ನವದೆಹಲಿ(ಸೆ.12): ರೆನಾಲ್ಟ್ ಇಂಡಿಯಾ ವಿಶೇಷ ಡಿಸ್ಕೌಂಟ್ ಆಫರ್ ಘೋಷಿಸಿದೆ. BS6 ವಾಹನಗಳ ಮೇಲೆ ಈ ಆಫರ್ ನೀಡಲಾಗಿದೆ. ಕಳೆದ ತಿಂಗಳು ರೆನಾಲ್ಟ್ ಮಾರಾಟದಲ್ಲಿ ಶೇಕಡಾ 41 ರಷ್ಟು ಏರಿಕೆಯಾಗಿದೆ. ಇದೀಗ ಡಿಸ್ಕೌಂಟ್ ಆಫರ್ ಮೂಲಕ ಹಬ್ಬದ ವೇಳೆ ಮಾರಾಟದಲ್ಲಿ ಮತ್ತಷ್ಟು ಏರಿಕೆ ಕಾಣಲು ರೆನಾಲ್ಟ್ ಇಂಡಿಯಾ ಮುಂದಾಗಿದೆ.

 ಮಾರುತಿ ಬ್ರೆಜಾಗೆ ಪ್ರತಿಸ್ಪರ್ಧಿಯಾಗಿ ಬರುತ್ತಿದೆ ನಾಲ್ಕು SUV ಕಾರು!

ರೆನಾಲ್ಟ್ ಡಸ್ಟರ್ BS6 ಡಸ್ಟರ್, ಕ್ವಿಡ್ ಹಾಗೂ ಟ್ರೈಬರ್ ಕಾರಿನ ಮೇಲೆ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಇದರ ಜೊತೆಗೆ ಸರ್ವೀಸ್ ಬೆನಿಫಿಟ್ ಕೂಡ ನೀಡಲಾಗಿದೆ. ಈ ಮೂಲಕ ಒಟ್ಟು 92,000 ರೂಪಾಯಿ ಡಿಸ್ಕೌಂಟ್ ಪಡೆಯಬಹುದು. 

ಡಸ್ಟರ್ 1.5 ಲೀಟರ್ ಪೆಟ್ರೋಲ್ ವೇರಿಯೆಂಟ್ ಕಾರಿನ ಮೇಲೆ ಒಟ್ಟು 70,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 25,000 ರೂಪಾಯಿ, ಲೋಯಲ್ಟಿ ಬೋನಸ್ 25,000 ರೂಪಾಯಿ ಹಾಗೂ ಎಕ್ಸ್‌ಚೇಂಜ್ ಬೋನಸ್ 20,000 ರೂಪಾಯಿ ನೀಡಲಾಗಿದೆ. 1.4 ಲೀಟರ್ ಡಸ್ಟರ್ ಕಾರಿನ ಮೇಲೆ ಲೋಯಲ್ಟಿ ಬೆನಿಫಿಟ್ 20,000 ರೂಪಾಯಿ, 20,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಹಾಗೂ 3 ವರ್ಷ ಅಥವಾ 50,000 ಕಿಲೋಮೀಟರ್ ಸರ್ವೀಸ್ ಪ್ಯಾಕೇಜ್ ಕೂಡ ಸಿಗಲಿದೆ.

ರೆನಾಲ್ಟ್ ಟ್ರೈಬರ್ ಕಾರಿನ ಮೇಲೆ ಗರಿಷ್ಠ 30,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಇದರಲ್ಲಿ ಎಕ್ಸ್‌ಚೇಂಜ್ ಬೆನಿಫಿಟ್ 20,000 ರೂಪಾಯಿ ಹಾಗೂ ಲೋಯಲ್ಟಿ ಬೆನಿಫಿಟ್ 10,000 ರೂಪಾಯಿ.  ಕ್ವಿಡ್ ಕಾರಿನ ಮೇಲೆ ಒಟ್ಟು 35,000 ರೂಪಾಯಿ ಡಿಸ್ಕೌಂಟ್ ನೀಡಲಾಗಿದೆ. ಕ್ಯಾಶ್ ಡಿಸ್ಕೌಂಟ್ 10,000 ರೂಪಾಯಿ, ಎಕ್ಸ್‌ಚೇಂಜ್ ಬೋನಸ್ 15,000 ರೂಪಾಯಿ  ಹಾಗೂ ಲೋಯಲ್ಟಿ ಬೋನಸ್ 10,000 ರೂಪಾಯಿ ನೀಡಲಾಗಿದೆ.