಾಲ್ಟ್ ಇಂಡಿಯಾ ನೂತನ ಟ್ರೈಬರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಇದೀಗ ಕಾರಿನ ಟೀಸರ್ ಬಿಡುಗಡೆ ಮಾಡಿರುವ ರೆನಾಲ್ಟ್, ಭಾರತದ ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ರೆನಾಲ್ಟ್ ಕ್ವಿಡ್ ಬಿಡುಗಡೆ ಮಾಡಿ ಮಾರಾಟದಲ್ಲಿ ದಾಖಲೆ ಬರೆದ ರೆನಾಲ್ಟ್ ಇದೀಗ ಕ್ವೀಡ್ ರೀತಿಯಲ್ಲೇ ಕಡಿಮೆ ಬೆಲೆ ಗರಿಷ್ಠ ಉಪಯೋಗವಾಗೋ ಟ್ರೈಬರ್ ಕಾರು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಟಾಟಾ ಅಲ್ಟ್ರೋಝ್ ಕಾರಿನ ಟೀಸರ್ ರಿಲೀಸ್-ಮಾರುತಿ ಬಲೆನೋ, ಐ20ಗೆ ಪೈಪೋಟಿ!
ನೂತನ ಟ್ರೈಬರ್ ಕಾರು ಮಾರುತಿ ಎರ್ಟಿಗಾ ಹಾಗೂ ಡಾಟ್ಸನ್ ಗೋ ಪ್ಲಸ್ ಕಾರಿಗೆ ಪೈಪೋಟಿಯಾಗಿ ರಸ್ತೆಗಳಿಯುತ್ತಿದೆ. ಇದರ ವಿಶೇಷ ಅಂದರೆ ಕಡಿಮೆ ಬೆಲೆ. ಕ್ವಿಡ್ ರೀತಿಯಲ್ಲೇ ಕಡಿಮೆ ಬೆಲೆಗೆ ರೆನಾಲ್ಟ್ ಟ್ರೈಬರ್ ಕಾರು ಮಾರುಕಟ್ಟೆ ಪ್ರವೇಶಿಸಲಿದೆ. ಈ ಮೂಲಕ ಇತರ ಕಾಂಪಾಕ್ಟ್ ಕಾರುಗಳಿಗೆ ಹೋಲಿಸಿದರೆ ಕಡಿಮೆ ಬೆಲೆಗೆ ಈ ಕಾರು ಖರೀದಿಸಬಹುದು.
ಇದನ್ನೂ ಓದಿ: ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!
ಸದ್ಯ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಟ್ರೈಬರ್ ಕಾರಿನ ಮುಂಭಾಗ ಹಾಗೂ ಟಾಪ್ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಹಾಗೂ LED DRL ಹೊಂದಿದೆ. ಇನ್ನು ಎಬಿಎಸ್, ಇಬಿಡಿ , ಡ್ಯುಯೆಲ್ ಏರ್‌ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್ ಸೀಟ್ ಬೆಲ್ಟ್ ರಿಮೈಂಡರ್ ಹಾಗೂ ಸ್ಪೀಡ್ ಅಲರ್ಟ್ ಎಲ್ಲಾ ಮಾಡೆಲ್ ಕಾರುಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!
ನೂತನ ಕಾರಿ ಬೆಲೆ 5.5 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಹಲವು ಫೀಚರ್ಸ್‌ಗಳನ್ನು ಸೇರಿಸಲಾಗಿದೆ. ಶೀಘ್ರದಲ್ಲೇ ರೆನಾಲ್ಟ್ ಟ್ರೈಬರ್ ಬಿಡುಗಡೆಯಾಗಲಿದೆ.
