ಟಾಟಾ ಅಲ್ಟ್ರೋಝ್ ಕಾರಿನ ಟೀಸರ್ ರಿಲೀಸ್-ಮಾರುತಿ ಬಲೆನೋ, ಐ20ಗೆ ಪೈಪೋಟಿ!
ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಟಾಟಾ ಅಲ್ಟ್ರೋಝ್ ಕಾರಿನ ಟೀಸರ್ ರಿಲೀಸ್ ಆಗಿದೆ. ಮಾರುತಿ ಬಲೆನೋ, ಹ್ಯುಂಡೈ ಐ20, ಹೊಂಡಾ ಜಾಝ್ ಕಾರಿಗೆ ಪ್ರತಿಸ್ಪರ್ಧಿಯಾಗಿರುವ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ.
ನವದೆಹಲಿ(ಜೂ.14): ಮಾರುತಿ ಬಲೆನೋ, ಹ್ಯುಂಡೈ ಐ20 ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಮೋಟಾರ್ಸ್ ಅಲ್ಟ್ರೋಝ್ ಕಾರು ಬಿಡುಗಡೆ ಮಾಡುತ್ತಿದೆ. ಬಹುನಿರೀಕ್ಷಿತ ಹ್ಯಾಚ್‌ಬ್ಯಾಕ್ ಕಾರಿನ ಟೀಸರ್ ಬಿಡುಗಡೆಯಾಗಿದೆ. 2018ರ ಆಟೋ ಎಕ್ಸ್ಪೋದಲ್ಲಿ ಪರಿಚಯಿಸಲಾದ ಅಲ್ಟ್ರೋಝ್ ಕಾರು ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.
ಇದನ್ನೂ ಓದಿ: ಸ್ವಂತ ಕಾರನ್ನೇ ಕದ್ದು ಅರೆಸ್ಟ್ ಆದ ಉದ್ಯಮಿ-ಕಾರಣ ವಿಚಿತ್ರ!
ಟೀಸರ್‌ನಲ್ಲಿ ಟೆಸ್ಟಿಂಗ್ ಕಾರನ್ನು ತೋರಿಸಲಾಗಿದೆ. ಅಂತಿಮ ಹಂತದಲ್ಲಿ ಅಲ್ಟ್ರೋಝ್ ಔಟ್ ಲುಕ್ ಸ್ಕೆಚ್ ನೀಡಲಾಗಿದ್ದು, ಕುತೂಹವನ್ನು ಇಮ್ಮಡಿಗೊಳಿಸಿದೆ. ಆಕರ್ಷಕ ವಿನ್ಯಾಸ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಲ್ಟ್ರೋಝ್ ಕಾರು ಇದೀಗ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.
Altroz is all ready to set the streets ablaze with enhanced capabilities and exceptional handling for taking on the roads that test your limits. Get ready to be stunned by the Altroz. Coming soon! #UrbanCarRedefined
— Tata Motors (@TataMotors) June 14, 2019
Click on the link to know more https://t.co/ip1msiJ7QT pic.twitter.com/JD04OX7dXO
ಇದನ್ನೂ ಓದಿ: ತಯಾರಾದ ಕಾರು, ಬೈಕ್ ಕೊಳ್ಳುವವರೇ ಇಲ್ಲ!
ಟಾಟಾ ಅಲ್ಟ್ರೋಝ್ ಕಾರು BS-VI ಎಮಿಶನ್ ಎಂಜಿನ್ ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ವೇರಿಯೆಂಟ್ ಲಭ್ಯವಿದೆ. ಇನ್ನು ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಕೂಡ ಲಭ್ಯವಿದೆ. ಪೆಟ್ರೋಲ್ ಎಂಜಿನ್ 1.2 ಲೀಟರ್ ಹೊಂದಿದ್ದು, 85hp ಪವರ್ ಉತ್ಪಾದಿಸಲಿದೆ. ಡೀಸೆಲ್ ಎಂಜಿನ್ ಕಾರು 1.5 ಲೀಟರ್ ಟರ್ಬೋ ಆಯ್ಕೆ ಹೊಂದಿದೆ. ಇನ್ನು 1.2 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಕೂಡ ಲಭ್ಯವಿದೆ.